ಪ್ರಕೃತಿ ನೊಂದರೆ ನಮಗೇ ತೊಂದರೆ, ಪಿಒಪಿ ಗಣೇಶನ ಬದಲು ಮಣ್ಣಿನ ಗಣಪನನ್ನು ಪೂಜಿಸಿ ಎಂದ ಕಿಚ್ಚ ಸುದೀಪ್

 ಗೌರಿ, ಗಣೇಶ ಹಬ್ಬ ಹತ್ತಿರವಾಗುತ್ತಿದ್ದು, ಮಾರುಕಟ್ಟೆಗಳಲ್ಲಿ ಮೂರ್ತಿಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ ಇದೇ ಸಂದರ್ಭದಲ್ಲಿ ಪಿಒಪಿ ಗಣೇಶ ಬೇಡ, ಮಣ್ಣಿನ ಗಣಪನನ್ನು ಪೂಜಿಸಿ ಪ್ರಕೃತಿಯನ್ನು ಕಾಪಾಡೋಣ ಎಂದು ನಟ ಕಿಚ್ಚ ಸುದೀಪ ಕರೆ ನೀಡಿದ್ದಾರೆ
 

Published: 29th August 2019 03:29 PM  |   Last Updated: 29th August 2019 03:29 PM   |  A+A-


ಕಿಚ್ಚ ಸುದೀಪ್

Posted By : Raghavendra Adiga
Source : UNI

ಗೌರಿ, ಗಣೇಶ ಹಬ್ಬ ಹತ್ತಿರವಾಗುತ್ತಿದ್ದು, ಮಾರುಕಟ್ಟೆಗಳಲ್ಲಿ ಮೂರ್ತಿಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ ಇದೇ ಸಂದರ್ಭದಲ್ಲಿ ಪಿಒಪಿ ಗಣೇಶ ಬೇಡ, ಮಣ್ಣಿನ ಗಣಪನನ್ನು ಪೂಜಿಸಿ ಪ್ರಕೃತಿಯನ್ನು ಕಾಪಾಡೋಣ ಎಂದು ನಟ ಕಿಚ್ಚ ಸುದೀಪ ಕರೆ ನೀಡಿದ್ದಾರೆ

ನಾವು ನಮ್ಮ ಪ್ರಕೃತಿಗೆ ಕೊಡುವ ನೋವನ್ನು ಪ್ರಕೃತಿಯು ತಿರುಗಿಸಿ ವಾಪಸ್ ಕೊಡುತ್ತಿರುವುದನ್ನು ನಾವು ಆನುಭವಿಸಿದ್ದೇವೆ. ಹಾಗಾಗಿ ಈ ಸಲ ನಮ್ಮ ವಿಘ್ನ ನಿವಾರಕನ ಹಬ್ಬಕ್ಕೆ , ಪಿಓಪಿ ಗಣೇಶನ ಮೂರ್ತಿಗಳನ್ನ ಉಪಯೋಗಿಸದೆ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನ ಮಾತ್ರ ಬಳಸಿ,ಪ್ರಕೃತಿ ಮಾತೆಯನ್ನ ಕಾಪಾಡೋಣ."ಇದು ನನ್ನ ನಿಮ್ಮ ನಮ್ಮೆಲ್ಲರ ಜವಾಬ್ದಾರಿ" ಎಂದು ಟ್ವೀಟ್ ಮಾಡಿದ್ದಾರೆ

 

 

ಪ್ರಾಕೃತಿಕ ವಿಕೋಪಗಳ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಶೇರ್ ಮಾಡುವ ನೀಡುವ ಮೂಲಕ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನೇ ಕೂರಿಸಿ ಎಂದು ಸುದೀಪ್ ಮನವಿ ಮಾಡಿದ್ದಾರೆ. 

ಸಧ್ಯ ನಟ ತಮ್ಮ ಮುಂಬರುವ ಚಿತ್ರ "ಪೈಲ್ವಾನ್" ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp