'ಅರ್ಜುನ್ ಗೌಡ'ಗಾಗಿ ಪ್ರಜ್ವಲ್ ದೇವರಾಜ್ ವಿಶೇಷ ಸ್ಟಂಟ್ಸ್

ಕನ್ನಡದ ಪ್ರಸಿದ್ದ ನಾಯಕ ನಟ ಡೈನಾಮಿಕ್ ಹೀರೋ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಸಹ ತಮ್ಮ ಚಿತ್ರಗಳ ಮೂಲಕ ಆಕ್ಷನ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ.

Published: 01st August 2019 12:00 PM  |   Last Updated: 01st August 2019 11:41 AM   |  A+A-


Prajwal Devaraj

ಪ್ರಜ್ವಲ್ ದೇವರಾಜ್

Posted By : RHN RHN
Source : The New Indian Express
ಕನ್ನಡದ ಪ್ರಸಿದ್ದ ನಾಯಕ ನಟ ಡೈನಾಮಿಕ್ ಹೀರೋ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಸಹ ತಮ್ಮ ಚಿತ್ರಗಳ ಮೂಲಕ ಆಕ್ಷನ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಇದನ್ನು ಚೆನ್ನಾಗಿ ಅರಿತಿರುವ "ಅರ್ಜುನ್ ಗೌಡ" ಚಿತ್ರ ನಿರ್ದೇಶಕ ಈ ನಾಯಕನನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ತೋರಿಸಲು ತಮ್ಮ ಚಿತ್ರದಲ್ಲಿ ಒಂದು ವಿಶೇಷ ಇಂಟ್ರಡ್ಯೂಸಿಂಗ್ ಸಾಂಗ್ ತಯಾರಿಸಿದ್ದಾರೆ. ಸ್ಟಂಟ್ ಮಾಸ್ಟರ್ ಮಾಸ್ ಮಧಾ ಹಾಗೂ ನೃತ್ಯ ಸಂಯೋಜಕ ಮೋಹನ್ ಅವರೊಡನೆ ನಿರ್ದೇಶಕ ಲಕ್ಕಿ ಶಂಕರ್ ಈ ಹಾಡಿನ ಚಿತ್ರೀಕರಣದಲ್ಲಿದ್ದು ಪತ್ರಿಕೆಗೆ ಹಾಡಿನ ಕೆಲ ಎಕ್ಸ್ ಕ್ಲೂಸಿವ್ ದೃಶ್ಯಗಳ ಚಿತ್ರಗಳು ಲಭ್ಯವಾಗಿದೆ.

ಒಟ್ಟಾರೆ ನಾಲ್ಕು ನಿಮಿಷಗಳ ಹಾಡಿನಲ್ಲಿ ಪ್ರಜ್ವಲ್ ಸ್ಟಂಟ್ಸ್ ಮಾಡುತ್ತಲೇ ಡ್ಯಾನ್ಸ್ ಮಾಡುತ್ತಾರೆ.ಹಾಡನ್ನು ಒಳಾಂಗಣ ಹಾಗೂ ಹೊರಾಂಗಣಗಳೆರಡಲ್ಲಿಯೂ ಚಿತ್ರೀಕರಿಸಲಾಗಿದ್ದು ಹಾಡಿನ ದೃಶ್ಯಗಳ ಹಿನ್ನೆಲೆಯಲ್ಲಿ 25 ಬೈಕ್‌ ಸವಾರರು ಸ್ಟಂಟ್ಸ್ ಮಾಡುತ್ತಾರೆ. ಜತೆಗೆ ಅನೇಕ ಫೈತರ್ ಗಲೂ ಇದ್ದಾರೆ. ಈ ಹಾಡು ಇಡೀ ಚಿತ್ರದಲ್ಲಿ ಬರುವ ಪ್ರಮುಖ ಭಾಗಗಳಲ್ಲಿ ಒಂದೆನಿಸಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ.

ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಆ.9ರಂದು ಚಿತ್ರದ ಟೀಸರ್ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.ರಾಮು ನಿರ್ಮಾಣದ ಈಚಿತ್ರದಲ್ಲಿ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp