'ಅಂದುಕೊಂಡಂತೆ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಶಿವಣ್ಣ 

ಶ್ರೇಯಸ್ ನಿರ್ದೇಶನದ ಪ್ರಮೋದ್ ಬೊಪಣ್ಣ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಅಂದುಕೊಂಡಂತೆ' ಚಿತ್ರದ ಫಸ್ಟ್ ಲುಕ್  (ಮೊದಲ ನೋಟ) ಬಿಡುಗಡೆಯಾಗಿದೆ
ಮೊದಲ ನೋಟ
ಮೊದಲ ನೋಟ

ಬೆಂಗಳೂರು: ಶ್ರೇಯಸ್ ನಿರ್ದೇಶನದ ಪ್ರಮೋದ್ ಬೊಪಣ್ಣ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಅಂದುಕೊಂಡಂತೆ' ಚಿತ್ರದ ಫಸ್ಟ್ ಲುಕ್  (ಮೊದಲ ನೋಟ) ಬಿಡುಗಡೆಯಾಗಿದೆ. ಹ್ಯಾಟ್ರಿಕ್ ಹಿರೋ, ಕರುನಾಡು ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ನಿನ್ನೆ ಇದನ್ನು ಬಿಡುಗಡೆ ಮಾಡಿದ್ದಾರೆ.

ರಮೇಶ್ ಕೋಯಿರಾ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಿಶ್ವಿ ಭಟ್ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ. ಶೀಘ್ರದಲ್ಲಿಯೇ ಆಡಿಯೋ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. 

ಹೊಸಬರೇ  ಸೇರಿ 'ಅಂದುಕೊಂಡಂತೆ'' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಪ್ರಮೋದ್ ಬೊಪ್ಪಣ ಪ್ರಥಮ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ  ಬಗ್ಗೆ ಚಿತ್ರ ತಂಡ ಬಹು ನಿರೀಕ್ಷೆಯನ್ನಿಟ್ಟುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com