'ಕುರುಕ್ಷೇತ್ರ' ಕೇವಲ ಚಿತ್ರವಲ್ಲ, ಇದು ಈ ಪೀಳಿಗೆಗೆ ಹಬ್ಬವಾಗಲಿದೆ; ನಿರ್ದೇಶಕ ನಾಗಣ್ಣ

ಕುರುಕ್ಷೇತ್ರದಂತಹ ಪೌರಾಣಿಕ ಕಥೆಯ ಚಿತ್ರ ಮಾಡಲು ಅವಕಾಶ ಸಿಕ್ಕಿದ್ದು ಅತ್ಯಂತ ಹೆಮ್ಮೆಯ ಸಂಗತಿ ಎನ್ನುತ್ತಾರೆ ...
ಕುರುಕ್ಷೇತ್ರ ಚಿತ್ರದ ದೃಶ್ಯ
ಕುರುಕ್ಷೇತ್ರ ಚಿತ್ರದ ದೃಶ್ಯ
ಕುರುಕ್ಷೇತ್ರದಂತಹ ಪೌರಾಣಿಕ ಕಥೆಯ ಚಿತ್ರ ಮಾಡಲು ಅವಕಾಶ ಸಿಕ್ಕಿದ್ದು ಅತ್ಯಂತ ಹೆಮ್ಮೆಯ ಸಂಗತಿ ಎನ್ನುತ್ತಾರೆ ನಿರ್ದೇಶಕ ನಾಗಣ್ಣ. 
3-ಡಿ ಆವೃತ್ತಿಯಲ್ಲಿ ತೆರೆ ಮೇಲೆ ಬರುತ್ತಿರುವ ಮೊದಲ ಪೌರಾಣಿಕ ಚಲನಚಿತ್ರ ಎನ್ನುವುದು ಚಿತ್ರತಂಡಕ್ಕೆ ಮತ್ತು ಕನ್ನಡಿಗರಿಗೆ ಮತ್ತೊಂದು ಹೆಮ್ಮೆಯ ವಿಷಯ. ಇದಕ್ಕೆ ನಿರ್ದೇಶನ ಮಾಡುವ ಅವಕಾಶ ನನಗೆ ಸಿಕ್ಕಿದ್ದು ದೇವರ ದಯೆ, ಈ ಸಂದರ್ಭದಲ್ಲಿ ನಾನು ನಿರ್ಮಾಪಕ ಮುನಿರತ್ನ ಅವರಿಗೂ ಧನ್ಯವಾದ ಹೇಳುತ್ತೇನೆ ಎಂದರು ನಾಗಣ್ಣ.
ನಿರ್ಮಾಪಕರು ನನ್ನ ಹಿಂದಿನ ಸಂಗೊಳ್ಳಿ ರಾಯಣ್ಣ ಚಿತ್ರವನ್ನು ನೋಡಿದ್ದರು. ಹೀಗಾಗಿ ನನ್ನ ಮೇಲೆ ನಂಬಿಕೆಯಿಟ್ಟು ಈ ಸಿನಿಮಾ ತಯಾರಿಸಲು ಮುಂದಾದರು. ಹಲವು ಕಾರಣಗಳಿಂದ ಚಿತ್ರ ಬಿಡುಗಡೆಗೆ ವಿಳಂಬವಾದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರವನ್ನು ಕಲಾವಿದರು, ತಂತ್ರಜ್ಞರ 2 ವರ್ಷಗಳ ಸತತ ಪ್ರಯತ್ನ ನಿಷ್ಪ್ರಯೋಜಕವಾಗುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದರು. 
ಕುರುಕ್ಷೇತ್ರ ಕೇವಲ ಸಿನಿಮಾವಲ್ಲ, ಇಂದಿನ ಜನಾಂಗದವರಿಗೆ ಇದು ಉತ್ಸವವಾಗಲಿದೆ. ಜಾನಪದ ಸಿನೆಮಾ ಮತ್ತು ಪುರಾಣಗಳ ಮೇಲಿನ ಉತ್ಸಾಹವು ಈ ಮಹತ್ತರವಾದ ಯೋಜನೆಯನ್ನು ನಿರ್ವಹಿಸಲು ಸಹಾಯ ಮಾಡಿತು ಎಂದರು. 
ದಕ್ಷಿಣ ಭಾರತದ ಎಲ್ಲಾ 4 ಭಾಷೆಗಳಲ್ಲಿ ಏಕಕಾಲದಲ್ಲಿ ಆಗಸ್ಟ್ 9ರಂದು ಚಿತ್ರ ಬಿಡುಗಡೆಯಾಗಲಿದೆ. ಜೆ ಕೆ ಭೈರವಿ ಅವರ ಚಿತ್ರಕಥೆ, ವಿ ಹರಿಕೃಷ್ಣ ಸಂಗೀತ ನಿರ್ದೇಶನ, ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ಜಯಣ್ಣ ವಿನ್ಸೆಂಟ್ ಅವರ ಛಾಯಾಗ್ರಹಣ,ಸಂಗೀತ ನಿರ್ದೇಶಕರಾದ ಕೆ ಕಲ್ಯಾಣ್ ಮತ್ತು ಸಹ ನಿರ್ದೇಶಕರು ಚಿತ್ರಕ್ಕೆ ಜತೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com