ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿ ದರೋಡೆಕೋರರನ್ನು ಹಿಡಿದ ಸ್ಯಾಂಡಲ್ ವುಡ್ ನಟ

ಇಬ್ಬರು ದರೋಡೆಕೋರರನ್ನು ಸಿನಿಮೀಯ ಶೈಲಿಯಲ್ಲಿ ನಟ ರಘು ಭಟ್ ಬೆನ್ನಟ್ಟಿ ಹಿಡಿದ ಘಟನೆ 
ನಗರದ ಸೇಂಟ್ ಜಾನ್ ವೃತ್ತದ ಬಳಿ ಸಂಭವಿಸಿದೆ.
 

Published: 27th December 2019 07:11 PM  |   Last Updated: 27th December 2019 07:11 PM   |  A+A-


ರಘು ಭಟ್

Posted By : Raghavendra Adiga
Source : UNI

ಬೆಂಗಳೂರು: ಇಬ್ಬರು ದರೋಡೆಕೋರರನ್ನು ಸಿನಿಮೀಯ ಶೈಲಿಯಲ್ಲಿ ನಟ ರಘು ಭಟ್ ಬೆನ್ನಟ್ಟಿ ಹಿಡಿದ ಘಟನೆ 
ನಗರದ ಸೇಂಟ್ ಜಾನ್ ವೃತ್ತದ ಬಳಿ ಸಂಭವಿಸಿದೆ.

 ಅಬ್ದುಲ್, ಮೊಹೀನ್ ಬಂಧಿತ ದರೋಡೆಕೋರರು. ಗುರುವಾರ ರಾತ್ರಿ ನಗರದ ಸಿಗ್ಮಾ ಮಾಲ್ ನಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರ ವೀಕ್ಷಿಸಿ ರಘು ದಂಪತಿ ಕಾರಿನಲ್ಲಿ ವಾಪಸ್ಸಾಗುತ್ತಿದ್ದಾಗ, ಆರ್ ಎಂ ಝಡ್ ಬಳಿ ಅವರ ಎದುರಿನ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು ಮಾರಕಾಸ್ತ್ರಗಳನ್ನು ತೋರಿಸಿ ಅದರಲ್ಲಿದ್ದರವ ಚಿನ್ನ, ನಗದು ದೋಚಿ ಪರಾರಿಯಾಗುತ್ತಿದ್ದರು.

 ಈ ದೃಶ್ಯವನ್ನು ಕಂಡ ರಘು ಅವರು,  ದರೋಡೆಕೋರರನ್ನು ಚೇಸ್ ಮಾಡಲು ಆರಂಭಿಸಿದಾಗ, ದರೋಡೆಕೋರರು ಬೈಕ್ ಸ್ಕೀಡ್ ಆಗಿ ಕೆಳಗೆ ಬಿದ್ದಿದ್ದಾರೆ. ಸುಮಾರು 2 ಕಿಮೀ ಚೇಸ್ ಮಾಡಿದ ಬಳಿಕ  ಭಾರತಿ ನಗರದ ಸೇಂಟ್ ಜಾನ್ಸ್ ವೃತ್ತದಲ್ಲಿ ರಘು, ದರೋಡೆಕೋರರನ್ನು ಹಿಡಿದಿದ್ದಾರೆ. ನಂತರ ಇಬ್ಬರನ್ನೂ, ಹಲಸೂರು ಪೊಲೀಸರಿಗೆ ಒಪ್ಪಿಸಿದ್ದಾರೆ.  

ನಟ ರಘು ಭಟ್ ಅವರು, ಅನ್ವೇಷಿ, ಎಂಎಂಸಿಎಚ್ ಹಾಗೂ ಲವ್ ಯೂ 2 ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ್ದು, ನಿಜ ಜೀವನದಲ್ಲೂ ದರೋಡೆಕೋರರನ್ನು ಹಿಡಿದು ಸಾರ್ಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp