ಗಂಡ-ಹೆಂಡತಿ ಮಧ್ಯೆ ಸುದ್ದಿ ಹಬ್ಬಿಸಿ ಮನೆ ಮುರಿಯುವ ಕೆಲಸ ಮಾಡಬೇಡಿ: ಸುಮಲತಾ ಅಂಬರೀಷ್   

ಕೆಲದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಮೇಲೆ ಮತ್ತೆ ಹಲ್ಲೆ ನಡೆಸಿದ್ದಾರೆ ಎಂಬ ವದಂತಿ ಹಬ್ಬಿತ್ತು.  ಈ ಬಗ್ಗೆ ಪತ್ರಕರ್ತ ರವಿ ಬೆಳಗೆರೆ ಯೂ ಟ್ಯೂಬ್ ನಲ್ಲಿ ಹೇಳಿಕೆ ನೀಡಿದ ನಂತರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದಾಗಿತ್ತು. 
 

Published: 25th August 2019 02:06 PM  |   Last Updated: 25th August 2019 02:15 PM   |  A+A-


Darshan-Sumalatha(File photo)

ದರ್ಶನ್-ಸುಮಲತಾ(ಸಂಗ್ರಹ ಚಿತ್ರ)

Posted By : Sumana Upadhyaya
Source : Online Desk

ಬೆಂಗಳೂರು: ಕೆಲದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಮೇಲೆ ಮತ್ತೆ ಹಲ್ಲೆ ನಡೆಸಿದ್ದಾರೆ ಎಂಬ ವದಂತಿ ಹಬ್ಬಿತ್ತು.  ಈ ಬಗ್ಗೆ ಪತ್ರಕರ್ತ ರವಿ ಬೆಳಗೆರೆ ಯೂ ಟ್ಯೂಬ್ ನಲ್ಲಿ ಹೇಳಿಕೆ ನೀಡಿದ ನಂತರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದಾಗಿತ್ತು. 


ಮೊನ್ನೆ ಶುಕ್ರವಾರ ದಿವಂಗತ ನಟ ಅಂಬರೀಶ್ 9 ನೇ ತಿಂಗಳ ಪುಣ್ಯ ಕಾರ್ಯದಲ್ಲಿ  ಭಾಗಿಯಾಗಿದ್ದ ಸಂಸದೆ ಸುಮಲತಾರನ್ನು ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ‘ನೀವು ಹೇಳಿರುವ ವಿಡಿಯೊವನ್ನು ನಾನು ನೋಡಿಲ್ಲ. ಈ ತರಹದ ಗಾಳಿಸುದ್ದಿ ಬರುತ್ತನೇ ಇರುತ್ತದೆ, ನಾನು ಅದಕ್ಕೆ ವಿಶೇಷ ಪ್ರಾಮುಖ್ಯತೆ ನೀಡುವುದಿಲ್ಲ. ಪ್ರತಿಯೊಂದನ್ನು ನಾವು ವಿವರಿಸುತ್ತಾ ಹೋದರೆ ಬೇಕೆಂದೇ ಇಂತಹ ಸುದ್ದಿ ಸೃಷ್ಟಿಸುತ್ತಾರೆ, ಇದರ ಮೂಲಕ ಒಂದಷ್ಟು ಪ್ರಚಾರ ಯಾರ್ಯಾರಿಗೆ ಬೇಕೋ ಅವರು ತೆಗೆದುಕೊಳ್ಳಲು ನೋಡುತ್ತಿರುತ್ತಾರೆ. 
ಹೀಗಾಗಿ ಗಂಡ- ಹೆಂಡತಿ ನಡುವೆ ಈ ರೀತಿ ವದಂತಿ ಹಬ್ಬಿಸುವವರಿಗೆ ನಾನು ಹೇಳುವುದಿಷ್ಟೆ, ದಯವಿಟ್ಟು ಇಂತಹ ಸುದ್ದಿಗಳನ್ನು ಹಬ್ಬಿಸಬೇಡಿ, ಇದು ಬಹಳ ತಪ್ಪು, ಮನೆ ಮುರಿಯುವಂತಹ ಕೆಲಸ ಯಾರೂ ಮಾಡಬಾರದು, ಮಾತುಗಳನ್ನು ಕೂಡ ಆಡಬಾರದು ಎಂದರು. 


ನಂತರ ಅಭಿಷೇಕ್ ಅಂಬರೀಷ್ ರಾಜಕೀಯ ಪ್ರವೇಶದ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳ ಬಗ್ಗೆಯೂ ಸ್ಪಷ್ಟನೆ ನೀಡಿದ ಸುಮಲತಾ, ದಯವಿಟ್ಟು ಸದ್ಯಕ್ಕೆ ಅಭಿ ಹೆಸರನ್ನು ರಾಜಕಾರಣಕ್ಕೆ ಸೇರಿಸಬೇಡಿ, ಅವರು ಸಿನಿಮಾಗಳನ್ನು ಮಾಡಬೇಕು, ಒಳ್ಳೊಳ್ಳೆಯ ಸಿನಿಮಾಗಳನ್ನು ಕೊಡಬೇಕು, ರಾಜಕೀಯಕ್ಕೆ ಬರುವ ನಿರ್ಧಾರವೇನಾದರೂ ತೆಗೆದುಕೊಳ್ಳಲು ಇನ್ನೂ ಬೇಕಾದಷ್ಟು ಸಮಯವಿದೆ. ಆಗ ಏನಾಗುತ್ತದೆ ನೋಡೋಣ, ಸದ್ಯಕ್ಕಂತೂ ಇವೆಲ್ಲ ಸುಳ್ಳು ಸಮಾಚಾರ ಎಂದರು.


ವಿಜಯಲಕ್ಷ್ಮಿ ಕೆಲ ದಿನಗಳ ಹಿಂದೆ ಟ್ಟಿಟರ್ ನಲ್ಲಿ  ಇದಕ್ಕೆ ಸ್ಪಷ್ಟನೆ ನೀಡಿ, ಈಗ ಹಬ್ಬಿರುವ ವದಂತಿಗಳೆಲ್ಲ ಆಧಾರರಹಿತ ಎಂದಿದ್ದರು, ಅದಾದ ಬಳಿಕ ದರ್ಶನ್ ನನ್ನು ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿ ಹೆಸರು ಬದಲಾಯಿಸಿಕೊಂಡಿದ್ದು ಇನ್ನಷ್ಟು ಅನುಮಾನಗಳಿಗೆ ಆಸ್ಪದವಾಗಿತ್ತು.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
coronadead

ಕೊರೋನಾ ವೈದ್ಯಕೀಯ ಸಲಕರಣೆ ಖರೀದಿ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪಗಳು ಕೇಳಿಬಂದಿವೆ. ನೀವು ಏನಂತೀರಿ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp