'ಬಿಚ್ಚುಗತ್ತಿ ಚಾಪ್ಟರ್-1' ಗಾಗಿ ಡಬ್ಬಿಂಗ್ ಸ್ಟುಡಿಯೊಗೆ ರಾಜವರ್ಧನ್ ಎಂಟ್ರಿ!

"ಬಿಚ್ಚುಗತ್ತಿ ಚಾಪ್ಟರ್-1 ದಳವಾಯಿ ದಂಗೆ" ಚಿತ್ರಕ್ಕಾಗಿ ಶುಕ್ರವಾರ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ರಾಜವರ್ಧನ್ ಡಬ್ಬಿಂಗ್ ನಡೆಸಿದ್ದಾರೆ. ಹರಿ ಸಂತೋಷ್ ನಿರ್ದೇಶನದ ಈ ಐತಿಹಾಸಿಕ ಚಿತ್ರದಲ್ಲಿ ನಟ ರಾಜವರ್ಧನ್ 15 ನೇ ಶತಮಾನದ ಪಾಳೇಗಾರ ಭರಮಣ್ಣನಾಯಕನ ಪಾತ್ರ ವಹಿಸಿದ್ದಾರೆ.
ರಾಜವರ್ಧನ್

ರಾಜವರ್ಡನ್ ಅವರಿಗೆ  ಡಬ್ಬಿಂಗ್ ಎಂಜಿನಿಯರ್ ರಾಜಶೇಖರ್ ಅವರ ಭಾಗಗಳನ್ನು ಡಬ್ ಮಾಡಲು ಸಹಾಯ ನೀಡಿದ್ದಾರೆ."ರಾಜಶೇಖರ್ ಅವರಿಗೆ ಭಾಷೆಯ ಮೇಲೆ ಉತ್ತಮ ಹಿಡಿತ ಇದೆ. ಅವರು ಸಾಕಷ್ಟು ಅರಿತಿದ್ದಾರೆ.ಅದರಲ್ಲಿಯೂ ಇತಿಹಾಸದ ಬಗೆಗೆ ಅವರಿಗೆ ಸಾಕಷ್ಟು ತಿಳುವಳಿಕೆ ಇದೆ." ನಟ ಹೇಳಿದ್ದಾರೆ.ಅವರು ಇನ್ನೆರಡು ದಿನಗಳಲ್ಲಿ ತಮ್ಮ ಭಾಗದ ಡಬ್ಬಿಂಗ್ ಪೂರ್ಣಗೊಳಿಸಲಿದ್ದಾರೆ.ಈ ಪಾತ್ರದ ನಿರ್ವಹಣೆಗೆ ಮುನ್ನ ನಟ ಹಲವು ವಿಧದ ತರಬೇತಿ ಹೊಂದಿದ್ದಾರೆ.

ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ "ಬಾಹುಬಲಿ" ಖ್ಯಾತಿಯ ಪ್ರಭಾಕರ್ ಕೂಡ ಖಳನಾಯಕನಾಗಿ ಮಿಂಚಿದ್ದಾರೆ.ಬಿ ಎಲ್ ವೇಣು ಬರೆದ ಕಾದಂಬರಿಯನ್ನು ಆಧರಿಸಿದ ಈ ಚಿತ್ರ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಇನ್ನು ಚಿತ್ರದ ಪ್ರಮುಖ ಪಾತ್ರಗಳಲ್ಲಿ ರೇಖಾ, ಕಲ್ಯಾಣಿ, ಶ್ರೀನಿವಾಸ್ ಮೂರ್ತಿ ಮತ್ತು ಡಿಂಗ್ರಿ ನಾಗರಾಜ್ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com