ಕೆಜಿಎಫ್‌ ಚಾಪ್ಟರ್‌ 3 ಸುಳಿವು ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಚಾಪ್ಟರ್ 1 ಭರ್ಜರಿ ಯಶಸ್ಸು ಕಂಡು ಎಲ್ಲರೂ ಚಾಪ್ಟರ್ 2ಗೆ ಎದುರು ನೋಡುತ್ತಿರುವಂತೆಯೇ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಫ್ ಚಾಪ್ಟರ್ 3 ಕುರಿತು ಸುಳಿವು ನೀಡಿದರೇ ಎಂಬ ಅನುಮಾನ ಮಾಡುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಚಾಪ್ಟರ್ 1 ಭರ್ಜರಿ ಯಶಸ್ಸು ಕಂಡು ಎಲ್ಲರೂ ಚಾಪ್ಟರ್ 2ಗೆ ಎದುರು ನೋಡುತ್ತಿರುವಂತೆಯೇ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಫ್ ಚಾಪ್ಟರ್ 3 ಕುರಿತು ಸುಳಿವು ನೀಡಿದರೇ ಎಂಬ ಅನುಮಾನ ಮಾಡುತ್ತಿದೆ.

ಪ್ರಸ್ತುತ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗಿದ್ದು, ಎರಡನೇ ಭಾಗದ ಶೂಟಿಂಗ್‌ ಶೇಕಡ 50ರಷ್ಟು ಪೂರ್ಣಗೊಂಡಿದೆ. ಹೈದರಾಬಾದ್‌ನಲ್ಲಿ ವಿವಿಧ ಹಂತದಲ್ಲಿ ಶೂಟಿಂಗ್‌ ನಡೆಸಿದ್ದ ಚಿತ್ರತಂಡ ಈಗ ಬಳ್ಳಾರಿ ಜಿಲ್ಲೆಯ ಸಂಡೂರಿನ ತುಂಗಾ ಮೈನ್ಸ್ ಕಂಪನಿಯಲ್ಲಿ ಶೂಟಿಂಗ್‌ಗಾಗಿ ಬೀಡು ಬಿಟ್ಟಿದೆ. ನಾಯಕ ನಟ ಯಶ್‌ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇನ್ನೂ ಹತ್ತು ದಿನಗಳ ಕಾಲ ಅಲ್ಲಿಯೇ ಶೂಟಿಂಗ್‌ ನಡೆಸಲು ಚಿತ್ರತಂಡ ನಿರ್ಧರಿಸಿದೆ.

ಚಾಪ್ಟರ್ 2 ಚಿತ್ರೀಕರಣ ಸಾಗಿರುವಂತೆಯೇ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್‌ ಚಾಪ್ಟರ್‌ 3 ಕುರಿತು ಸುಳುವು ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಪ್ರಶಾಂತ್ ನೀಲ್ ಅವರ ಇನ್ ಸ್ಟಾಗ್ರಾಮ್ ಪೋಸ್ಟ್... ಪ್ರಶಾಂತ್ ನೀಲ್ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮಗನ ಫೋಟೊ ಅಪ್ಲೋಡ್ ಮಾಡಿದ್ದು, ಈ ಫೋಟೋಯಿಂದಲೇ ಚಾಪ್ಟರ್ 3 ಕುರಿತು ಚರ್ಚೆಗಳು ಗರಿಗೆದರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com