ಬಬ್ರೂ ಜೊತೆಗಿನ ಪ್ರಯಾಣ ಅವಿಸ್ಮರಣೀಯ: ಸುಮನ್ ನಗರ್ ಕರ್ 

ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ.  ಈ ಸಲ ಅವರು ನಿರ್ಮಾಪಕಿಯಾಗಿಯೂ ಹೊಸ ಹೆಜ್ಜೆ ಇಟ್ಟಿದ್ದಾರೆ.
ಬಬ್ರೂ ಪೋಸ್ಚರ್
ಬಬ್ರೂ ಪೋಸ್ಚರ್

ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ.  ಈ ಸಲ ಅವರು ನಿರ್ಮಾಪಕಿಯಾಗಿಯೂ ಹೊಸ ಹೆಜ್ಜೆ ಇಟ್ಟಿದ್ದಾರೆ. ಅಮೇರಿಕಾದಲ್ಲಿಯೇ ಬಹುಭಾಗ ಚಿತ್ರೀಕರಣ ನಡೆದಿರುವ ಸಿನಿಮಾ ಬಬ್ರೂ ಚಿತ್ರದಲ್ಲಿ ಅಭಿನಯಿಸುವುದರ ಜಿತೆ ಪತಿಯೊಂದಿಗೆ ಬಂಡವಾಳ ಸಹ ಹೂಡಿದ್ದಾರೆ.

ವಿದೇಶದಲ್ಲೇ ಸಂಪೂರ್ಣ ಚಿತ್ರೀಕರಣಗೊಂಡಿರುವ ಮೊದಲ ಕನ್ನಡ ಚಿತ್ರ ಬಬ್ರೂ ಎನ್ನಬಹುದು. ಕೆಲವು ಚಿತ್ರಗಳಲ್ಲಿ ಕತೆ ವಿದೇಶದಲ್ಲಿ ಹುಟ್ಟಿಕೊಂಡರೂ ಅದು ಮುಂದೆ ನಮ್ಮ ನಾಡಿಗೆ ಶಿಫ್ಟ್ ಆಗುತ್ತದೆ. ಆದರೆ ಈ ಸಿನಿಮಾಗೆ ಅಮೇರಿಕಾ ಮತ್ತು ಅಲ್ಲಿನ ಸುಂದರ ಪರಿಸರಗಳಲ್ಲಿ ಶೂಟ್ ಮಾಡಲಾಗಿದೆ .

ಸಂಗೀತ ನಿರ್ದೇಶಕ ಕರ್ ಇಬ್ಬರೂ ಪರಿಚಯವಾಗಿ ಬಬ್ರೂ ಎನ್ನುವ ಕಾರಿನಲ್ಲಿ ಮೆಕ್ಸಿಕೋದಿಂದ ಕೆನಡಾವರೆಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ನಡೆಯುವ ಕುತೂಹಲಕಾರಿ ಘಟನೆಗಳೇ ಈ ಚಿತ್ರದ ಕಥಾವಸ್ತು.

ಇದರಿಂದ ಇಬ್ಬರಿಗೂ ತೊಂದರೆ ಆಗುತ್ತದೆಯೇ ? ಅವರು ತಮ್ಮ ಗುರಿಯನ್ನು ತಲುಪುತ್ತಾರೋ ಎಂಬುದನ್ನು ಚಿತ್ರ ಹೇಳುತ್ತದೆ. ಗ್ರಾಂಡ್ ಕ್ಯಾನನ್, ಡೆತ್‍ವ್ಯಾಲಿ, ಜಿಯಾನ್, ಅವೆನ್ಯೂ ಆಫ್ ಜೈನ್ಸ್, ಮಾರ್ಗ ಮದ್ಯೆ ಬರುವ ಲ್ಯಾಂಡ್‍ಸ್ಕೋಪ್‍ಗಳ ಸುಂದರ ತಾಣಗಳನ್ನು ಚಿತ್ರದಲ್ಲಿ ಸೆರೆಹಿಡಿಯಲಾಗಿದೆ ಎಂದು ಕಳೆದ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ನಾಗತಿ ಹಳ್ಳಿ ಚಂದ್ರಶೇಖರ್ ಅವರ ಇಷ್ಟಕಾಮ್ಯ ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದೆ,  ಅದಾದ ನಂತರ ಜಿರ್ಜಿಂಬೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೆ, ಆದರೆ ಬಬ್ರೂ ಸಿನಿಮಾದಲ್ಲಿ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಹಾಗೂ ಪೂರ್ಣ ಪ್ರಮಾಣದ ನಿರ್ಮಾಪಕಿಯಾಗಿದ್ದೇನೆ ಎಂದು ಹೇಳಿದ್ದಾರೆ. ಸಿನಿಮಾ ರಂಗ ಬಿಡುವ ಕುರಿತು ಎಂದಿಗೂ ಯೋಚಿಸಿರಲಿಲ್ಲ. ಭಾರತ ಬಿಟ್ಟು ಬಂದಾಗ ಹೊಸ ದೇಶದಲ್ಲಿ ತುಂಬಾ ಬ್ಯುಸಿಯಾಗಿಬಿಟ್ಟೆ,  15 ವರ್ಷಗಳ ನಂತರ ಮತ್ತೆ ನಟಿಸುತ್ತಿದ್ದೇನೆ,  ಇದರ ನಡುವೆ ಗ್ರೇ ಎಂಬ ಕಿರುಚಿತ್ರದಲ್ಲಿ ನಟಿಸಿದ್ದೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com