ಭರಾಟೆ ಚಿತ್ರದ ಎರಡು ಹಾಡುಗಳು  ಸ್ವಿಟ್ಜರ್ಲೆಂಡ್ ನಲ್ಲಿ ಚಿತ್ರೀಕರಣ

ಚೇತನ್ ಕುಮಾರ್ ನಿರ್ದೇಶನದ ಭರಾಟೆ ಚಿತ್ರದ ಎರಡು ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸಿದ್ದಾರೆ. ಶ್ರೀಮರುಳಿ ಹಾಗೂ ಶ್ರೀಲೀಲಾ ಅಭಿನಯದ ಭರಾಟೆ ಚಿತ್ರದ ಎರಡು ಹಾಡುಗಳನ್ನು ಸ್ವಿಟ್ಜರ್ಲೆಂಡ್ ನ ಸುಂದರ  ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. 

Published: 24th August 2019 01:10 PM  |   Last Updated: 24th August 2019 01:10 PM   |  A+A-


ಶ್ರೀಲೀಲಾ, ಶ್ರೀ ಮುರುಳಿ

Posted By : Nagaraja AB
Source : The New Indian Express

ಬೆಂಗಳೂರು: ಚೇತನ್ ಕುಮಾರ್ ನಿರ್ದೇಶನದ ಭರಾಟೆ ಚಿತ್ರದ ಎರಡು ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸಿದ್ದಾರೆ. ಶ್ರೀಮರುಳಿ ಹಾಗೂ ಶ್ರೀಲೀಲಾ ಅಭಿನಯದ ಭರಾಟೆ ಚಿತ್ರದ ಎರಡು ಹಾಡುಗಳನ್ನು ಸ್ವಿಟ್ಜರ್ಲೆಂಡ್ ನ ಸುಂದರ  ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. 

ಹರ್ಷ ನೃತ್ಯ ಸಂಯೋಜಿಸಿರುವ ಎರಡು ಮೆಲೂಡಿ ಹಾಡುಗಳನ್ನು ಆರು ನಗರಗಳಲ್ಲಿ ಚಿತ್ರೀಕರಿಸಲಾಗಿದ್ದು, ಕೆಲ ಪೋಟೋಗಳನ್ನು ಚೇತನ್ ಕುಮಾರ್  ಹಂಚಿಕೊಂಡಿದ್ದಾರೆ. 

ಇಂಟರ್ ಲಾಕೆನ್, ಬೆರ್ನ್, ತೂನ್, ಸ್ಯಾನಿನ್, ಜಿಸ್ಟಾಡ್ , ಪ್ರೈಬರ್ಗ್ ಮೊದಲಾದ ಕಡೆಗಳಲ್ಲಿ ಸುತ್ತಾಡಿ ಈ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ವಿದೇಶಗಳಲ್ಲಿ ಚಿತ್ರೀಕರಣ ವಿಭಿನ್ನ ಅನುಭವ ನೀಡುತ್ತದೆ. ಸ್ವಿಟ್ಜರ್ಲೆಂಡ್ ನ ಅತ್ಯುತ್ತಮ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿರುವುದಾಗಿ ಚೇತನ್ ಕುಮಾರ್ ತಿಳಿಸಿದ್ದಾರೆ.

ಸುಪ್ರಿತ್ ನಿರ್ಮಿಸಿರುವ ಭರಾಟೆ ಚಿತ್ರದ  ಹಾಡುಗಳು ಈ ವಾರಾಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ರಚಿತಾ ರಾಮ್ ಜೊತೆಗೆ ವಿಶೇಷವಾದ ಹಾಡೊಂದಿದೆ. ಸದ್ಯ ರೀರೆಕಾರ್ಡಿಂಗ್ ಹಂತದಲ್ಲಿರುವ ಈ ಚಿತ್ರವನ್ನು ಸೆಪ್ಟೆಂಬರ್ 27 ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp