ಹೊಸದಾಗಿ ಮದುವೆಯಾದವರಿಗೆ ಚಂದ್ರ ಒಂದೊಂದು ರೀತಿ ಕಾಣುತ್ತಾನೆ: ಟ್ವೀಟ್ ವಿವಾದದ ಬಗ್ಗೆ ಸುದೀಪ್ ಸ್ಪಷ್ಟನೆ

ನಾನು ಚಿತ್ರರಂಗಕ್ಕೆ ಬಂದು 23 ವರ್ಷ ಆಗಿದೆ. ನನಗೆ ಖುಷಿ ಏನೆಂದರೆ ನನ್ನ ಒಂದು ಟ್ವೀಟ್ ಇಷ್ಟು ಚರ್ಚೆ ಆಗುತ್ತಿದೆ ಎಂದರೆ ಎಲ್ಲೋ ಒಂದು ಕಡೆ ನಾನು ಬೆಳೆದಿದ್ದೇನೆ ಎಂದು ಅರ್ಥ. ನನ್ನ ಟ್ವೀಟ್ ನೀವು ಸೀರಿಯಸ್ ಆಗಿ ತೆಗೆದುಕೊಂಡಿದ್ದೀರಿ. ..
ಸುದೀಪ್
ಸುದೀಪ್

ಬೆಂಗಳೂರು: ನಾನು ಚಿತ್ರರಂಗಕ್ಕೆ ಬಂದು 23 ವರ್ಷ ಆಗಿದೆ. ನನಗೆ ಖುಷಿ ಏನೆಂದರೆ ನನ್ನ ಒಂದು ಟ್ವೀಟ್ ಇಷ್ಟು ಚರ್ಚೆ ಆಗುತ್ತಿದೆ ಎಂದರೆ ಎಲ್ಲೋ ಒಂದು ಕಡೆ ನಾನು ಬೆಳೆದಿದ್ದೇನೆ ಎಂದು ಅರ್ಥ. ನನ್ನ ಟ್ವೀಟ್ ನೀವು ಸೀರಿಯಸ್ ಆಗಿ ತೆಗೆದುಕೊಂಡಿದ್ದೀರಿ, ಆ ಟ್ವೀಟ್‍ಗೆ ಗೌರವ ನೀಡಿದ್ದೀರಿ ಎಂಬುದು ಅಷ್ಟೇ ಅರ್ಥ. ನನ್ನ ಟ್ವೀಟ್ ಇಷ್ಟು ಓಡುತ್ತೆ ಎಂದರೆ ನೀವು ತುಂಬಾ ಪ್ರೀತಿಯಿಂದ ಓದಿದ್ದೀರಾ ಎಂದು ಗೊತ್ತಾಗುತ್ತೆ ಸುದೀಪ್ ಹೇಳಿದ್ದಾರೆ.

ನಗರದ ಫಿಲಂ ಚೇಂಬರ್ ನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಿಚ್ಚ,ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರು ನಿಜವಾದ ಗಂಡಸು ಎಂದು ಪ್ರೂವ್ ಮಾಡಲು ಮದ್ಯ ಬೇಕಿಲ್ಲ. ಸೂರ್ಯ ಮುಳುಗುವುದು ಬೇಕಾಗಿಲ್ಲ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಭಾರೀ ಸಂಚಲನ ಸೃಷ್ಟಿಸಿದ್ದು, ಈ ಬಗ್ಗೆ ಸ್ವತಃ ಸುದೀಪ್ ಅವರೇ ಇದೀಗ ಸ್ಪಷ್ಟನೆ ನೀಡಿದ್ದಾರೆ.

ನಾನು ಯಾವತ್ತೂ ಕೆಟ್ಟ ಸಂದೇಶ ಕೊಡುವುದಿಲ್ಲ. ರಾತ್ರಿಯಾದರೆ ಎಲ್ಲರೂ ಕೂತುಕೊಂಡು ಚಂದ್ರ ನೋಡುತ್ತಿದ್ದರೆ, ಒಬ್ಬರಿಗೆ ಒಂದೊಂದು ರೀತಿಯಲ್ಲಿ ಚಂದ್ರ ಕಾಣುತ್ತದೆ. ನಿಮಗೆ ಖುಷಿಯಾದರೆ ಚಂದ್ರನನ್ನು ನೋಡಿದರೆ ಖುಷಿಯಾಗುತ್ತೆ. ದುಃಖವಾದಾಗ ಚಂದ್ರನನ್ನು ನೋಡಿದರೆ ನಿಮಗೆ ದುಃಖವಾಗುತ್ತದೆ. ಹೊಸದಾಗಿ ಮದುವೆ ಆದೋರಿಗೆ ಚಂದ್ರ ಒಂದೊಂದು ರೀತಿ ಕಾಣಿಸುತ್ತಾನೆ. ಓದುಗಾರರ ಮೇಲೆ ಇದೆ ನನ್ನ ಬರಹ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತಿರುವ ಸುದೀಪ್ ಬಹಳ ಅರ್ಥಗರ್ಭಿತವಾದ ವಾಕ್ಯವನ್ನು ಟ್ವೀಟ್ ಮಾಡಿದ್ದರು. “ನಿಜವಾದ ಗಂಡಸು ಎಂದು ಪ್ರೂವ್ ಮಾಡಲು ಮದ್ಯ ಬೇಕಿಲ್ಲ. ಸೂರ್ಯ ಮುಳುಗುವುದು ಬೇಕಾಗಿಲ್ಲ” ಎಂದು ಬರೆದಿರುವ ಸಾಲನ್ನು ನಾನು ಓದಿದೆ ಎಂದು ಸುದೀಪ್ ಟ್ವೀಟ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com