ನಟ ವಸಿಷ್ಠ ಸಿಂಹ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಮಹಿಳೆಗೆ ವಂಚನೆ

ಕನ್ನಡ ಖ್ಯಾತ ಚಿತ್ರನಟ ವಸಿಷ್ಠ ಸಿಂಹ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚಿಸುತ್ತಿದ್ದ ಖತರ್ ನಾಕ್ ಕಳ್ಳನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ನಟ ವಸಿಷ್ಠ ಸಿಂಹ ಹಾಗೂ ವಂಚಕ ವೆಂಕಟೇಶ್
ನಟ ವಸಿಷ್ಠ ಸಿಂಹ ಹಾಗೂ ವಂಚಕ ವೆಂಕಟೇಶ್

ಬೆಂಗಳೂರು: ಕನ್ನಡ ಖ್ಯಾತ ಚಿತ್ರನಟ ವಸಿಷ್ಠ ಸಿಂಹ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚಿಸುತ್ತಿದ್ದ ಖತರ್ ನಾಕ್ ಕಳ್ಳನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕನ್ನಡದ ಕಂಚಿನ ಧ್ವನಿಯ ನಟನೆಂದೇ ಖ್ಯಾತಿ ಪಡೆದಿರುವ ವಸಿಷ್ಠ ಎನ್​ ಸಿಂಹ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಹುಡುಗಿಯರಿಗೆ ವಂಚಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪೋಲಿಸರು ಬಂದಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ 22 ವರ್ಷದ ವ್ಯಕ್ತಿಯೊಬ್ಬ ವಸಿಷ್ಠ ಸಿಂಹ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಮಹಿಳೆಯೊಬ್ಬರಿಗೆ 25 ಸಾವಿರ ರೂ. ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ನಟ ದೂರು ದಾಖಲಿಸಿದ ಬಳಿಕ ಸುಂಕದಕಟ್ಟೆಯ ಹೊಯ್ಸಳ ನಗರ ನಿವಾಸಿ ವೆಂಕಟೇಶ್ ಬವಸರ್ ನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವೆಂಕಟೇಶ್ ನಟ ವಸಿಷ್ಠ ಸಿಂಹ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದಿದ್ದಾನೆ. ಬಳಿಕ ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಚಾಟ್ ಮಾಡಲು ಆರಂಭಿಸಿದ್ದಾನೆ. ಅಲ್ಲದೆ ಹೀಗೆ ಮಾತಾಡುತ್ತಾ ಅವರಿಗೆ ತನ್ನ ವಾಟ್ಸಾಪ್ ನಂಬರ್ ಕೂಡ ಕಳುಹಿಸಿದ್ದಾನೆ. ಆರೋಪಿ ಕೊಟ್ಟ ನಂಬರನ್ನು ಟ್ರೂ ಕಾಲರ್ ನಲ್ಲಿ ನೋಡಿದಾಗ ಅಲ್ಲಿಯೂ ವಸಿಷ್ಠ ಸಿಂಹ ಅಂತಾನೇ ಬಂದಿರುವುದರಿಂದ ಎಲ್ಲರೂ ಅದು ನಟ ವಸಿಷ್ಠ ಸಿಂಹ ಅವರದ್ದೇ ನಂಬರ್ ಎಂದು ನಂಬಿದ್ದಾರೆ.

ಬಳಿಕ ನಾನು ವಸಿಷ್ಠ ಸಿಂಹ ಅವರ ಸಹಾಯಕ. ಅವರ ಮೊಬೈಲ್​ ನಂಬರ್​ ಕೊಡ್ತೀನಿ ಎಂದು ಹೇಳಿ ತನ್ನ ಇನ್ನೊಂದು ಮೊಬೈಲ್​ ನಂಬರ್​ ನೀಡುತ್ತಿದ್ದ. ಅಂತೆಯೇ ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಅವರಿಂದ ಹಣ ತೆಗೆದುಕೊಂಡು ವಂಚಿಸುತ್ತಿದ್ದ. ಇದೀಗ ಆರೋಪಿ ಸೈಬರ್​ ಕ್ರೈ ಪೋಲಿಸರ ಬಲೆಗೆ ಬಿದ್ದಿದ್ದಾನೆ. ಆರೋಪಿಯನ್ನು ವೆಂಕಟೇಶ್​ ಎಂದು ಗುರುತಿಲಾಗಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಚಾರವನ್ನು ನಟ ವಸಿಷ್ಠ ಸಿಂಹ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಬರೆದುಕೊಂಡಿದ್ದು, ನಕಲಿ ಸ್ಟಾರ್​ಗಳ ಬಗ್ಗೆ ಎಚ್ಚರದಿಂದಿರಿ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com