ನಮ್ಮ ದೇಶಕ್ಕೆ ಹೊಸ ಕಾಯಿಲೆ ಬಂದಿದೆ: ವೈರಲ್ ಆಯ್ತು ಜಗ್ಗೇಶ್ ಟ್ವೀಟ್

ಮೊಬೈಲ್ ಹಾಗೂ ಇಂಟರ್‍ನೆಟ್ ಉಪಯೋಗಿಸುವುದರಿಂದ ಜನರು ಕಾಲಕಾಲಕ್ಕೆ ಬದಲಾಗುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಯುವ ಪೀಳಿಗೆ ಮಾತ್ರವಲ್ಲ ...
ಜಗ್ಗೇಶ್
ಜಗ್ಗೇಶ್
ಬೆಂಗಳೂರು: ಮೊಬೈಲ್ ಹಾಗೂ ಇಂಟರ್‍ನೆಟ್ ಉಪಯೋಗಿಸುವುದರಿಂದ ಜನರು ಕಾಲಕಾಲಕ್ಕೆ ಬದಲಾಗುತ್ತಿದ್ದಾರೆ.  ಸಾಮಾಜಿಕ ಮಾಧ್ಯಮಗಳಲ್ಲಿ ಯುವ ಪೀಳಿಗೆ ಮಾತ್ರವಲ್ಲ ಎಲ್ಲಾ ವಯಸ್ಸಿನ ಜವನರು  ಮೊಬೈಲ್‍ನಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. 
ಜನಸಾಮಾನ್ಯರ ಮೇಲೆ ಮೊಬೈಲ್ ಎಷ್ಟು ಪರಿಣಾಮ ಬೀರಿದೆ ಎಂದರೆ ತಮ್ಮ ಅಕ್ಕಪಕ್ಕ ಪರಿಚಯಸ್ಥರೇ ಇದ್ದರೂ ಅವರನ್ನೇ ಮರೆತು ಮೊಬೈಲ್ ಗುಂಗಿನಲ್ಲಿರುತ್ತಾರೆ. ಹೀಗೆ ಜನರು ಮೊಬೈಲಿನಲ್ಲಿ ಬ್ಯುಸಿ ಆಗಿರುವುದನ್ನು ನೋಡಿ ನವರಸನಾಯಕ ಜಗ್ಗೇಶ್ `ಮೊಬೈಲ್ ರೋಗ’ ಎಂದು ಟ್ವೀಟ್ ಮಾಡಿದ್ದಾರೆ.
ನಮ್ಮ ದೇಶಕ್ಕೆ ಬಂದ ಹೊಸ ಕಾಯಿಲೆ. ಮೊಬೈಲ್ ರೋಗ. ಬಂಧು-ಬಾಂಧವರು, ಸ್ನೇಹಿತರು ಪಕ್ಕದಲ್ಲೆ ಇದ್ದರೂ ಸತ್ತವರಂತೆ ಭಾವಿಸಿ ಮೊಬೈಲಲ್ಲಿ ತಲ್ಲಿನರಾಗಿದ್ದು, ಇದೊಂದು ಗುಣಪಡಿಸಲಾಗದ ರೋಗವಾಗಿದೆ. ಈ ರೋಗಕ್ಕೆ ಮದ್ದು ಕಂಡು ಹಿಡಿಯದಿದ್ದರೆ, ಮಾನವರು ಏಕಾಂಗಿ ಎಂಬ ರೋಗದಿಂದ ಸಾವನ್ನಪ್ಪುತ್ತಾರೆ. ದಯಮಾಡಿ ಬೇಗ ಈ ರೋಗಕ್ಕೆ ಔಷಧಿ ಕಂಡು ಹಿಡಿದು ಇದರಿಂದ ಜನರನ್ನ ಉಳಿಸಬೇಕು ಎಂದು ದೇವರಲ್ಲಿ ಪ್ರಾರ್ಥನೆ ಎಂದು ಬರೆದುಕೊಂಡಿದ್ದಾರೆ.
ಒಂದಷ್ಟು ಮಹಿಳೆಯರು ಹಾಗೂ ಪುರಷರು ಮೊಬೈಲ್ ಬಳಸುತ್ತಿರುವ ಫೋಟೋವನ್ನು ಹಾಕಿ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಗಾಯಕಿ ಆಶಾ ಬೊಂಸ್ಲೆ ಮಾಡಿದ್ದ ಇದೇ ರೀತಿಯ ಟ್ವೀಟ್ ವೈರಲ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com