ಮೊಟ್ಟ ಮೊದಲ ಮ್ಯೂಸಿಕ್ ವಿಡಿಯೋದಲ್ಲಿ 'ಬಸಣ್ಣಿ' ಖ್ಯಾತಿಯ 'ತಾನ್ಯಾ ಹೋಪ್'

ಯಜಮಾನ ಮತ್ತು ರೆಬೆಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಟ್ಟಿನೆಲೆ ಕಂಡುಕೊಂಡಿದ್ದ ಬಸಣ್ಣಿ ಖ್ಯಾತಿಯ 'ತಾನ್ಯಾ ಹೋಪ್' ಮೊಟ್ಟ ಮೊದಲ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

Published: 02nd December 2019 01:15 PM  |   Last Updated: 02nd December 2019 01:15 PM   |  A+A-


Tanya Hope

ಸಂಗ್ರಹ ಚಿತ್ರ

Posted By : Srinivasamurthy VN
Source : The New Indian Express

ಬೆಂಗಳೂರು: ಯಜಮಾನ ಮತ್ತು ರೆಬೆಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಟ್ಟಿನೆಲೆ ಕಂಡುಕೊಂಡಿದ್ದ ಬಸಣ್ಣಿ ಖ್ಯಾತಿಯ 'ತಾನ್ಯಾ ಹೋಪ್' ಮೊಟ್ಟ ಮೊದಲ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ಹೌದು..ಕನ್ನಡ ರ್ಯಾಪರ್ ಅಲೋಕ್ ಅವರ ಮಾರಮ್ಮನ್ ಡಿಸ್ಕೋ ಎಂಬ ಮ್ಯೂಸಿಕ್ ವಿಡಿಯೋದಲ್ಲಿ ತಾನ್ಯಾ ಹೋಪ್ ಹೆಜ್ಜೆ ಹಾಕಲಿದ್ದಾರೆ. ಅಲೋಕ್ ಅವರಿಗೆ 21ನೇ ಮ್ಯೂಸಿಕ್ ವಿಡಿಯೋ ಆಗಿದ್ದು, ತಾನ್ಯಾಹೋಪ್ ಕೇಂದ್ರಾಕರ್ಷಣೆಯಾಗಿದ್ದಾರೆ.

ಈ ಕುರಿತಂತೆ ಮಾತನಾಡಿರುವ ರ್ಯಾಪರ್ ಅಲೋಕ್, ಯಜಮಾನ ಚಿತ್ರದ ಬಸಣ್ಣಿ ಚಿತ್ರದ ಮೂಲಕ ತಾನ್ಯಾ ತಮ್ಮ ಡ್ಯಾನ್ಸ್ ಕೌಶಲ್ಯವನ್ನು ಜಗಜ್ಜಾಹಿರು ಮಾಡಿದ್ದರು. ಇದೀಗ ತಾನ್ಯಾ ಪೂರ್ಣ ಪ್ರಮಾಣದಲ್ಲಿ ತಮ್ಮ ಡ್ಯಾನ್ಸ್ ಕೌಶಲ್ಯವನ್ನು ತೋರಿಸಲು ಸೂಕ್ತ ಸಮಯವಾಗಿದ್ದು, ಇದೇ ಕಾರಣಕ್ಕೆ ತಾನ್ಯಾ ಈ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಮಾರಮ್ಮನ್ ಡಿಸ್ಕೋ ಮ್ಯೂಸಿಕ್ ಆಲ್ಪಂ ಕುರಿತು ನಾನು ತಾನ್ಯಾ ಅವರಿಗೆ ವಿವರಿಸಿದ್ದು, ಅವರೂ ಕೂಡ ಬಹಳ ಇಷ್ಟಪಟ್ಟಿದ್ದಾರೆ. ಈ ಮ್ಯೂಸಿಕ್ ವಿಡಿಯೋ ನಾಲ್ಕು ಭಾಷೆಗಳಲ್ಲಿ ಅಂದರೆ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಇನ್ನು ಮ್ಯೂಸಿಕ್ ವಿಡಿಯೋದಲ್ಲಿ ಟೆನ್ನಿಸ್ ಕೃಷ್ಣ ಅವರೂ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp