ಸೆಪ್ಟಂಬರ್ 27ಕ್ಕೆ ಬಾಕ್ಸ್ ಆಫೀಸ್ ಕ್ಲಾಷ್: ಗೀತಾ v/s ಭರಾಟೆ?

ಸೆಪ್ಟಂಬರ್ 27ಕ್ಕೆ ಮತ್ತೆ ಬಾಕ್ಸ್ ಆಫೀಸ್ ಘರ್ಷಣೆಯಾಗುವ ಸಾಧ್ಯತೆಯಿದೆ. ಶ್ರೀಮುರುಳಿ  ನಟನೆಯ ಭರಾಟೆ ಹಾಗೂ ಗಣೇಶ್ ಅಭಿನಯದ ಗೀತಾ ಸಿನಿಮಾಗಳು ಸೆಪ್ಟಂಬರ್ 27ಕ್ಕೆ ರಿಲೀಸ್ ಆಗಲಿವೆ.
ಗೀತಾ ಮತ್ತು ಭರಾಟೆ ಸಿನಿಮಾ ಪೋಸ್ಟರ್
ಗೀತಾ ಮತ್ತು ಭರಾಟೆ ಸಿನಿಮಾ ಪೋಸ್ಟರ್

ಸೆಪ್ಟಂಬರ್ 27ಕ್ಕೆ ಮತ್ತೆ ಬಾಕ್ಸ್ ಆಫೀಸ್ ಘರ್ಷಣೆಯಾಗುವ ಸಾಧ್ಯತೆಯಿದೆ. ಶ್ರೀಮುರುಳಿ  ನಟನೆಯ ಭರಾಟೆ ಹಾಗೂ ಗಣೇಶ್ ಅಭಿನಯದ ಗೀತಾ ಸಿನಿಮಾಗಳು ಸೆಪ್ಟಂಬರ್ 27ಕ್ಕೆ ರಿಲೀಸ್ ಆಗಲಿವೆ.

ಗಣೇಶ್ ನಾಯಕತ್ವದ ‘ಗೀತಾ’ ಚಿತ್ರಕ್ಕೆ ವಿಜಯ್ ನಾಗೇಂದ್ರ ನಿರ್ದೇಶನ ಮಾಡಿದ್ದರೆ, ಶ್ರೀಮುರಳಿ ನಟಿಸುತ್ತಿರುವ ‘ಭರಾಟೆ’ಗೆ ಚೇತನ್​ಕುಮಾರ್ ಆಕ್ಷನ್-ಕಟ್ ಹೇಳುತ್ತಿದ್ದಾರೆ. 

ಸೆ.27ರಂದು ಚಿತ್ರಮಂದಿರಕ್ಕೆ ಬರಲು ಈ ಎರಡೂ ಸಿನಿಮಾಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ. ಸೆ.27ರಂದು ಚಿತ್ರ ಬಿಡುಗಡೆ ಮಾಡುವುದಾಗಿ ‘ಭರಾಟೆ’ ಬಳಗ ಕೆಲವು ವಾರಗಳ ಹಿಂದೆ ಹೇಳಿಕೊಂಡಿತ್ತು. ಈಗ ‘ಗೀತಾ’ ತಂಡ ಕೂಡ ಅದೇ ದಿನಾಂಕದ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ.

ಚಿತ್ರಕ್ಕೆ ಸೆನ್ಸಾರ್ ಆಗುವುದು ಬಾಕಿ ಇದ್ದು, ಸೆನ್ಸಾರ್ ಪ್ರಮಾಣ ಪತ್ರ ಸಿಗುತ್ತಿದ್ದಂತೆಯೇ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಗೀತಾ’ ಚಿತ್ರದ ಪೋಸ್ಟರ್​ಗಳಲ್ಲಿ ‘ಸೆ.27ಕ್ಕೆ ರಿಲೀಸ್’ ಎಂದು ಬರೆದಿರುವುದು ಗಮನ ಸೆಳೆಯುತ್ತಿದೆ.

ಬೇರೆ ಬೇರೆ ಕಾರಣಗಳಿಗಾಗಿ ಈ ಎರಡೂ ಸಿನಿಮಾಗಳು ನಿರೀಕ್ಷೆ ಹುಟ್ಟುಹಾಕಿವೆ. ಗೋಕಾಕ್ ಚಳವಳಿ ಹಿನ್ನೆಲೆಯಲ್ಲಿ ಸಾಗುವ ಕಥೆಯನ್ನು ‘ಗೀತಾ’ ಚಿತ್ರ ಒಳಗೊಂಡಿದೆ. ಕನ್ನಡ ಹೋರಾಟಗಾರನ ರೀತಿ ಗಣೇಶ್ ಕಾಣಿಸಿಕೊಂಡಿರುವ ಪೋಸ್ಟರ್ ಮತ್ತು ಟೀಸರ್ ಕಣ್ಣುಕುಕ್ಕುತ್ತಿವೆ. ಅವರ ಹೋಮ್ ಬ್ಯಾನರ್ ‘ಗೋಲ್ಡನ್ ಮೂವೀಸ್’ನಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಪ್ರಯಾಗಾ ಮಾರ್ಟಿನ್, ಶಾನ್ವಿ ಶ್ರೀವಾಸ್ತವ ಮತ್ತು ಪಾರ್ವತಿ ಅರುಣ್ ನಾಯಕಿಯರಾಗಿ ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com