ಕೆಜಿಎಫ್ ಗೀತೆಯೊಂದಕ್ಕೆ ಭರ್ಜರಿ ಸ್ಟೆಪ್ ಹಾಕಿದ ಯಶ್, ರಾಧಿಕಾ ಪಂಡಿತ್!

ಸ್ಯಾಂಡಲ್ ವುಡ್ ನ ಕ್ಯೂಟ್ ದಂಪತಿ  ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್   ಕೆಜಿಎಫ್ ಸಿನಿಮಾದ ಗೀತೆಯೊಂದಕ್ಕೆ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Published: 13th August 2019 11:21 AM  |   Last Updated: 13th August 2019 12:18 PM   |  A+A-


Posted By : Nagaraja AB
Source : Online Desk

ಬೆಂಗಳೂರು:  ಸ್ಯಾಂಡಲ್ ವುಡ್ ನ ಕ್ಯೂಟ್ ದಂಪತಿ  ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್   ಕೆಜಿಎಫ್ ಸಿನಿಮಾದ ಗೀತೆಯೊಂದಕ್ಕೆ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಎಂಗೇಜ್ ಮೆಂಟ್ ವಾರ್ಷಿಕೋತ್ಸವದ ಅಂಗವಾಗಿ ಈ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ರಾಧಿಕಾ ಪಂಡಿತ್‌  ನಿನ್ನೆ  ಈ ಎಕ್ಸ್‌ಕ್ಲೂಸಿವ್‌ ವಿಡಿಯೋ ಎಫ್‌ಬಿಯಲ್ಲಿ ಹಾಕಿದ್ದು, ಇದೀಗ 1 ಸಾವಿರಕ್ಕೂ ಕ್ಕೂ ಹೆಚ್ಚು ಶೇರ್‌ ಕಂಡಿದೆ. 

ಕೆಜಿಎಫ್‌ ಚಾಪ್ಟರ್‌ 1 ಹಿಂದಿ ಚಿತ್ರದಲ್ಲಿರುವ ಗಲಿಗಲಿ ಮೇ.. ಹಾಡಿಗೆ ಯಶ್‌ ರಾಧಿಕಾ ಪಂಡಿತ್‌ ಜತೆ ಡಾನ್ಸ್‌ ಮಾಡಿರುವ ವಿಡಿಯೋ ಇದು. ಶೂಟಿಂಗ್‌ ವೇಳೆ ಈ ಹಾಡಿಗೆ ಯಶ್‌ ರಾಧಿಕಾ ಕೈಗಳನ್ನು ಹಿಡಿದುಕೊಂಡು ಡಾನ್ಸ್‌ ಮಾಡಿಸಿದ್ದಾರೆ. ಗರ್ಭಿಣಿ ರಾಧಿಕಾ ನಿಂತಲ್ಲೇ ಡಾನ್ಸ್‌ ಮಾಡಿದ್ದಾರೆ. 

'ಇನ್ನೂ ನಿಮ್ಮ ರಿದಂಗೆ ನಾನು ಡಾನ್ಸ್‌ ಮಾಡಬಲ್ಲೆ' ಎಂದು ಬರೆದುಕೊಂಡಿದ್ದಾರೆ. ಈ ವಿಶೇಷ ದಿನ ನನ್ನ ವೈಯಕ್ತಿಕ ಗ್ಲಾಲರಿಯಲ್ಲಿರುವ ಈ ವಿಡಿಯೋ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp