ಬೀಚ್ ನಲ್ಲಿ ಬಿಕಿನಿಯಲ್ಲಿ ಅನುಷ್ಕಾ ಶರ್ಮಾ! ವಿರಾಟ್  ಏನಂದ್ರು ಗೊತ್ತಾ?

ಬಾಲಿವುಡ್ ಬೆಡಗಿ , ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಮಡದಿ ಅನುಷ್ಕಾ ಶರ್ಮಾ ಬೀಚ್ ವೊಂದರ ಬಳಿ ಬಿಕಿನಿ ಧರಿಸಿ ಪೋಸ್ ನೀಡಿದ್ದಾರೆ.
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ

ಮುಂಬೈ: ಬಾಲಿವುಡ್ ಬೆಡಗಿ , ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಮಡದಿ ಅನುಷ್ಕಾ ಶರ್ಮಾ ಬೀಚ್ ವೊಂದರ ಬಳಿ ಬಿಕಿನಿ ಧರಿಸಿ ಪೋಸ್ ನೀಡಿದ್ದಾರೆ.  

ಸದ್ಯ ಸಿನಿಮಾ ಕೆಲಸಗಳಿಗೆ ವಿರಾಮ ನೀಡಿ ವಿರಾಟ್ ಕೊಹ್ಲಿ ಜೊತೆಗಿರುವ 31 ವರ್ಷದ ಅನುಷ್ಕಾ ಶರ್ಮಾ, ಆರೆಂಜ್ ಬಣ್ಣದ ಬಿಕಿನಿಯಲ್ಲಿ ಕೂತು ಮುಗುಳ್ನಗೆ ಬೀರುತ್ತಾ ಪೋಸ್ ನೀಡಿದ್ದಾರೆ. ಇದನ್ನು ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಆರೆಂಜ್ ಹಾಗೂ ಪಿಂಕ್ ಬಣ್ಣದ ಬಿಕಿನಿಯಲ್ಲಿ ತನ್ನ ಕೂದಲನ್ನು ಹಿಂದೆ ಸರಿಸಿರುವ ಅನುಷ್ಕಾ ಶರ್ಮಾ ಈ ಚಿತ್ರದಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಅಂಟಿಗುವಾದ ಬೀಚ್ ವೊಂದರ ಬಳಿ ತೆಗೆದಿರುವ ಈ ಚಿತ್ರದೊಂದಿಗೆ ''ಸೂರ್ಯ ಚುಂಬನ ಮತ್ತು ಆಶೀರ್ವಾದ'' ಎಂದು ಬರೆದುಕೊಂಡಿದ್ದಾರೆ.

ಈ ಪೋಟೋ ಬಗ್ಗೆ ಹೃದಯ ಹಾಗೂ ಪ್ರೀತಿಯ ಸಂಕೇತದ ಎಮೋಜಿಯೊಂದಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಬಿಕಿನಿಯಲ್ಲಿರುವ ಮುದ್ದಿನ ಮಡದಿಯ ಪೋಟೋವನ್ನು ಮೆಚ್ಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com