ಹಿರಿಯ ಕಲಾವಿದ ಉದಯ್ ಕುಮಾರ್ ಪತ್ನಿ ಕಮಲಮ್ಮ ವಿಧಿವಶ

ಹಿರಿಯ ಚಲನಚಿತ್ರ ಕಲಾವಿದ ಡಿ. ಉದಯಕುಮಾರ್ ಅವರ ಪತ್ನಿ ಕಮಲಮ್ಮ (86) ಬುಧವಾರ ವಿಧಿವಶರಾಗಿದ್ದಾರೆ.
 

Published: 11th December 2019 03:04 PM  |   Last Updated: 11th December 2019 03:07 PM   |  A+A-


ಹಿರಿಯ ಕಲಾವದ ಉದಯ್ ಕುಮಾರ್ ಪತ್ನಿ ಕಮಲಮ್ಮ ವಿಧಿವಶ

Posted By : Raghavendra Adiga
Source : Online Desk

ಬೆಂಗಳೂರು: ಹಿರಿಯ ಚಲನಚಿತ್ರ ಕಲಾವಿದ ಡಿ. ಉದಯಕುಮಾರ್ ಅವರ ಪತ್ನಿ ಕಮಲಮ್ಮ (86) ಬುಧವಾರ ವಿಧಿವಶರಾಗಿದ್ದಾರೆ.

ಇಂದು ಬೆಳಿಗ್ಗೆ 9.30ರ ಸುಮಾರು ಕಮಲಮ್ಮ ಅಸುನೀಗಿದ್ದರೆಂದು ಅವರ ಕುಟುಂಬ ಮೂಲಗಳು ಹೇಳಿದೆ. ಮೃತರು ಪುತ್ರ, ನಟ ವಿಕ್ರಂ ಉದಯಕುಮಾರ್, ಪುತ್ರಿಯಾದಶ್ಯಾಮಲಾ ಕಾರಂತ್ ಅವರನ್ನು ಅಗಲಿದ್ದಾರೆ.

ಕನ್ನಡ ಚಿತ್ರರಂಗದ ಕುಮಾರತ್ರಯರಾಗಿದ್ದ ರಾಜ್‍ಕುಮಾರ್, ಉದಯ್‍ಕುಮಾರ್, ಕಲ್ಯಾಣ್‍ಕುಮಾರ್ ಅರವತ್ತು-ಎಪ್ಪತ್ತರ ದಶಕದಲ್ಲಿ ಬೆಳ್ಳಿಪರದೆಯನ್ನಾಳಿದವರೆಂದರೆ ತಪ್ಪಲ್ಲ.  ಉದಯಕುಮಾರ್ ಕನ್ನಡದ ಕಟ್ಟಾಭಿಮಾನಿಗಳಾಗಿದ್ದು  26 ಡಿಸೆಂಬರ್ 1985ರಂದು ವಿಧಿವಶರಾಗಿದ್ದರು.

ಪವನಸುತ ಕೇಸರಿ ಕಲಾ ಶಾಲಾ ಪ್ರತಿಷ್ಠಾನವನ್ನು ಸ್ಥಾಪಿಸಿದ್ದ ಕಮಲಮ್ಮ ಆನೇಕಲ್ ಪುರಸಭೆಯ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದರು.

ಮೃತರ ಅಂತಿಮ ವಿಧಿ ವಿಧಾನಗಳು ಆನೇಕಲ್ ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.'

ಕಲಾ ಶಾಲೆಯ ಸಂಸ್ಥಾಪಕಿ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ನಲ್ಲಿ ಇಂದು ವಿಧಿವಶರಾದ, ದಿವಂಗತ ನಟ ಉದಯ ಕುಮಾರ್ ಅವರ ಪತ್ನಿ ಕಮಲಮ್ಮ ಕಲಾ ಪೋಷಕರಾಗಿದ್ದರು ಎಂಬುದು ಹೆಮ್ಮೆಯ ಸಂಗತಿ

ಪವನಸುತ ಕೇಸರಿ ಕಲಾ ಶಾಲಾ ಪ್ರತಿಷ್ಠಾನವನ್ನು ಸ್ಥಾಪಿಸಿದ್ದ ಕಮಲಮ್ಮ ಅವರು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅಂತಿಮ ದಿನಗಳವರೆಗೂ ಪ್ರತಿಷ್ಠಾನದ ಮೂಲಕ ಕಲಾ ಸೇವೆಯನ್ನು ಮುಂದುವರಿಸಿದ್ದರು. 

ಕಲಾಕೇಸರಿ ಹೆಸರನಲ್ಲಿ ಕನ್ನಡ ಸೇವೆಯನ್ನು, ಪ್ರತಿಷ್ಠಾನದ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.

ಉದಯ್‌ಕುಮಾರ್ ಸ್ಮರಣಾರ್ಥ ಕಮಲಮ್ಮ ಹಾಗೂ ಪುತ್ರ ವಿಕ್ರಂ ಉದಯ್‌ಕುಮಾರ್, ಪುತ್ರಿ ಶ್ಯಾಮಲತ ಅವರು ಸೇರಿ ಈ ಪ್ರತಿಷ್ಠಾನವನ್ನು ಸ್ಥಾಪಿಸಿದ್ದರು. ಆನೇಕಲ್ ನಲ್ಲಿರುವ ಕಲಾಶಾಲೆಯನ್ನು ಇವರ ಕುಟುಂಬ ನಡೆಸುತ್ತಿದೆ. ಇಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಪ್ರದರ್ಶನ ಕಲೆಗಳು, ಭರತನಾಟ್ಯವನ್ನು ಕಲಿಯಲು ಅವಕಾಶವಿದೆ.

Stay up to date on all the latest ಸಿನಿಮಾ ಸುದ್ದಿ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp