ಬಾಲಿವುಡ್‌ಗಿಂತ ಸೌತ್ ಇಂಡಸ್ಟ್ರೀಯಲ್ಲಿ ಸುಲಭವಾಗಿ ಬ್ರೇಕ್  ಪಡೆಯಬಹುದು -ಪೈಲ್ವಾನ್ ನಟಿ ಆಕಾಂಕ್ಷ ಸಿಂಗ್ 

ಬಾಲಿವುಡ್‌ನಲ್ಲಿ ವಿಶೇಷವಾಗಿ ಒಳಗಿನವರಿಂದ ಸಾಕಷ್ಟು ಸ್ಪರ್ಧೆ.  ಆದರೆ ಸೌತ್ ಸಿನಿ ಇಂಡಸ್ಟ್ರೀಯಲ್ಲಿ  ಇದನ್ನು ಸುಲಭವಾಗಿ ದಾಟಬಹುದು ಎಂದು ಎರಡು ಕಡೆಗಳಲ್ಲಿ ಕೆಲಸ ಮಾಡಿರುವ ಪೈಲ್ವಾನ್ ನಟಿ ಆಕಾಂಕ್ಷ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ

Published: 26th August 2019 12:17 PM  |   Last Updated: 26th August 2019 12:17 PM   |  A+A-


ಪೈಲ್ವಾನ್ ಚಿತ್ರ

Posted By : Nagaraja AB
Source : The New Indian Express

ಬೆಂಗಳೂರು: ಬಾಲಿವುಡ್‌ನಲ್ಲಿ ವಿಶೇಷವಾಗಿ ಒಳಗಿನವರಿಂದ ಸಾಕಷ್ಟು ಸ್ಪರ್ಧೆ.  ಆದರೆ ಸೌತ್ ಸಿನಿ ಇಂಡಸ್ಟ್ರೀಯಲ್ಲಿ  ಇದನ್ನು ಸುಲಭವಾಗಿ ದಾಟಬಹುದು ಎಂದು ಎರಡು ಕಡೆಗಳಲ್ಲಿ ಕೆಲಸ ಮಾಡಿರುವ ಪೈಲ್ವಾನ್ ನಟಿ ಆಕಾಂಕ್ಷ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 

ಬಾಲಿವುಡ್ ನಲ್ಲಿ ಹೊರಗಿನವರಿಗಂತಲೂ ಒಳಗಿನವರೆ ಬೆಳೆಯಲು ಬಿಡುವುದಿಲ್ಲ. ಆದರೆ, ಪ್ರಾಮಾಣಿಕವಾಗಿ ಹೇಳುತ್ತೇನೆ , ದಕ್ಷಿಣ ಸಿನಿಮಾ ಇಂಡಸ್ಟ್ರೀಯಲ್ಲಿ  ಹೆಚ್ಚಾಗಿ ಸ್ವೀಕರಿಸುತ್ತಾರೆ. ರಾತ್ರೋ ರಾತ್ರಿ ಸ್ಟಾರ್ ಆಗಿಬಿಡಬಹುದು. ಆದರೆ, ಅದು ಸುಲಭವಾಗಿ ದೊರೆಯುತ್ತದೆ ಎಂದು ಹೇಳುವುದಿಲ್ಲ.  ಅದಕ್ಕೆ ತಕ್ಕ ರೀತಿಯಲ್ಲಿ ಶ್ರಮವಹಿಸಬೇಕಾಗುತ್ತದೆ. ಶ್ರಮವಹಿಸಿದಾಗ ಎಲ್ಲರೂ ಸ್ವೀಕರಿಸುತ್ತಾರೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಜೈಪುರದ ಆಕಾಂಕ್ಷ ಸಿಂಗ್, ಹಿಂದಿಯ ಬದ್ರಿನಾಥ್ ಕಿ ದುಲ್ಹಾನಿಯಾ ಸೇರಿದಂತೆ ಅನೇಕ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಮೂಲಕ ಚೊಚ್ಚಲ ಬಾರಿಗೆ   ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ.  ಕೃಷ್ಣಾ ನಿರ್ದೇಶನದ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆಗೆ ಸುನೀಲ್ ಶೆಟ್ಟಿ ಕೂಡಾ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು , ತೆಲುಗು, ಹಾಗೂ ಹಿಂದಿಯೂ ಈ ಭಾಷೆ ಬಿಡುಗಡೆಗೆ ತಯಾರಾಗಿದೆ. 

ದಕ್ಷಿಣ ಭಾರತೀಯ ಸಿನಿಮಾಗಳು ವ್ಯವಸ್ಥಿತವಾಗಿರುತ್ತದೆ.  ನಿಗದಿತ ವೇಳೆಯಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಆದರೆ, ಬಾಲಿವುಡ್ ನಲ್ಲಿ ಹೆಚ್ಚು ಕೆಲಸ ಮಾಡಬೇಕಾಗುತ್ತದೆ ಎನ್ನುವ ಆಕಾಕ್ಷ ಸಿಂಗ್, ಪೈಲ್ವಾನ್ ಚಿತ್ರದಲ್ಲಿ ರುಕ್ಮಿಣಿ ಪಾತ್ರ ಭಾವನಾತ್ಮಕವಾದದ್ದು, ಎರಡು ರೀತಿಯ ಶೆಡ್ ಗಳಲ್ಲಿ ಈ ಪಾತ್ರವನ್ನು ನೋಡಬಹುದಾಗಿದೆ. ಒಬ್ಬ ವ್ಯಕ್ತಿಯ ಎರಡು ಮುಖಗಳು ಆ ಪಾತ್ರದಲ್ಲಿ ಅನಾವರಣಗೊಳ್ಳುತ್ತದೆ. ಇದೊಂದು ಉತ್ತಮವಾದ ಪಾತ್ರವಾಗಿದೆ ಎಂದು ಹೇಳಿದ್ದಾರೆ.

ಪೈಲ್ವಾನ್ ಚಿತ್ರದಲ್ಲಿ ಆಕಾಂಕ್ಷ ಸಿಂಗ್ ಸುನೀಲ್ ಶೆಟ್ಟಿ ಜೊತೆಗೆ ಮೊದಲ ಬಾರಿಗೆ ನಟಿಸುವ ಅವಕಾಶ ಪಡೆದಿದ್ದಾರೆ. ಸುನೀಲ್ ಶೆಟ್ಟಿ ಉತ್ತಮ ವ್ಯಕ್ತಿ. ಅವರು ಗಂಭೀರವಾಗಿ ಕಾಣುತ್ತಾರೆ. ಆದರೆ, ಅವರು ಹಾಗಲ್ಲ.  ಅವರ ಬಗ್ಗೆ ನಿಮಗೆ ಗೊತ್ತಾದಾಗ  ಆ ವ್ಯಕ್ತಿ   ಏನು ಎಂಬುದು ತಿಳಿಯಲಿದೆ. ಅವರು ಅತ್ಯಂತ ವಿನಮ್ರ ವ್ಯಕ್ತಿ ಎಂದು ಹೊಗಳಿದ್ದಾರೆ. ಸೆಪ್ಟೆಂಬರ್ 12 ರಂದು ಪೈಲ್ವಾನ್ ಚಿತ್ರ ತೆರೆಗೆ ಅಪ್ಪಳಿಸಿದೆ. 
 

Stay up to date on all the latest ಸಿನಿಮಾ ಸುದ್ದಿ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp