MeToo ಪ್ರಕರಣ: ಮಾನನಷ್ಟ ಮೊಕದ್ದಮೆ ರದ್ದು ಕೋರಿ ಶ್ರುತಿ ಹರಿಹರನ್‍ ಸಲ್ಲಿಸಿದ ಅರ್ಜಿ ವಜಾ

ನಟಿ ಶ್ರುತಿ ಹರಿಹರನ್ ಗೆ ಸಂಕಷ್ಟ ಎದುರಾಗಿದೆ. ನಟಿಯ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದತಿಗೆ ನ್ಯಾಯಾಲಯ ನಿರಾಕರಿಸಿದೆ. 
ಶ್ರುತಿ ಹರಿಹರನ್
ಶ್ರುತಿ ಹರಿಹರನ್

ಬೆಂಗಳೂರು: ನಟಿ ಶ್ರುತಿ ಹರಿಹರನ್ ಗೆ ಸಂಕಷ್ಟ ಎದುರಾಗಿದೆ. ನಟಿಯ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದತಿಗೆ ನ್ಯಾಯಾಲಯ ನಿರಾಕರಿಸಿದೆ. 

ನಟ ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್​ ಲೈಂಗಿಕ ದೌರ್ಜನ್ಯದ ಆರೋಪ (ಮೀಟೂ) ಮಾದುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ನಟಿಯ ವಿರುದ್ಧ ನಟ ಧ್ರುವ ಸರ್ಜಾ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದೀಗ ನ್ಯಾಯಾಲಯ ಧ್ರುವ ಸರ್ಜಾ ಅರ್ಜಿ ವಿಚಾರಣೆಗೆ ಸಮ್ಮತಿಸಿದೆ. 

ಕಳೆದ ವರ್ಷ #MeToo ಅಭಿಯಾನ ಮೂಲಕ ನಟ ಅರ್ಜುನ್ ಸರ್ಜಾ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ನಟಿ ಶ್ರುತಿ ಆರೋಪಿಸಿದ್ದರು.ಈ ಸಂಬಂಧ ನಟಿ ಬೆಂಗಳೂರಿನ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ್ದರು.ಇದನ್ನು ವಿರೋಧಿಸಿ ಧ್ರುವ ಸರ್ಜಾ ಶ್ರುತಿ ಹರಿಹರನ್ ಅವರ ವಿರುದ್ಧ 5 ಕೋಟಿ ರೂ. ಪರಿಹಾರ ಕೋರಿ ಮೊಕದ್ದಮೆ ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com