ಸಿನಿಮಾ ನಿರ್ಮಾಣದ ದೃಷ್ಟಿಕೋನವನ್ನೇ ಬದಲಾಯಿಸುತ್ತದೆ ಕಥಾಸಂಗಮ: ರಿಷಬ್ ಶೆಟ್ಟಿ

7 ಕಥೆಗಳನ್ನು ಒಟ್ಟುಗೂಡಿಸಿ ತಯಾರು ಮಾಡಿರುವ ಕಥಾ ಸಂಗಮ ಸಿನಿಮಾ ಪ್ರೇಕ್ಷಕರಲ್ಲಿ ವಿಭಿನ್ನ ಮನಸ್ಥಿತಿ ರೂಪಿಸುತ್ತದೆ,  ಒಂದೇ ಸಿನಿಮಾ ರೇಟ್ ಗೆ 7 ವಿಭಿನ್ನ ಕಥೆಗಳನ್ನ ನೋಡಬಹುದಾಗಿದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ
ಕಥಾ ಸಂಗಮ ಪೋಸ್ಟರ್
ಕಥಾ ಸಂಗಮ ಪೋಸ್ಟರ್

7 ಕಥೆಗಳನ್ನು ಒಟ್ಟುಗೂಡಿಸಿ ತಯಾರು ಮಾಡಿರುವ ಕಥಾ ಸಂಗಮ ಸಿನಿಮಾ ಪ್ರೇಕ್ಷಕರಲ್ಲಿ ವಿಭಿನ್ನ ಮನಸ್ಥಿತಿ ರೂಪಿಸುತ್ತದೆ,  ಒಂದೇ ಸಿನಿಮಾ ರೇಟ್ ಗೆ 7 ವಿಭಿನ್ನ ಕಥೆಗಳನ್ನ ನೋಡಬಹುದಾಗಿದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.

ಹಿರಿಯ ನಿರ್ದೇಶಕ ಪುಟ್ಟಣ್ಣ ಅವರಿಗೆ ಈ ಸಿನಿಮಾವನ್ನು ರಿಷಬ್ ಶೆಟ್ಟಿ ಸಮರ್ಪಿಸಿದ್ದಾರೆ, ಕಥಾ ಸಂಗಮ ಸಿನಿಮಾ ನೋಡಿದ ಮೇಲೆ ವಿಕ್ಷಕರಿಗೆ ಸಿನಿಮಾ ನಿರ್ಮಾಣದ ಬಗ್ಗೆ ಇರುವ ದೃಷ್ಠಿಕೋನ ಬದಲಾಗುತ್ತದೆ ಎಂದು ಹೇಳಿದ್ದಾರೆ. 

ಪುಟ್ಟಣ್ಣ ಅವರು ದೊಡ್ಡ ಯೂನಿವರ್ಸಿಟಿ, ಕಥಾ ಸಂಗಮದಂತ ಪ್ರಾಜೆಕ್ಟ್ ಮಾಡುವುದು ನನ್ನ ಅದೃಷ್ಟ ಎಂದು ಹೇಳಿರುವ ರಿಷಬ್ ಶೆಟ್ಟಿ ಪುಟ್ಟಣ್ಣ ಅವರ ಜೊತೆ ಕೆಲಸ ಮಾಡಿದ್ದ  ಫೋಟೋ ಗ್ರಾಫರ್ ಅಶ್ವತ್ಥ ನಾರಾಯಣ ಎಂಬುವರನ್ನು ಭೇಟಿ ಮಾಡಿದ್ದರಂತೆ.

ಅಶ್ವತ್ಥ ನಾರಾಯಣ ಪ್ರಗತಿ ಸ್ಟುಡಿಯೋ ಮಾಲೀಕರಾಗಿದ್ದಾರೆ ಕಥಾ ಸಂಗಮ ಹೊರತು ಪಡಿಸಿ ಪುಟ್ಟಣ್ಣ ಅವರ ಎಲ್ಲಾ ಸಿನಿಮಾಗಳಲ್ಲು ಕೆಲಸ ಮಾಡಿದ್ದಾರೆ. ಪುಟ್ಟಣ್ಣ ಅವರ ಅಪರೂಪದ ಮೂರು ಫೋಟೋಗನ್ನು ಅವರಿಂದ ರಿಷಬ್ ಪಡೆದುಕೊಂಡಿದ್ದಾರೆ.

ಪುಟ್ಟಣ್ಣ ಅವರೊಬ್ಬ ಲೆಜೆಂಡ್, ಅವರು ಪಾತ್ರಗಳನ್ನು ಹೇಗೆ ರೂಪಿಸುತ್ತಿದ್ದರು ಎಂಬುದು ಅದ್ಭುತವಾಗಿರುತ್ತದೆ. ಅವರು ಭಾವಾನಾತ್ಮಕ ಸನ್ನಿವೇಶಗಳನ್ನು ವ್ಯಕ್ತ ಪಡಿಸುವ ರೀತಿ, ಸಿನಿಮಾ ಪರದೆಯಿಂದ ಪಾತ್ರಗಳು ಎದ್ದು ಬರುವ ರೀತಿಯಲ್ಲಿರುತ್ತಿದ್ದವು ಎಂದು ಹೇಳಿದ್ದಾರೆ. 

ರಿಷಬ್ ಶೆಟ್ಟಿ ಫಿಲಂಸ್ ಹಾಗೂ ಶ್ರೀದೇವಿ ಎಂಟರ್‍ಟೈನರ್ಸ್ ಲಾಂಛನದಲ್ಲಿ ರಿಷಬ್ ಶೆಟ್ಟಿ, ಕೆ.ಹೆಚ್.ಪ್ರಕಾಶ್ ಹಾಗೂ ಪ್ರದೀಪ್.ಎನ್.ಆರ್ ಅವರು ನಿರ್ಮಿಸಿರುವ ಕಥಾ ಸಂಗಮ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com