ನಟಿ ಪಾರ್ವತಿ ತಿರುವೊತ್ತು ಕುರಿತು ಅವಹೇಳನಕಾರಿ ಪೋಸ್ಟ್: ಓರ್ವನ ಬಂಧನ

ಮಲಯಾಳಂ ನಟಿ ಪಾರ್ವತಿ ತಿರುವೊತ್ತು ಕುರಿತು ಸಾಮಾಜಿಕ ತಾಣದಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಹಾಗೂ ನಟಿಯನ್ನು ದೂಷಿಸಿ ಪದೇ ಪದೇ ಸಂದೇಶ ಕಳಿಸಿದ್ದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ. ಪಾಲಕ್ಕಾಡ್ ನೆನ್ಮಾರಾ ಮೂಲದ ಕಿಶೋರ್ (40) ಎಂಬಾತನೇ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

Published: 13th December 2019 12:35 PM  |   Last Updated: 13th December 2019 12:45 PM   |  A+A-


ಪಾರ್ವತಿ ತಿರುವೊತ್ತು

Posted By : Raghavendra Adiga
Source : The New Indian Express

ಕೋಳಿಕ್ಕೋಡ್: ಮಲಯಾಳಂ ನಟಿ ಪಾರ್ವತಿ ತಿರುವೊತ್ತು ಕುರಿತು ಸಾಮಾಜಿಕ ತಾಣದಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಹಾಗೂ ನಟಿಯನ್ನು ದೂಷಿಸಿ ಪದೇ ಪದೇ ಸಂದೇಶ ಕಳಿಸಿದ್ದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ. ಪಾಲಕ್ಕಾಡ್ ನೆನ್ಮಾರಾ ಮೂಲದ ಕಿಶೋರ್ (40) ಎಂಬಾತನೇ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಆರೋಪಿಯು ನಟಿ ಪಾರ್ವತಿಯ ತಂದೆ ಹಾಗೂ ಸೋದರನಿಗೆ ನಟಿಯನ್ನು ಅಪಮಾನಿಸುವಂತಹಾ ಸಂದೇಶಗಳನ್ನು ಪದೇ ಪದೇ ಕಳಿಸಿದ್ದನು ಅಷ್ಟೇ ಅಲ್ಲದೆ ಸಾಮಾಜಿಕ ತಾಣಗಳಲ್ಲಿ ಸಹ ದೇ ಬಗೆಯ ಸಂದೇಶಗಳನ್ನು ಪೋಸ್ಟ್ ಮಾಡಿದ್ದನು 

ಅದೊಮ್ಮೆ ನಟಿಯ ಬಗ್ಗೆ ಅವರ ತಾಯಿಗೆ ತಿಳಿಸಲು ಆರೋಪಿ ಅದೊಮ್ಮೆ ಕುಂಡುಪರಂನಲ್ಲಿರುವ ನಟಿಯ ಮನೆಗೆ ಸಹ ಆರೋಪಿ ಭೇಟಿ ಕೊಟ್ಟಿದ್ದನು. ಎಂಬುದಾಗಿ ಕೋಳಿಕ್ಕೋಡ್  ನಾರ್ತ್ ಅಸಿಸ್ಟೆಂಟ್ ಕಮಿಷನರ್ ಕೆ ಅಶ್ರಫ್ ವಿವರಿಸಿದ್ದಾರೆ. 

ಆರೋಪಿ ಕಿಶೋರ್ ಈ ಹಿಂದೆ  ತ್ರಿಶೂರ್ ಮತ್ತು ಕೊಡುಂಗಲ್ಲೂರ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮ್ಯಾಜಿಸ್ಟ್ರೇಟ್ ಮತ್ತು ತಹಶೀಲ್ದಾರ್ ಆಗಿ ನಾಟಕವಾಡಿ ವಂಚಿಸಿದ ಆರೋಪದಡಿ ಜೈಲುಪಾಲಾಗಿದ್ದನು.

ತಿರುವನಂತಪುರಂನಲ್ಲಿ ಬುಧವಾರ ಸಂಜೆ ಆರೋಪಿ ಕಿಶೋರ್ ನನ್ನು ಬಂಧಿಸಲಾಗಿದೆ.ಸಾಮಾಜಿಕ ತಾಣಗಳಲ್ಲಿ  ಪಾರ್ವತಿ ಅವರನ್ನು ಫಾಲೋ ಮಾಡುವ ಕಿಶೋರ್ ಕುರಿತಂತೆ ನಟಿ  ರಾಜ್ಯ ಡಿಜಿಪಿಗೆ ದೂರು ನೀಡಿದ್ದು, ಅದನ್ನು ಎಳಾತೂರ್ ಪೊಲೀಸರಿಗೆ ವರ್ಗಾಯಿಸಲಾಗಿದೆ..

Stay up to date on all the latest ಸಿನಿಮಾ ಸುದ್ದಿ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp