ಗೋಲ್ಡನ್ ಸ್ಟಾರ್ 'ಗೀತಾ' ವಿತರಕರಾದ ಮಂಜುನಾಥ್ ಗೌಡ

ವಿಜಯ ನಾಗೇಂದ್ರ ಚೊಚ್ಚಲ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಪ್ರೇಕ್ಷಕ ರಲ್ಲಿ ಸಾಕಷ್ಟು ಕುತೂಹಲ ಹಾಗೂ ಭರವಸೆ ಮೂಡಿಸಿದೆ.

Published: 27th August 2019 01:31 PM  |   Last Updated: 27th August 2019 01:31 PM   |  A+A-


ಗೀತಾ ಚಿತ್ರದ ದೃಶ್ಯ

Posted By : Raghavendra Adiga
Source : The New Indian Express

ವಿಜಯ ನಾಗೇಂದ್ರ ಚೊಚ್ಚಲ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಪ್ರೇಕ್ಷಕ ರಲ್ಲಿ ಸಾಕಷ್ಟು ಕುತೂಹಲ ಹಾಗೂ ಭರವಸೆ ಮೂಡಿಸಿದೆ.

ನಿರ್ಮಾಪಕ ಸೈಯದ್ ಸಲಾಮ್ ಅವರ ಸಹಯೋಗದೊಂದಿಗೆ ನಟ ಗಣೇಶ್ ತಮ್ಮ ಹೋಂ ಬ್ಯಾನರ್ ನಡಿಯಲ್ಲಿ ನಿರ್ಮಿಸಿರುವ ಈ ಚಿತ್ರವನ್ನು ಕೆಎಸ್ ಕೆ  ಶೋ ರೀಲ್ ನ ಮಂಜುನಾಥ್ ಗೌಡ ರಾಜ್ಯಾದ್ಯಂತ ವಿತರಣೆ ಮಾಡಲಿದ್ದಾರೆ.

ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು  ಸೆಪ್ಟೆಂಬರ್ 27 ರಂದು ತೆರೆಗೆ ತರಲು ತಯಾರಕರು ಯೋಜಿಸುತ್ತಿದ್ದಾರೆ.ಗೀತಾದಲ್ಲಿ ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ಪ್ರಯಾಗ ಮಾರ್ಟಿನ್ ಮತ್ತು ಪಾರ್ವತಿ ಅರುಣ್ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

ರೊಮ್ಯಾಂಟಿಕ್ ಡ್ರಾಮವಾಗಿರುವ ಈ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಅವರ ಹಾರೈಕೆಯೂ ಇದೆ.ಅವರು ಈ ಚಿತ್ರದ ಒಂದು ಹಾಡಿಗೆ ಸಾಹಿತ್ಯ ರಚನೆಯನ್ನೂ ಮಾಡಿದ್ದಾರೆ.

ಶಂಕರ್ ನಾಗ್ ಅವರ ಕ್ಲಾಸಿಕ್ ಚಿತ್ರದ ಶೀರ್ಷಿಕೆಯನ್ನು ಮರುಬಳಸಿಕೊಂಡಿರುವ ತ್ರವು ತನ್ನದೇ ಆದ ಕಾರಣಗಳಿಗೆ ಮುಖ್ಯವಾಗುತ್ತದೆ. ಕನ್ನಡದ ನೆಲದಲ್ಲಿ ನಡೆದ ಪ್ರಮುಖ ಚಳವಳಿ ಗೋಕಾಕ್ ಆಂದೋಲನವನ್ನು ಚಲನಚಿತ್ರವೊಂದರಲ್ಲಿ ಮರುನಿರೂಪಿಸಿರುವುದು ಇಲ್ಲಿನ ವಿಶೇಷಗಳಲ್ಲಿ ಒಂದಾಗಿದೆ. ಅಲ್ಲದೆ, ಪುನೀತ್ ರಾಜ್‌ಕುಮಾರ್ ಅವರು ಇತ್ತೀಚೆಗೆ ಒಂದು ಹಾಡನ್ನು ರೆಕಾರ್ಡ್ ಮಾಡಿದ್ದಾರೆ - ಕನ್ನಡವೆ ಸತ್ಯ, ಕನ್ನಡ ನಿತ್ಯ ಈ ಹಾಡು ಇಡೀ ಚಿತ್ರದ ಮೌಲ್ಯ ಹೆಚ್ಚುವಂತೆ ಮಾಡಿದೆ.

Stay up to date on all the latest ಸಿನಿಮಾ ಸುದ್ದಿ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp