ಇಶಾನ್ 'ರೆಮೋ'ಗಾಗಿ ಕೋಟಿ ವೆಚ್ಚದಲ್ಲಿ ತಯಾರಾಗ್ತಿದೆ ಐಷಾರಾಮಿ ಕಛೇರಿ

ಇಶಾನ್ ಅಭಿನಯದ ಪವನ್ ಒಡೆಯರ್ ನಿರ್ದೇಶನದಲ್ಲಿನ ಮುಂದಿನ ಚಿತ್ರಕ್ಕಾಗಿ ಗಾರ್ಡನ್ ಸಿಟಿಯ ಹೃದಯ ಭಾಗದಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ಗಾಜುಇನಂತಹಾ ರಚನೆಯಿಂದ ತಾತ್ಕಾಲಿಕ ಕಛೇರಿಯೊಂದನ್ನು ರಚಿಸಲಾಗುತ್ತಿದೆ.

Published: 31st August 2019 10:39 AM  |   Last Updated: 31st August 2019 10:39 AM   |  A+A-


ಇಶಾನ್ 'ರೆಮೋ'ಗಾಗಿ ಕೋಟಿ ವೆಚ್ಚದಲ್ಲಿ ತಯಾರಾಗ್ತಿದೆ ಐಷಾರಾಮಿ ಕಛೇರಿ

Posted By : Raghavendra Adiga
Source : The New Indian Express

ಇಶಾನ್ ಅಭಿನಯದ ಪವನ್ ಒಡೆಯರ್ ನಿರ್ದೇಶನದಲ್ಲಿನ ಮುಂದಿನ ಚಿತ್ರಕ್ಕಾಗಿ ಗಾರ್ಡನ್ ಸಿಟಿಯ ಹೃದಯ ಭಾಗದಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ಗಾಜುಇನಂತಹಾ ರಚನೆಯಿಂದ ತಾತ್ಕಾಲಿಕ ಕಛೇರಿಯೊಂದನ್ನು ರಚಿಸಲಾಗುತ್ತಿದೆ.

ಇಶಾನ್ ಮುಂದಿನ ಚಿತ್ರ "ರೆಮೋ" ಗಾಗಿ ಈ ಕಛೇರಿ ಸಿದ್ದವಾಗುತ್ತಿದ್ದು ಚಿತ್ರನಿರ್ಮಾಪಕರು ಪತ್ರಿಕೆಯೊಡನೆ ಕೆಲವು ಸ್ಟಿಲ್ ಗಳನ್ನು ಹಂಚಿಕೊಂಡಿದ್ದಾರೆ.ಕುತೂಹಲಕರ ಎಂದರೆ ಇಡೀ ಸೆಟ್ ನಾಯಕನ ಪಾತ್ರಕ್ಕೆ ಸಂಬಂಧಿಸಿದ್ದಾಗಿದ್ದು ಆತನ ಪಾತ್ರ ಸಂಪೂರ್ಣ ಪಾರದರ್ಶಕವಾಗಿರಲಿದೆ.

ಇದರಂತೆ 360 ಡಿಗ್ರಿ ಜಾಗದಲ್ಲಿ ಯಾವುದೇ ಪರದೆ ಅಳವಡಿಸದೆ ಟಾಕಿ ಭಾಗಗಳ ಪ್ರಮುಖ ಭಾಗವನ್ನು ಈ ಐಷಾರಾಮಿ ರಚನೆಯಲ್ಲಿ ಚಿತ್ರೀಕರಿಸಲಾಗುತ್ತದೆ. ತಂಡದ ಸದಸ್ಯರು ಪ್ರಸ್ತುತ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಸಿಂಗಾಪುರಕ್ಕೆ ತೆರಳಲಿದ್ದಾರೆ. ಬಳಿಕದ ಕೆಲ ದಿನಗಳ ಕಾಲ ಹೈದರಾಬಾದ್ ನಲ್ಲಿ ಚಿಒತ್ರೀಕರಣ ನಡೆಯಲಿದೆ.

"ರೆಮೋ" ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೇಕಡಾ 25 ರಷ್ಟು ಚಿತ್ರೀಕರಣ ಪೂರ್ಣವಾಗಿದೆ. ಡಿಸೆಂಬರ್ ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

"ರೆಮೋ" ಮೂಲಕ ಪೂರ್ಣ ಪ್ರಮಾಣದ ರೊಮ್ಯಾಂಟಿಕ್ ಡ್ರಾಮಾ ನಿರ್ದೇಶಕರಾಗುತ್ತಿರುವ ಪವನ್ ಒಡೆಯರ್ ತಮ್ಮ  ಹಿಂದಿನ ಸಂದರ್ಶನವೊಂದರಲ್ಲಿ ಇದು ಇಂದಿನ ಯುವಕರನ್ನು ಆಕರ್ಷಿಸಲಿದೆ ಎಂದಿದ್ದರು.ಅಲ್ಲದೆ ಮತ್ತು ಇದು ಸಾಮಾನ್ಯ ಪ್ರೇಮಕಥೆಯಾಗುವುದಿಲ್ಲ. ಈ ಚಿತ್ರದಲ್ಲಿ ಇಶಾನ್ ಇಮೇಜ್ ಮೇಕ್ ಓವರ್ ಆಗಿರಲಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಚಿತ್ರವನ್ನು ನಟನ ಸಹೋದರ ಸಿ.ಆರ್.ಮೋನೊಹರ್ ನಿರ್ಮಿಸಿದ್ದು, ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಚಿತ್ರಕ್ಕೆ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಸಂಗೀತ ಇದೆ. ಈ ಮೂಲನಿರ್ದೇಶಕ ಪವನ್ ಒಡೆಯರ್ ಹಾಗೂ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಲಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp