‘ಕಥಾ ಸಂಗಮ’ ಈ ವಾರ ತೆರೆಗೆ

ಈ ಹಿಂದೆ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸಾರಥ್ಯದಲ್ಲಿ ಮೂಡಿ ಬಂದಿದ್ದ 'ಕಥಾ ಸಂಗಮ’ ಪ್ರೇಕ್ಷಕರನ್ನು ಆಕರ್ಷಿಸಿತ್ತು. ವಿಭಿನ್ನ ಪ್ರಯೋಗ ಎಂಬ ಮೆಚ್ಚುಗೆಗೆ ಪಾತ್ರವಾಗಿತ್ತು.

Published: 02nd December 2019 07:59 PM  |   Last Updated: 02nd December 2019 07:59 PM   |  A+A-


A still From katha sanagama

ಕಥಾ ಸಂಗಮ ಪೋಸ್ಟರ್

Posted By : Lingaraj Badiger
Source : UNI

ಬೆಂಗಳೂರು: ಈ ಹಿಂದೆ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸಾರಥ್ಯದಲ್ಲಿ ಮೂಡಿ ಬಂದಿದ್ದ 'ಕಥಾ ಸಂಗಮ’ ಪ್ರೇಕ್ಷಕರನ್ನು ಆಕರ್ಷಿಸಿತ್ತು. ವಿಭಿನ್ನ ಪ್ರಯೋಗ ಎಂಬ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಅದೇ ಶೀರ್ಷಿಕೆಯೊಂದಿಗೆ ರಿಷಬ್ ಶೆಟ್ಟಿ ಫಿಲಂಸ್ ಹಾಗೂ ಶ್ರೀದೇವಿ ಎಂಟರ್‍ಟೈನರ್ಸ್ ಲಾಂಛನದಲ್ಲಿ ರಿಷಬ್ ಶೆಟ್ಟಿ, ಕೆ ಹೆಚ್ ಪ್ರಕಾಶ್ ಹಾಗೂ ಪ್ರದೀಪ್ ಎನ್ ಆರ್ ನಿರ್ಮಿಸಿರುವ ‘ಕಥಾ ಸಂಗಮ‘ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಏಳು ಕಥೆಗಳ ಸಂಗಮವಿರುವ ಈ ಚಿತ್ರವನ್ನು ಏಳು ಜನ ನಿರ್ದೇಶಕರು ನಿರ್ದೇಶಿಸಿದ್ದಾರೆ. ಮೊದಲ ಕಥೆಯನ್ನು ಶಶಿಕುಮಾರ್ ನಿರ್ದೇಶಿಸಿದ್ದು, ಜಯಂತ್ ಸೀಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆಯನ್ನು ರಾಜ್ ಬಿ ಶೆಟ್ಟಿ, ಅನಿರುದ್ಧ್ ಮಹೇಶ್ ಬರೆದಿದ್ದಾರೆ. ಗೊಮಟೇಶ್ ಉಪಾಧ್ಯೆ ಛಾಯಾಗ್ರಹಣ, ದಾಸ್ ಮೊಡ್ ಸಂಗೀತ ನಿರ್ದೇಶನ ಹಾಗೂ ಆರ್ಯ ಅವರ ಸಂಕಲನವಿದೆ.
ರಾಜ್.ಬಿ.ಶೆಟ್ಟಿ, ಅಮೃತ ನಾಯಕ್, ಜೆ.ಪಿ ತುಮ್ಮಿನಾಡ್ ತಾರಾಬಳಗದಲ್ಲಿದ್ದಾರೆ.

ಎರಡನೇ ಕಥೆಯನ್ನು ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶಿಸಿದ್ದಾರೆ. ಕಿಶೊರ್, ಯಜ಼ ಶೆಟ್ಟಿ, ಬಾಬು ಮೃದುನಿಕ ನಟಿಸಿರುವ ಈ ಕಥೆಗೆ ಗಗನ್ ಬಡೇರಿಯ ಸಂಗೀತ ನೀಡಿದ್ದಾರೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಹಾಗೂ ರಿತ್ವಿಕ್ ರಾವ್ ಸಂಕಲನ ಈ ಚಿತ್ರಕ್ಕಿದೆ.

ಮೂರನೇ ಕಥೆಗೆ ಮಾಧುರಿ ಎನ್ ರಾವ್ ಹಾಗೂ ಕರಣ್ ಅನಂತ್ ಕಥೆ, ಚಿತ್ರಕಥೆ ಬರೆದಿದ್ದು, ಕರಣ್ ಅನಂತ್ ನಿರ್ದೇಶಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಸೌಮ್ಯ, ಜಗನ್‌ಮೂರ್ತಿ, ವಸು ದೀಕ್ಷಿತ್ ಅಭಿನಯಿಸಿದ್ದಾರೆ. ದೀಪಕ್ ಛಾಯಾಗ್ರಹಣ, ವಸು ದೀಕ್ಷಿತ್ ಸಂಗೀತ ನಿರ್ದೇಶನ ಹಾಗೂ ಭರತ್ ಎಂ.ಸಿ ಅವರ ಸಂಕಲನ ಈ ಚಿತ್ರಕ್ಕಿದೆ.

ನಾಲ್ಕನೇ ಕಥೆಯ ತಾರಾಬಳಗದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ಬಾಲಾಜಿ ಮನೋಹರ್ ಇದ್ದಾರೆ. ರಾಹುಲ್ ಪಿ.ಕೆ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸಂದೀಪ್ ಅವರ ಛಾಯಾಗ್ರಹಣ, ವಿನಾಯಕ್ ಗುರುನಾರಾಯಣ್ ಅವರ ಸಂಕಲನವಿದೆ.

ಐದನೇ ಕಥೆಯನ್ನು ಜಮದಗ್ನಿ ಮನೋಜ್ ನಿರ್ದೇಶಿಸಿದ್ದಾರೆ. ಅವಿನಾಶ್, ಹರಿ ಸಮಶ್ಟಿ ಅಭಿನಯಿಸಿದ್ದಾರೆ. ರಘುನಾಥ್ ಛಾಯಾಗ್ರಹಣ, ಅಭೀಷೇಕ್ ಅವರ ಸಂಕಲನ ಹಾಗೂ ಗಿರೀಶ್ ಹಾತೂರ್ ಅವರ ಸಂಗೀತ ನಿರ್ದೇಶನವಿದೆ.

ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯ ನಟನೆಯ ಆರನೇ ಕಥೆಯನ್ನು ಕಿರಣ್ ರಾಜ್ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ರೂಬಿ(ನಾಯಿ) ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ.. ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ, ರಿತ್ವಿಕ್ ರಾವ್ ಅವರ ಸಂಕಲನ ಹಾಗೂ ನೊಬಿನ್ ಪಾಲ್ ಅವರ ಸಂಗೀತ ನಿರ್ದೇಶನವಿದೆ.

ಏಳನೇ ಕಥೆಯಲ್ಲಿ ಪ್ರಣವ್, ರಾಘವೇಂದ್ರ, ಬೀರೇಶ್ ಪಿ ಬಂಡೆ, ನಿಧಿ ಹೆಗ್ಡೆ ಅಭಿನಯಿಸಿದ್ದು, ಜೈ ಶಂಕರ್ ಅವರ ರಚನೆ ಹಾಗೂ ನಿರ್ದೇಶನವಿದೆ. ಸೌರವ್ ಪ್ರತೀಕ್ ಸನ್ಯಾಲ್ ಛಾಯಾಗ್ರಹಣ, ಚಂದನ್ ಸಂಕಲನ ಹಾಗೂ ವಾಸುಕಿ ವೈಭವ್ ಸಂಗೀತ ನಿರ್ದೇಶನವಿದೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp