ರಾಜ್ಯದಲ್ಲಿ ಪ್ರವಾಹ: ಸಂತ್ರಸ್ಥರ ನೆರವಿಗೆ ನಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್

ಉತ್ತರ ಕರ್ನಾಟಕ ಹಾಗೂ ಮಲೆನಾಡಿನಲ್ಲಿ ಭೀಕರ ಮಳೆ ಮತ್ತು ಪ್ರವಾಹ ಹಿನ್ನೆಲೆಯಲ್ಲಿ ಪ್ರವಾಹದ ಹೊಡೆತಕ್ಕೆ ಸಿಕ್ಕವರಿಗೆ ಆಸರೆಯಾಗಿ ನಿಲ್ಲುವುದು ಎಲ್ಲರ ಕರ್ತವ್ಯ ಎಂದು ನಟ ದರ್ಶನ್ ಹೇಳಿದ್ದಾರೆ.

Published: 08th August 2019 12:00 PM  |   Last Updated: 08th August 2019 11:35 AM   |  A+A-


Darshan

ದರ್ಶನ್

Posted By : RHN RHN
Source : UNI
ಉತ್ತರ ಕರ್ನಾಟಕ ಹಾಗೂ ಮಲೆನಾಡಿನಲ್ಲಿ ಭೀಕರ ಮಳೆ ಮತ್ತು ಪ್ರವಾಹ ಹಿನ್ನೆಲೆಯಲ್ಲಿ ಪ್ರವಾಹದ ಹೊಡೆತಕ್ಕೆ ಸಿಕ್ಕವರಿಗೆ ಆಸರೆಯಾಗಿ ನಿಲ್ಲುವುದು ಎಲ್ಲರ ಕರ್ತವ್ಯ ಎಂದು ನಟ ದರ್ಶನ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಮಾನಿಗಳು ಹಾಗೂ ರಾಜ್ಯದ ಜನತೆಗೆ ಮನವಿ ಮಾಡಿರುವ ನಟ ದರ್ಶನ್, ನಮ್ಮ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಹಲವು ಹಳ್ಳಿಗಳು ಪ್ರವಾಹದ ಅಬ್ಬರಕ್ಕೆ ನೀರಿನಲ್ಲಿ ಮುಳುಗಿ ಹೋಗಿವೆ. ಅಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ. ಎಲ್ಲರೂ ತಮ್ಮ ಕೈಲಾದ ಸೇವೆಯನ್ನು ಅವರಿಗೆ ಮಾಡಬೇಕಾಗಿ ವಿನಂತಿಸುತ್ತೇನೆ ಎಂದು ಟ್ವೀಟ್​​​ ಮೂಲಕ ಮನವಿ ಮಾಡಿದ್ದಾರೆ.
ಪ್ರವಾಹ ಸಂತ್ರಸ್ತರಿಗೆ ಅಗತ್ಯವಿರುವ ಪಂಚೆ ಸೀರೆ, ಟೀ ಶರ್ಟ್, ಒಳ ಉಡುಪುಗಳು, ಕುಡಿಯುವ ನೀರು , ಬೆಡ್ ಶೀಟ್ , ಜಾಕೆಟ್ ಗಳು, ಅಕ್ಕಿ ಬೇಳೆ, ಅಡುಗೆ ಎಣ್ಣೆ, ಸಿದ್ಧ ಆಹಾರ ಪೊಟ್ಟಣಗಳು, ಬಿಸ್ಕೆಟ್ಸ್, ಚಪ್ಪಲಿಗಳು, ಔಷಧಿಗಳು , ಟೂತ್ ಪೇಸ್ಟ್ , ಟೂತ್ ಬ್ರಶ್ ಗಳನ್ನು ಸಂಗ್ರಹಿಸಿ ದರ್ಶನ್ ಬೆಂಬಲಿಗರಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೇಸ್ ಬುಕ್ ಬರಹದ ಪೂರ್ಣ ಪಾಠ ಹೀಗಿದೆ-

ಉತ್ತರ ಕರ್ನಾಟಕದಲ್ಲಿ ಪ್ರವಾಹದ ರಭಸಕ್ಕೆ ತುತ್ತಾಗಿರುವ ಹಲವು ಹಳ್ಳಿಗಳ ಜನರಿಗೆ ಮೂಲಭೂತ ಸಾಮಗ್ರಿಗಳ ಅವಶ್ಯಕತೆ ಇದೆ. ನಮ್ಮ ಡಿ ಕಂಪನಿ ಬಳಗದಿಂದಲೂ ಸಹ ನಮ್ಮ ಕೈಲಾದ ಅಳಿಲುಸೇವೆಯನ್ನು ಮುಂದುವರೆಸೋಣ. ತಮ್ಮ ಕೈಲಾದ ಸಹಾಯದೊಂದಿಗೆ ಈ ಕಾರ್ಯದಲ್ಲಿ ಭಾಗವಹಿಸಲು ಕೆಳಗಿನ ದೂರವಾಣಿ ನಂ. ಗಳಿಗೆ ಸಂಪರ್ಕಿಸತಕ್ಕದ್ದು.

ಅಗತ್ಯ ವಸ್ತುಗಳು,

ಬಟ್ಟೆಗಳು

ಬೇಳೆ, ಅಕ್ಕಿ, ದವಸ ಧಾನ್ಯಗಳು

ಬಿಸ್ಕತ್ ಮತ್ತು ಸಂರಕ್ಷಿತ ಆಹಾರ ಪದಾರ್ಥಗಳು

ಚಪ್ಪಲಿಗಳು

ರೈನ್ ಕೋರ್ಟ್ ಗಳು

ವಾಟರ್ ಬಾಟಲ್ ಗಳು

ಜನರಲ್ ಮೆಡಿಸನ್ಸ್

ಅಡುಗೆ ಎಣ್ಣೆ

ಟೂತ್ ಬ್ರಷ್, ಟೂತ್ ಪೇಸ್ಟ್, ಸಾಬೂನು

ಟೆಟ್ರಾ ಪ್ಯಾಕ್ ಹಾಲು

ರಾಹುಲ್ 9986103219
ಶರತ್ 9036197999
ಚೇತನ್ 9620629646

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp