'ಕಥಾ ಸಂಗಮ': ಒಂದು ಚಿತ್ರದಲ್ಲಿ 7 ನಿರ್ದೇಶಕರ ಸಮಾಗಮ

ಕಥಾ ಸಂಗಮ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದ ಸಿನಿಮಾವಾಗಿದ್ದು, ಏಳುಕಥೆಗಳ ಸಿನಿಮಾ ಎನ್ನುವುದು ಒಂದೆಡೆಯಾದರೆ, ಏಳು ನಿರ್ದೇಶಕರು, ಏಳು ಸಂಗೀತ ನಿರ್ದೇಶಕರು ಹಾಗೂ ಏಳು ಮಂದಿ ಛಾಯಾಗ್ರಾಹಕರ ಕೆಲಸ ಮಾಡುವುದು ಇಲ್ಲಿ ವಿಶೇಷವಾಗಿದೆ.
'ಕಥಾ ಸಂಗಮ': ಒಂದು ಚಿತ್ರದಲ್ಲಿ 7 ನಿರ್ದೇಶಕರ ಸಮಾಗಮ
'ಕಥಾ ಸಂಗಮ': ಒಂದು ಚಿತ್ರದಲ್ಲಿ 7 ನಿರ್ದೇಶಕರ ಸಮಾಗಮ

ಕಥಾ ಸಂಗಮ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದ ಸಿನಿಮಾವಾಗಿದ್ದು, ಏಳುಕಥೆಗಳ ಸಿನಿಮಾ ಎನ್ನುವುದು ಒಂದೆಡೆಯಾದರೆ, ಏಳು ನಿರ್ದೇಶಕರು, ಏಳು ಸಂಗೀತ ನಿರ್ದೇಶಕರು ಹಾಗೂ ಏಳು ಮಂದಿ ಛಾಯಾಗ್ರಾಹಕರ ಕೆಲಸ ಮಾಡುವುದು ಇಲ್ಲಿ ವಿಶೇಷವಾಗಿದೆ. 

ರಿಷಭ್ ಶೆಟ್ಟಿ ನಿರ್ಮಾಣದ ಕಥಾ ಸಂಗಮ ಚಿತ್ರ ಡಿ.6ಕ್ಕೆ ತೆರೆಗೆ ಅಪ್ಪಳಿಸಲಿದೆ. ಕನ್ನಡದ ಮಹಾನ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ವಿಭಿನ್ನ ಪ್ರಯೋಗಗಳ ಮೂಲಕ ಚಂದನವನದ ಕೀರ್ತಿಯನ್ನು ಪಸರಿಸಿದವರು. ೧೯೭೬ರಲ್ಲಿ ಅವರು 5 ಕಥೆಗಳನ್ನು ಒಟ್ಟಾಗಿಸಿ 'ಕಥಾ ಸಂಗಮ’ ಚಿತ್ರ ಮಾಡಿದ್ದರು. ಇದೀಗ ಉತ್ಸಾಹಿ ಯುವ ನಿರ್ದೇಶಕ, ನಟ ರಿಷಬ್ ಶೆಟ್ಟಿ ಸಹ ಅಂತಹ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಏಳು ವಿಭಿನ್ನ ಸಂಸ್ಕೃತಿಯ, ನೆಲದ, ಸೊಗಡಿನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಚಿತ್ರ ನಿರ್ಮಾಣಗೊಂಡಿದ್ದು, ಹೊಸ ಮತ್ತು ಅನುಭವಿ ಕಲಾವಿದರು ನಟಿಸಿದ್ದಾರೆ. ಹೊಸ ನಿರ್ದೇಶಕರಿಗೆ ಚಿತ್ರದಲ್ಲಿ ಅವಕಾಶ ನೀಡಲಾಗಿದೆ. 

ಚಿತ್ರವನ್ನು ಕಿರಣ್ ರಾಜ್ ಕ. ಚಂದ್ರಜಿತ್ ಬೆಳ್ಳಿಯಪ್ಪ, ಶಶಿ ಕುಮಾರ್ ಪಿ, ರಾಹುಲ್ ಪಿಕೆ. ಜಮದಾಗ್ನಿ ಮನೋಜ್, ಕರಣ್ ಅನಂತ್ ಮಂತು ಜಯಶಂಕರ್ ನಿರ್ದೇಶಿಸಿದ್ದಾರೆ. ಚಿತ್ರದ ಬಗ್ಗೆ 7 ನಿರ್ದೇಶಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ...

ಚಿತ್ರ ಕಥೆ ಅತ್ಯಂತ ಸರಳವಾಗಿದೆ. ತಂದೆ, ತಾಯಿ ಹಾಗೂ ಮಗಳ ಪ್ರೀತಿ, ಸಂತೋಷಗಳ ನಡುವೆ ಚಿತ್ರ ಸುತ್ತಾಡುತ್ತದೆ. ಒಬ್ಬ ತಂದೆ ಮಗಳ ಮೇಲೆ ಇಟ್ಟಿರುವ ಪ್ರೀತಿ ಹಾಗೂ ಆಕೆಯೊಂದಿಗಿರುವ ವಿಶೇಷ ಸಂಬಂಧ, ಆಕೆಯೊಂದಿಗೆ ತಂದೆ ಮಗುವಾಗರು ಒಲವು ತೋರುವುದು ಹೇಗೆ ಎಂಬುದನ್ನು ಚಿತ್ರದಲ್ಲಿ ವಿವರಿಸಲಾಗಿದೆ. ಈ ಸಂಬಂಧ ಜನರ ಮುಖದಲ್ಲೂ ನಗುವನ್ನು ತರಿಸುತ್ತದೆ ಎಂದು ಚಂದ್ರಜಿತ್ ಬೆಳ್ಳಿಯಪ್ಪ ಹೇಳಿದ್ದಾರೆ. 

60 ವರ್ಷದ ಸತ್ಯಮೂರ್ತಿ ವಿಮಾ ಕಂಪನಿಯಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ನಿವೃತ್ತಿಗೂ ಮುನ್ನ ಅವರಲ್ಲಿರುವ ಆತಂಕ ವಿಷಾದನೀಯ ಹಂತಕ್ಕೆ ತಲುಪುತ್ತದೆ. ಅವರನ್ನು ಅವರು ಹೇಗೆ ಶಾಂತಪಡಿಸಿಕೊಳ್ಳುತ್ತಾರೆ? ಎಂಬುದು ಚಿತ್ರದಲ್ಲಿ ಮುಖ್ಯವಾಗಿದೆ. ಚಿತ್ರ ಕಥೆಯನ್ನು ಮಾಧುರಿ ಎನ್ ರಾವ್ ಅವರು ಬರೆದಿದ್ದು, ಪ್ರಕಾಶ್ ಬಳಾಡಿ, ಸೌಮ್ಯ ಜಗನ್ ಮೂರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತವನ್ನು ವಾಸು ದೀಕ್ಷಿತ್, ದೀಪಕ್ ಯೆರಗಾರ ನೀಡಿದ್ದಾರ. ಕಿರಣ್ ಅವರು ಸಾಕಷ್ಟು ಕಿರು ಚಿತ್ರಗಳನ್ನು ಮಾಡಿದ್ದು, ಸಾಕಷ್ಟು ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಶಶಿ ಕಮಾರ್ ಪಿ
2013ರಿಂದಲೂ ಶಶಿಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಥಾ ಸಂಗಮದಲ್ಲಿ ಶಶಿ ಕೂಡ ನಿರ್ದೇಶಕರಾಗಿದ್ದಾರೆ. ಲೂಸಿಯಾ, ಉಳಿದವರು ಕಂಡಂತೆ, ರಿಕ್ಕಿ, ಕಿರಿಕ್ ಪಾರ್ಟಿಯಲ್ಲಿ ಶಶಿ ಅವರು ಪಾತ್ರ ನಿಭಾಯಿಸಿದ್ದಾರೆ. ನನ್ನ ಕಥೆ ಫ್ಯಾಂಟಸಿ ಹಾಸ್ಯ-ನಾಟಕವಾಗಿದೆ. ಅತ್ಯಂತ ಚಿಕ್ಕದಾದರೂ, ಜಾನಪದ ರೀತಿಯಲ್ಲಿ ಸಂಯೋಜಿಸಲ್ಪಟ್ಟ ವೈಜ್ಞಾನಿಕ ಕಾದಂಬರಿಯ ಪ್ರಮುಖ ಅಂಶವನ್ನು ಹೊಂದಿದೆ. ಪ್ರೀತಿಯಲ್ಲಿ ಬಿದ್ದ ವಿನಿ ಜೀವನದಲ್ಲಿ ಸಾಕಷ್ಟು ಸಂಕಷ್ಟ ಎದುರಿಸುತ್ತಿರುತ್ತಾರೆ. ವಿನಿ ಜೀವನ ಶೈಲಿ ಕಂಡು ಆತನ ಗರ್ಲ್ ಫ್ರೆಂಡ್ ಅಸಮಾಧಾನಗೊಂಡು ಬ್ರೇಕ್ ಅಪ್ ಮಾಡಿಕೊಳ್ಳಲು ಮುಂದಾಗಿರುತ್ತಾಲೆ. ಇಂತಹ ಸಂದರ್ಭದಲ್ಲಿ ನಿಮಗೆ ಎರಡನೇ ಅವಕಾಶ ಸಿಕ್ಕರೆ ಏನು ಮಾಡುತ್ತೀರಿ? ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ವಿನಿ ಹೇಗೆ ನಿಭಾಯಿಸುತ್ತಾನೆಂಬುದು ಚಿತ್ರವಾಗಿದೆ ಎಂದು ಶಶಿ ಹೇಳಿದ್ದಾರೆ. 

ಕಿರಣ್ ರಾಜ್
ಕಿರಣ್ ರಾಜ್ ಅವರು ನಿರ್ದೇಶಿಸಿರುವ ಕಿರು ಚಿತ್ರಗಳು 6ನೇ ಸ್ಥಾನದಲ್ಲಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ, ಹರಿಪ್ರಿಯಾ, ನಾಯಿ ರುಮಿ ಪ್ರಮುಖ ಪಾತ್ರ ನಿಭಾಯಿಸಿವೆ. ನನ್ನ ಚಿತ್ರದ ಹೈಲೈಟ್ಸ್ ಎಂದರೆ, ಸಂಭಾಷಣೆಗಳೇ ಇಲ್ಲದಿರುವುದು. ನಾಯಕ-ನಾಯಕಿ ಕೇವಲ ತಮ್ಮ ಅಭಿವ್ಯಕ್ತಿಯಿಂದಲೇ ಸಂಭಾಷಣೆ ನಡೆಸುತ್ತಾರೆ. ರಿಕ್ಕಿ ಚಿತ್ರದಲ್ಲಿ ರಿಷಬ್ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದಾಗಲೇ ಈ ಚಿತ್ರದ ಬಗ್ಗೆ ಯೋಜನೆ ರೂಪಿಸಲಾಗಿತ್ತು. ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಜೊತೆಗೆ ಕಿರುಚಿತ್ರ ತಯಾರಿಸುವ ಬಗ್ಗೆಯಷ್ಟೇ ಚಿಂತಿಸಿದ್ದೆ. ಇದೀಗ ದೊಡ್ಡ ಚಿತ್ರವನ್ನೇ ಮಾಡಲಾಗಿದೆ. ಕಥಾ ಸಂಗಮ ಆಲೋಚನೆ ಬಂದಾಗ ರಿಷಬ್ ಅವರು ನಿರ್ದೇಶನ ಮಾಡುವಂತೆ ನನಗೆ ತಿಳಿಸಿದರು. ಚಿತ್ರದಲ್ಲಿ ರಿಷಬ್ ಅವರು ಭಿಕ್ಷಕನ ಪಾತ್ರ ನಿಭಾಯಿಸಿದ್ದು, ಚಿತ್ರೀಕರಣವನ್ನು ರಮೇಶ್ವರಮ್ ಹಾಗೂ ಥನುಷ್ಕೊಡಿಯಲ್ಲಿ ನಡೆಸಲಾಗಿದೆ ಎಂದು ಕಿರಣ್ ತಿಳಿಸಿದ್ದಾರೆ. 

ರಾಹುಲ್ ಪಿಕೆ
ಎರಡು ವಿರುದ್ಧ ಸಿದ್ಧಾಂತಗಳನ್ನು ಹೊಂದಿರುವ ವ್ಯಕ್ತಿಗಳು ಒಂದು ಕೊಠಡಿಯಲ್ಲಿ ಸಿಲುಕಿಕೊಂಡಿರುತ್ತಾರೆ. ಇಬ್ಬರ ನಡುವೆ ಏನಾಗುತ್ತದೆ ಎಂಬುದೇ ಚಿತ್ರವಾಗಿದೆ. ಚಿತ್ರವನ್ನು ರಾಹುಲ್ ಅವರು ನಿರ್ದೇಶಿಸಿದ್ದು, ಬಾಲಾಜಿಮನೋಹರ್ ಅವರು ಹೆಚ್ಚುವರಿ ಚಿತ್ರಕಥೆಯನ್ನು ನೋಡಿಕೊಕಂಡಿದ್ದಾರೆ. ಪ್ರಮೋದ್ ಶೆಟ್ಟಿ, ರಾಮ್ ಮನ್ಜೋನಾಥ್, ಶಾರೀ ಹರ್ಷ ಮಲಯಾ ಹಾಗೂ ಪ್ರಸಾದ್ ಕೂಡ ಚಿತ್ರಕಥೆಯನ್ನು ನೋಡಿಕೊಕಂಡಿದ್ದಾರೆ. ಛಾಯಾಗ್ರಹಣವನ್ನು ಸಂದೀಪ್ ಪಿಎಸ್ ಮಾಡಿದ್ದಾರೆ. 

ಜಮದಾಗ್ನಿ ಮನೋಜ್
ಜಮ್ದಂಗ್ಣಿ ಮನೋಜ್ ಅವರು 1990ರ ದಶಕದಲ್ಲಿ ಮೈಸೂರು ಪ್ರಾಂತ್ಯದಲ್ಲಿ ಸ್ವಾಂತತ್ರ್ಯ ಹೋರಾಟದ ಸಂದರ್ಭದಲ್ಲಿ ಒಂದು ಅವಧಿಯ ನಾಟಕವನ್ನು ನಿರ್ದೇಶಿಸಿದ್ದಾರೆ. ಕುಟುಂಬ ಹಾಗೂ ಸ್ನೇಹಿತರನ್ನು ಕಳೆದುಕೊಂಡ ಕ್ಷೌರಿಕನ ಬಗ್ಗೆ ಕಥೆ ಸಾಗುತ್ತದೆ. ಬ್ರಿಟೀಷರ ಬಳಿ ಕೆಲಸ ಮಾಡುತ್ತಿರುವ ಅಧಿಕಾರಿ ಕಾಳಪ್ಪ ಕ್ಷೌರಿಕನ ಬಳಿ ತೆರಳುತ್ತಾನೆ. ಈ ವೇಳೆ ಿಬ್ಬರ ನಡುವೆ ಎನಾಗುತ್ತದೆ ಎಂಬುದು ಚಿತ್ರದ ಕಥೆಯಾಗಿದೆ ಎಂದು ಮನೋಜ್ ಹೇಳಿದ್ದಾರೆ. 

ಜೈಶಂಕರ್
ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜೈಶಂಕರ್ ಅವರು ವಾರಾಂತ್ಯದ ದಿನಗಳಲ್ಲಿ ಕಿರು ಚಿತ್ರಗಳನ್ನು ನಿರ್ದೇಶಿಸುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಚಿತ್ರ ನಿರ್ದೇಶಿಸುವುದು ನನ್ನ ವೃತ್ತಿಪರದ ಒಂದು ಭಾಗವಾಗಿದೆ. ಉತ್ತರ ಕರ್ನಾಟಕದಿಂದ ನಗರಕ್ಕೆ ವಲಸೆ ಬರುವ ಮಹಿಳೆಯ ಪಾತ್ರವನ್ನು ನನ್ನ ಚಿತ್ರದಲ್ಲಿ ವಿವರಿಸಲಾಗಿದೆ. ಚಿತ್ರದಲ್ಲಿ ವೃತ್ತಿಪರರಲ್ಲದ ಪಾತ್ರಧಾರಿಗಳನ್ನು ಚಿತ್ರದಲ್ಲಿ ಪರಿಚಯಿಸಲಾಗಿದೆ ಎಂದು ಜೈಶಂಕರ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com