ಜಯಣ್ಣ ಬ್ಯಾನರ್ ನಲ್ಲಿ ಗುರುನಂದನ್ ಮುಂದಿನ ಸಿನಿಮಾ!

ಇತ್ತೀಚೆಗೆ ಸಿಂಗ ಸಿನಿಮಾ ನಿರ್ದೇಶಿಸಿದ್ದ ವಿಜಯ್‌ ಕಿರಣ್‌ ಅವರು, ಗುರುನಂದನ್‌ ಅಭಿನಯದ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ...
ಜಯಣ್ಣ ಬ್ಯಾನರ್ ನಲ್ಲಿ ಗುರುನಂದನ್ ಮುಂದಿನ ಸಿನಿಮಾ!
ಜಯಣ್ಣ ಬ್ಯಾನರ್ ನಲ್ಲಿ ಗುರುನಂದನ್ ಮುಂದಿನ ಸಿನಿಮಾ!

ನಟ  ಗುರುನಂದನ್‌ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಆ ಚಿತ್ರವನ್ನು ಜಯಣ್ಣ ನಿರ್ಮಾಣ ಮಾಡುತ್ತಿದ್ದಾರೆ ಎಂಬುದು ವಿಶೇಷ. 

ಇತ್ತೀಚೆಗೆ ಸಿಂಗ ಸಿನಿಮಾ ನಿರ್ದೇಶಿಸಿದ್ದ ವಿಜಯ್‌ ಕಿರಣ್‌ ಅವರು, ಗುರುನಂದನ್‌ ಅಭಿನಯದ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ.

ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮಾ. ಇಲ್ಲಿ ಲವ್‌ಸ್ಟೋರಿಯೂ ಇದೆ. ಹಾಸ್ಯವೂ ಮೇಳೈಸಲಿದೆ. ಜೊತೆಗೆ ಒಂದಷ್ಟು ಎಮೋಷನ್ಸ್‌ ಕೂಡ ಇದೆ. ಸದ್ಯಕ್ಕೆ ನಾಯಕಿಯ ಆಯ್ಕೆ ನಡೆದಿಲ್ಲ.

ಉಳಿದಂತೆ ಚಿತ್ರದಲ್ಲಿ ಸಾಧುಕೋಕಿಲ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಕಾಂಬಿನೇಷನ್‌ನಲ್ಲಿ ಸುಮಾರು ಹತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಸೋಮವಾರ ಚಿತ್ರದ ಪೂಜೆ ನೆರವೇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com