ಚಾಲೆಂಜಿಂಗ್ 'ಕುರುಕ್ಷೇತ್ರ'ಕ್ಕೆ ಪ್ರೇಕ್ಷಕರು ಪಿಧಾ: ಚಂದನವನದಲ್ಲಿ ಹೊಸ ಹವಾ ಕ್ರಿಯೇಟ್

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಯನದ 50ನೇ ಚಿತ್ರ ಕುರುಕ್ಷೇತ್ರ ನಿನ್ನೆ ಮಧ್ಯರಾತ್ರಿಯಿಂದಲೇ ಥಿಯೇಟರ್ ಗೆ ಲಗ್ಗೆ ಹಾಕಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Published: 09th August 2019 12:00 PM  |   Last Updated: 09th August 2019 01:52 AM   |  A+A-


Darshan, Nikhil

ದರ್ಶನ್, ನಿಖಿಲ್

Posted By : ABN ABN
Source : Online Desk
ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಯನದ 50ನೇ ಚಿತ್ರ ಕುರುಕ್ಷೇತ್ರ ನಿನ್ನೆ ಮಧ್ಯರಾತ್ರಿಯಿಂದಲೇ ಥಿಯೇಟರ್ ಗೆ ಲಗ್ಗೆ ಹಾಕಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

ಬಹುತಾರಾಗಣ, ಗ್ರಾಫಿಕ್ಸ್, ಬೃಹತ್ ಸೆಟ್ ಗಳು, 3 ಡಿ ತಂತ್ರಜ್ಞಾನದ ಪೌರಾಣಿಕ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಹವಾ ಕಿಯೇಟ್ ಮಾಡಿದೆ. ಎರಡು ವರ್ಷಗಳಿಂದ ಕಾದು ಕುಳಿತಿದ ಪ್ರೇಕ್ಷಕರಿಗೆ ರಸದೌತಣ ಉಣಬಡಿಸುತ್ತಿದೆ.ಕಾಸ್ಟ್ಯೂಮ್ ನಿಂದ ಹಿಡಿದು ಎಲ್ಲದರಲ್ಲಿಯೂ ಚಿತ್ರದಲ್ಲಿ ಶ್ರೀಮಂತಿಕೆ ಎದ್ದುಕಾಣುವಂತಿದೆ.

ಮಹಾಭಾರತ ಯುದ್ಧ ಆಧಾರಿತ ಈ ಚಿತ್ರವನ್ನು ಮುನಿರತ್ನ ನಿರ್ಮಾಣ ಮಾಡಿದ್ದು, ದೇಶ ವಿದೇಶಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ಕನ್ನಡ ಹಾಗೂ ತೆಲುಗಿನಲ್ಲಿ 1 ಸಾವಿರ ಸ್ಕ್ರೀನ್ ಗಳಲ್ಲಿ ಚಿತ್ರ ತೆರೆ ಕಂಡಿದೆ. ಸದ್ಯದಲ್ಲಿಯೇ ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿಯೂ ಚಿತ್ರ ಬಿಡುಗಡೆಯಾಗಲಿದೆ.

ಟ್ವಿಟರ್ ನಲ್ಲಿ ಕುರುಕ್ಷೇತ್ರ ಸಿನಿಮಾಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ರೆಬೆಲ್ ಸ್ಟಾರ್ ಅಂಬರೀಷ್ ಅವರ ಕೊನೆಯ ಚಿತ್ರವಾಗಿರುವ ಕುರುಕ್ಷೇತ್ರ ಸಿನಿಮಾಗಿಂತಲೂ ಭಾವನಾತ್ಮಕವಾಗಿ ಹೆಚ್ಚು ಪ್ರಭಾವ ಬೀರುತ್ತಿದೆ ಎಂದು ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್ ಟ್ವೀಟ್ ಮಾಡಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp