ಗುಬ್ಬಿಮೇಲೆ ಬ್ರಹ್ಮಾಸ್ತ್ರ ಸಿನಿಮಾ ರಿಮೇಕ್ ರೈಟ್ಸ್ ಗೆ ಭಾರೀ ಡಿಮ್ಯಾಂಡ್!

ರಾಜ್‌ ಬಿ. ಶೆಟ್ಟಿ ನಟನೆಯ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದ ಟೇಲರ್‌ ರಿಲೀಸ್‌ ಆಗಿದ್ದು, ಆಗಸ್ಟ್ 15 ರಿಂದು ಸಿನಿಮಾ ಬಿಡುಗಡೆಯಾಗಲಿದೆ.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪೋಸ್ಟರ್
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪೋಸ್ಟರ್
ರಾಜ್‌ ಬಿ. ಶೆಟ್ಟಿ ನಟನೆಯ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದ ಟೇಲರ್‌ ರಿಲೀಸ್‌ ಆಗಿದ್ದು, ಆಗಸ್ಟ್ 15 ರಿಂದು ಸಿನಿಮಾ ಬಿಡುಗಡೆಯಾಗಲಿದೆ.
ಟೀಸರ್ ಅನ್ನು ಆನ್‌ಲೈನ್‌ನಲ್ಲಿ ಒಂದೇ ದಿನಕ್ಕೆ ಐದೂವರೆ ಲಕ್ಷದಷ್ಟು ಮಂದಿ ವೀಕ್ಷಿಸಿದ್ದಾರೆ. ಟ್ರೇಲರ್‌ನಲ್ಲಿ ಇರುವ ಕಾಮಿಡಿ ಪಂಚಿಂಗ್‌ನಿಂದ ಇದು ಎಲ್ಲರ ಗಮನ ಸೆಳೆಯುತ್ತಿದ್ದು, 
ಸುಜಯ್‌ ಶಾಸ್ತ್ರಿ ನಿರ್ದೇಶನದ ಈ ಚಿತ್ರದಲ್ಲಿ ಕವಿತಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ಪಕ್ಕಾ ಕಾಮಿಡಿ ಸಿನಿಮಾ ಎನ್ನುವುದನ್ನು ಟ್ರೇಲರ್‌ ಹೇಳುತ್ತಿದೆ. ಪ್ರಮೋದ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಾಫ್ಟ್‌ವೇರ್‌ ಯುವಕನಾಗಿ ರಾಜ್‌ ಬಿ.ಶೆಟ್ಟಿ ನಟಿಸಿದ್ದು, ನಾಲ್ವರು ಸ್ನೇಹಿತರ ಸ್ಟೋರಿ ಚಿತ್ರದಲ್ಲಿದೆ. ವಿಭಿನ್ನ ಗೆಟಪ್‌ಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. 
ಇನ್ನೂ ಸಿನಿಮಾ ರಿಮೇಕ್ ರೈಟ್ಸ್ ಗಾಗಿ ಹಲವು ಮಂದಿ ಮುಗಿ ಬಿದ್ದಿದ್ದಾರೆ, ಹಲವು ಬಾಲಿವುಡ್ ನ ಹಲವು ನಿರ್ಮಾಪಕರು ರಿಮೇಕ್ ರೈಟ್ಸ್ ಪಡೆಯಲು ಆಸಕ್ತರಾಗಿದ್ದಾರೆ, ಆದರೆ ಸಿನಿಮಾ ತಯಾರಕರು ಸಿನಿಮಾ ರಿಲೀಸ್ ಮಾಡುವ ಸಿದ್ಧತೆಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com