ಚಿತ್ರದುರ್ಗದಲ್ಲಿ ಗಂಡುಗಲಿ ಮದಕರಿ ನಾಯಕನಿಗೆ ಮುಹೂರ್ತ: ಡಿ. 6 ರಂದು ಅಧಿಕೃತ ಚಾಲನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಗಂಡುಗಲಿ ಕುಮಾರ ನಾಯಕ ಚಿತ್ರಕ್ಕೆ ಗಂಡು ಮೆಟ್ಟಿದ ನಾಡು ಚಿತ್ರದುರ್ಗದಲ್ಲಿ ಇಂದು ಸಾಂಪ್ರದಾಯಿಕವಾಗಿ ಮುಹೂರ್ತ ನಡೆಯುತ್ತಿದ್ದು, ಡಿಸೆಂಬರ್ 6 ರಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. 
ಗಂಡುಗಲಿ ಮದಕರಿ ನಾಯಕನ ಸ್ಟಿಲ್
ಗಂಡುಗಲಿ ಮದಕರಿ ನಾಯಕನ ಸ್ಟಿಲ್

ಬೆಂಗಳೂರು: ಚಿತ್ರದ ಕೊನೆಯ ಪಾಳೆಯಗಾರನ ಐತಿಹಾಸಿಕ ಕಥಾ ಹಂದರ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಗಂಡುಗಲಿ ಕುಮಾರ ನಾಯಕ ಚಿತ್ರಕ್ಕೆ ಗಂಡು ಮೆಟ್ಟಿದ ನಾಡು ಚಿತ್ರದುರ್ಗದಲ್ಲಿ ಇಂದು ಸಾಂಪ್ರದಾಯಿಕವಾಗಿ ಮುಹೂರ್ತ ನಡೆಯುತ್ತಿದ್ದು, ಡಿಸೆಂಬರ್ 6 ರಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. 

ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತಿತರರು ಚಿತ್ರದುರ್ಗದ ಬರಗೆರಮ್ಮ ಹಾಗೂ ಏಕಾನಾಥೇಶ್ವರಿ ದೇವಾಲಯದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. 

ಮದಕರಿ ನಾಯಕ ಹಾಗೂ 15 ನೇ ಶತಮಾನದಲ್ಲಿನ ಯೋಧರು ಪ್ರತಿನಿತ್ಯ ಈ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆಯುತ್ತಿದ್ದರು ಎಂಬುದಾಗಿ ಇತಿಹಾಸ ಹೇಳುತ್ತದೆ.  ಚಿತ್ರದುರ್ಗದ ಮದಕರಿ ನಾಯಕ ಸರ್ಕಲ್ ನಲ್ಲಿ ಆತನ ಪುತ್ಹಳಿಗೆ ನಮನ ಸಲ್ಲಿಸಿದ ಚಿತ್ರತಂಡ ನಂತರ ಮುರುಘಾ ರಾಜೇಂದ್ರ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯ ಆಶೀರ್ವಾದ ಪಡೆದುಕೊಂಡಿತು.

ಹಿರಿಯ ಕಲಾವಿದರಾದ ಶ್ರೀನಿವಾಸ್ ಮೂರ್ತಿ, ದೊಡ್ಡಣ್ಣ ಅಲ್ಲದೇ ಮುಂಬೈ, ಹೈದ್ರಾಬಾದ್ ಮತ್ತು ಚೆನ್ನೈನಿಂದ ಬಂದಿರುವ ತಂತ್ರಜ್ಞರು, ಕಲಾ ನಿರ್ದೇಶಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಿ.ಎಲ್. ವೇಲು ಅವರ ಕಾದಂಬರಿ ಆಧಾರಿತ ಐತಿಹಾಸಿಕ ಚಿತ್ರ ಇದಾಗಿದೆ. 

ಗಂಡುಗಲಿ ಮದಕರಿ ನಾಯಕನ ಬಗ್ಗೆ ವಿವಿಧ ಇತಿಹಾಸ ತಜ್ಞರಿಂದ ನಿರ್ದೇಶಕರು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ನಾದಬ್ರಹ್ಮ ಹಂಸಲೇಖ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿಸಿದ್ದಾರೆ. ಅಶೋಕ್ ಕಶ್ಯಾಪ್ ಅವರ ವಾಯಾಗ್ರಹಣವಿರಲಿದೆ. ಚಿತ್ರದುರ್ಗ, ಮುಂಬೈ, ಹೈದ್ರಾಬಾದ್ ಹಾಗೂ ರಾಜಸ್ತಾನ್ ನಲ್ಲಿ ಚಿತ್ರೀಕರಣ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com