ಕನ್ನಡದಲ್ಲೂ ದಾಖಲೆ ಬರೆದ ಸೈರಾ ನರಸಿಂಹಾ ರೆಡ್ಡಿ ಟೀಸರ್!

ತೆಲುಗು ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹುಭಾಷಾ ಚಿತ್ರ ಸೈರಾ ನರಸಿಂಹಾ ರೆಡ್ಡಿ ಚಿತ್ರದ ಕನ್ನಡ ಅವತರಣಿಕೆಯ ಟೀಸರ್ ದಾಖಲೆ ಬರೆದಿದ್ದು, ಟೀಸರ್ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ವ್ಯೂ ಪಡೆದ ಪರಭಾಷಾ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ.

Published: 21st August 2019 01:25 PM  |   Last Updated: 21st August 2019 01:40 PM   |  A+A-


Chiranjivi's Sye Raa movie

ಸೈರಾ ನರಸಿಂಹಾ ರೆಡ್ಡಿ ಟೀಸರ್

Posted By : Srinivasamurthy VN
Source : Online Desk

ನಟ ಚಿರಂಜೀವಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಮೊದಲ ಟ್ರೈಲರ್ ಗೆ ಅಭಿಮಾನಿಗಳು ಫುಲ್ ಫಿದಾ

ಬೆಂಗಳೂರು: ತೆಲುಗು ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹುಭಾಷಾ ಚಿತ್ರ ಸೈರಾ ನರಸಿಂಹಾ ರೆಡ್ಡಿ ಚಿತ್ರದ ಕನ್ನಡ ಅವತರಣಿಕೆಯ ಟೀಸರ್ ದಾಖಲೆ ಬರೆದಿದ್ದು, ಟೀಸರ್ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ 10ಲಕ್ಷಕ್ಕೂ ಅಧಿಕ ವ್ಯೂ ಪಡೆದ ಪರಭಾಷಾ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ.

ನಟ ಚಿರಂಜೀವಿ ಅಭಿನಯದ ಟಾಲಿವುಡ್‍ನ ಬಹುನಿರೀಕ್ಷಿತ ‘ಸೈರಾ ನರಸಿಂಹಾರೆಡ್ಡಿ’ ಚಿತ್ರದ ಟೀಸರ್ ಮಂಗಳವಾರ ಬಿಡುಗಡೆ ಆಗಿತ್ತು. ಈ ಟೀಸರ್ ಒಟ್ಟು 5 ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಕನ್ನಡದಲ್ಲಿ ದಾಖಲೆ ಬರೆದಿದೆ. ಕನ್ನಡದಲ್ಲಿ ಡಬ್ ಆಗಿರುವ ಸೈರಾ ಚಿತ್ರದ ಟೀಸರ್ ರಿಲೀಸ್ ಆದ 24 ಗಂಟೆಯ ಒಳಗಡೆ 10 ಲಕ್ಷಕ್ಕೂ ಹೆಚ್ಚು ವ್ಯೂ ಪಡೆಯುವ ಮೂಲಕ ದಾಖಲೆ ಬರೆದಿದೆ. ಈ ಹಿಂದೆ ‘ಡಿಯರ್ ಕಾಮ್ರೆಡ್’ ಸೇರಿದಂತೆ ಹಲವು ಚಿತ್ರದ ಟ್ರೇಲರ್ ಕನ್ನಡದಲ್ಲಿ ಬಿಡುಗಡೆ ಆಗಿತ್ತು. ಆದರೆ ಯಾವ ಟೀಸರ್ ಕೂಡ 24 ಗಂಟೆಯ ಒಳಗಡೆ 10 ಲಕ್ಷ ವ್ಯೂ ಪಡೆದಿರಲಿಲ್ಲ.

ನಟ ಚಿರಂಜೀವಿ, ಬಿಗ್ ಬಿ ಅಮಿತಾಬ್ ಬಚ್ಚನ್, ಕಿಚ್ಚಾ ಸುದೀಪ್, ಜಗಪತಿ ಬಾಬು, ನಯನತಾರಾ, ತಮನ್ನಾ, ತಮಿಳುನಟ ವಿಜಯ್ ಸೇತುಪತಿ ಸೇರಿದಂತೆ ಬಹುತಾರಾಗಣ ಇರುವ ಸೈರಾ ನರಸಿಂಹರೆಡ್ಡಿ ಚಿತ್ರದ ಕನ್ನಡ ಟೀಸರ್ ಇದುವರೆಗೂ 31 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದ್ದು, ತೆಲುಗಿನಲ್ಲಿ 55 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದೆ. ಇನ್ನು ಟೀಸರ್ ಗೆ ಹಿಂದಿಯಲ್ಲಿ 41 ಲಕ್ಷ, ತಮಿಳಿನಲ್ಲಿ 7 ಲಕ್ಷ ಹಾಗೂ ಮಲೆಯಾಳಂನಲ್ಲಿ 10 ಲಕ್ಷಕ್ಕೂ ಹೆಚ್ಚು ವ್ಯೂ ಬಂದಿದೆ. 

ಸದ್ಯ ಸೈರಾ ಟೀಸರ್ ಕರ್ನಾಟಕದಲ್ಲೂ ಚಿರು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇತ್ತೀಚೆಗಷ್ಟೆ ಚಿತ್ರತಂಡ ಸಿನಿಮಾದ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಈ ವಿಡಿಯೋ ಯೂಟ್ಯೂಬ್‍ನಲ್ಲಿ ಭಾರೀ ಸದ್ದು ಮಾಡಿತ್ತು. ಈ ಸಿನಿಮಾವನ್ನು ನಟ ರಾಮ್ ಚರಣ್ ನಿರ್ಮಿಸುತ್ತಿದ್ದು, ಚಿತ್ರವನ್ನು ಕಿಕ್ ಖ್ಯಾತಿಯ ಖ್ಯಾತ ನಿರ್ದೇಶಕ ಸುರೇಂದರ್ ರೆಡ್ಡಿ ನಿರ್ದೇಶಿಸುತ್ತಿದ್ದಾರೆ.  ಚಿತ್ರ ಆಂಧ್ರ ಪ್ರದೇಶದ ಮೊಟ್ಟ ಮೊದಲ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಅವರ ಜೀವನಾಧಾರಿತ ಕಥೆಯಾಗಿದ್ದು, ಮೆಗಾ ಸ್ಟಾರ್ ಚಿರಂಜೀವ್ ನರಸಿಂಹಾ ರೆಡ್ಡಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp