ಸಪ್ತಪದಿ ತುಳಿದ ಸಿಹಿಕಹಿ ಚಂದ್ರು ಪುತ್ರಿ

ಸಿಹಿಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್ ತಮ್ಮ ಗೆಳೆಯ ನಟ ಕಿರಣ್ ಶ್ರೀನಿವಾಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಪ್ತಪದಿ ತುಳಿದ ಸಿಹಿಕಹಿ ಚಂದ್ರು ಪುತ್ರಿ
ಸಪ್ತಪದಿ ತುಳಿದ ಸಿಹಿಕಹಿ ಚಂದ್ರು ಪುತ್ರಿ

ಬೆಂಗಳೂರು: ಸಿಹಿಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್ ತಮ್ಮ ಗೆಳೆಯ ನಟ ಕಿರಣ್ ಶ್ರೀನಿವಾಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ನಟ ಕಿರಣ್ ಶ್ರೀನಿವಾಸ್ ಗುರು ಹಿರಿಯರು ನಿಶ್ಚಯ ಮಾಡಿದ್ದ ಶುಭ ಮುಹೂರ್ತದಲ್ಲಿ ಹಿತಾ ಚಂದ್ರಶೇಖರ್‌ಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. 

ಈ ಜೋಡಿಯ ಮದುವೆ ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ನಡೆದಿದೆ. ಅನುಪಮಾ ಗೌಡ, ಕೃಷಿ ತಾಪಂಡ ಸೇರಿದಂತೆ ಕಿರುತೆರೆ ಮತ್ತು ಬೆಳ್ಳಿತೆರೆ ಕಲಾವಿದರು ಮದುವೆಗೆ ಬಂದು ನವ ಜೋಡಿಗೆ ಶುಭಾಶಯ ಕೋರಿದ್ದಾರೆ. ಕಿರಣ್ ಮತ್ತು ಹಿತಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ಬಗ್ಗೆ ನಟಿ ಸೋನು ಗೌಡ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದರು. ನಂತರ ಮೇ ತಿಂಗಳಲ್ಲಿ ಕಿರಣ್ ಹಾಗೂ ಹಿತಾ ಚಂದ್ರಶೇಖರ್ ಅವರು ಕುಟುಂಬದವರ ಸಮ್ಮುಖದಲ್ಲಿ ಪರಸ್ಪರ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com