'ಶ್ರೀಮನ್ನಾರಾಯಣ'ನ ನಿಧಿ ರಹಸ್ಯ ಬಯಲು ಸಾಹಸ ಆರಂಭ!

ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ಬಿಡುಗಡೆಗೆ ಇನ್ನು ಕೇವಲ ಒಂದು ದಿನವಷ್ಟೇ ಬಾಕಿಯಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಕುರಿತ ಭಜನೆ ಜೋರಾಗಿಯೇ ನಡೆಯುತ್ತಿದೆ. 
'ಶ್ರೀಮನ್ನಾರಾಯಣ'ನ ನಿಧಿ ರಹಸ್ಯ ಬಯಲು ಸಾಹಸ ಆರಂಭ!
'ಶ್ರೀಮನ್ನಾರಾಯಣ'ನ ನಿಧಿ ರಹಸ್ಯ ಬಯಲು ಸಾಹಸ ಆರಂಭ!

ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ಬಿಡುಗಡೆಗೆ ಇನ್ನು ಕೇವಲ ಒಂದು ದಿನವಷ್ಟೇ ಬಾಕಿಯಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಕುರಿತ ಭಜನೆ ಜೋರಾಗಿಯೇ ನಡೆಯುತ್ತಿದೆ. 

ಟೀಸರ್ ಹಾಗೂ ಟ್ರೈಲರ್ ಮೂಲಕ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿರುವ ಚಿತ್ರ ರಾಜ್ಯದ 400 ಚಿತ್ರಮಂದಿರಗಳಲ್ಲಿ ಶುಕ್ರವಾರ ತೆರೆಕಾಣುತ್ತಿದೆ. ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರ, ಯಶಸ್ಸು ಕಾಣಲು ಈ 10 ಅಂಶಗಳು ಕಾರಣವಾಗಬಹುದು. 

ಅಮರಾವತಿಯಂತೆ ಕಾಲ್ಪನಿಕ ಕತೆ
ಮಾಲ್ಗುಡಿ ಡೇಸ್ ಬಳಿಕ ಅಮರಾವತಿ ಟೌನ ಪ್ರೇಕ್ಷಕರಲ್ಲಿ ಸಾಕಷ್ಟು ಆಸಕ್ತಿಯನ್ನು ಮೂಡಿಸಿತ್ತು. ಚಿತ್ರದಲ್ಲಿ ರಿಷಬ್ ಶೆಟ್ಟಿ ಕೃಷ್ಟನಂತೆ ಕಾಣಿಸಿಕೊಂಡಿದ್ದು, ಇದು ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸುವುದಂತೂ ಖಚಿತ. 

ದ್ವಿಪಾತ್ರದಲ್ಲಿ ರಕ್ಷಿತ್ ಶೆಟ್ಟಿ
ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂದು ಸಾಕಷ್ಟು ಜನರು ಹೇಳುತ್ತಿದ್ದಾರೆ. ಇದು ನಿಜವೇ ಎಂಬುದು ಚಿತ್ರದ ತೆರೆಕಂಡ ಬಳಿಕವಷ್ಟೇ ಬಯಲಾಗಲಿದೆ. 

ಮೂರು ವರ್ಷಗಳ ಬಳಿಕ ತೆರೆ ಮೇಲೆ ಕಾಣಿಸಿಕೊಂಡ ರಕ್ಷಿತ್
ಕಿರಿಕ್ ಪಾರ್ಟಿಯಂತಹ ಬ್ಲಾಕ್ ಬಸ್ಟರ್ ಚಿತ್ರದ ಬಳಿಕ ರಿಕ್ಷಿತ್ ಶೆಟ್ಟಿಯವರು ಅವನೇ ಶ್ರೀಮನ್ನಾರಾಯಣ ಮೂಲಕ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಶ್ರೀಮನ್ನಾರಾಯಣ ಕೂಡ ರಕ್ಷಿತ್ ಅವರ ಕನಸಿನ ಚಿತ್ರವಾಗಿದೆ. ಹೀಗಾಗಿ ಚಿತ್ರವನ್ನು ನೋಡಲು ಅಭಿಮಾನಿಗಳು ಹಾತೊರೆದು ನಿಂತಿದ್ದಾರೆ. 

ಚಿತ್ರದ ಶೀರ್ಷಿಕೆ ಹಿಂದಿರುವ ಸ್ಫೂರ್ತಿ 
ಭಕ್ತ ಪ್ರಹ್ಲಾದ ಚಿತ್ರದ ದೃಶ್ಯವೊಂದರಿಂದ ಸ್ಫೂರ್ತಿ ಪಡೆದುಕೊಂಡು ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ಸಿದ್ಧಪಡಿಸಲಾಗಿತ್ತು ಎಂದು ರಕ್ಷಿತ್ ಅವರು ಹೇಳಿದ್ದರು. ಭಕ್ತ ಪ್ರಹ್ಲಾದ ಚಿತ್ರದಲ್ಲಿ ಅವನೇ ಶ್ರೀಮನ್ನಾರಾಯಣ ಎಂದು ಪುನೀತ್ ಅವರು ಹೇಳುತ್ತಿದ್ದರು. ಇದು ಚಿತ್ರಕ್ಕೆ ಸ್ಪೂರ್ತಿ ನೀಡಿತ್ತು ಎಂದು ರಕ್ಷಿತ್ ಅವರು ಹೇಳಿರುವುದು. 

ಹೊಸ ಶೈಲಿ
ಚಿತ್ರದಲ್ಲಿ ರಕ್ಷಿತ್ ಅವರ ಹೊಸ ಶೈಲಿಯನ್ನು ತಂದಿದ್ದಾರೆ. ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಶೈಲಿಯಲ್ಲಿ ಚಿತ್ರವನ್ನು ತಯಾರು ಮಾಡಲಾಗಿದೆ. 

ಅದ್ಧೂರಿ ಸೆಟ್ ಗಳು
19 ಸೆಟ್ ಗಳಲ್ಲಿ ಇಡೀ ಅರಣ್ಯವನ್ನೇ ಸಿದ್ಧಪಡಿಸಿರುವುದು. ಅಲ್ಲದೆ, ಚಿತ್ರದ ಬಹುತೇಕ ಭಾಗ ಸೆಟ್ ನಲ್ಲೇ ಚಿತ್ರೀಕರಮ ನಡೆದಿರುವುದು. ಇಡೀ ಚಿತ್ರ ಸೆಟ್ ನಲ್ಲಿಯೇ ಚಿತ್ರೀಕರಣ ನಡೆದಿರುವುದು ಕನ್ನಡ ಚಿತ್ರರಂಗದಲ್ಲಿಯ ಅತ್ಯಂತ ವಿರಳ. 

ಕಳೆದುಕೊಡ ನಿಧಿಗಾಗಿ ಬೇಟೆ ಆರಂಭ
ಚಿತ್ರದ ಕತೆಯನ್ನು ತಂಡ ಸಾಕಷ್ಟು ರಹಸ್ಯವಾಗಿಯೇ ಇಟ್ಟಿದೆ. ಆದರೆ, ಚಿತ್ರದ ಶೀರ್ಷಿಕೆ ಚಿತ್ರದ ಕತೆಯನ್ನು ಹೇಳುವಂತಿದೆ. ಚಿತ್ರ ಅಭಿರಾಸ್ ಹಾಗೂ ಕುತಾರಾಮ್ ನಡುವಿನ ಹೋರಾಟದ ಕುರಿತು ಎಂಬುದು ತಿಳಿಯುವಂತಿದೆ. 

ಸ್ಪೆಷಲ್ ಎಫೆಕ್ಟ್ಸ್
ಚಿತ್ರದಲ್ಲಿನ ವಿಎಫ್ಎಕ್ಸ್ ಕೆಲಸಕ್ಕಾಗಿ 300ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸಿದ್ದಾರೆ. 

ಬಂಡವಾಳಕ್ಕೂ ಯಾವುದೇ ಗಡಿಯಿಲ್ಲದಿರುವುದು
ಚಿತ್ರವನ್ನು ಬರೋಬ್ಬರಿ ರೂ.45 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಮಹತ್ತನ ಕಾರ್ಯಕ್ಕೆ ಜೀವ ತುಂಬಲು ಸಣ್ಣ ಕಲ್ಲನ್ನೂ ಬಿಟ್ಟಿಲ್ಲ ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ ಅವರು ಹೇಳಿದ್ದಾರೆ. 

ರಹಸ್ಯ
ನಿಧಿ ಹುಡುಕಾಟ ಭೇಧಿಸಲು ಪ್ರೇಕ್ಷಕರಿಗೆ ಚಿತ್ರ ಸುಳಿವುಗಳನ್ನು ನೀಡುತ್ತದೆ. ಹೀಗಾಗಿ ಚಿತ್ರದ ಒಂದೇ ದೃಶ್ಯ ಕಣ್ಣಿಂದ ಮರೆಯಾದರೂ ಇಡೀ ಚಿತ್ರ ಅರ್ಥವಾಗುವುದು ಕಷ್ಟವಾಗುತ್ತದೆ. ಈ ಮೂಲಕ ಪ್ರೇಕ್ಷಕರ ಗಮನವನ್ನು ತನ್ನತ್ತ ಸೆಳೆದಿಡಲು ಚಿತ್ರದ ತಂಡ ಸಾಕಷ್ಟು ಯತ್ನ ನಡೆಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com