'ಉದ್ಘರ್ಷ' ಟ್ರೈಲರ್ ಗೆ ಕಿಚ್ಚ ಸುದೀಪ್ ಧ್ವನಿ

ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಸಿನಿಮಾಕ್ಕೆ ನಟ ಕಿಚ್ಚ ಸುದೀಪ್ ಧ್ವನಿ ನೀಡಿದ್ದಾರೆ...
ಉದ್ಘರ್ಷ ಚಿತ್ರದಲ್ಲಿ ನಾಯಕ-ನಾಯಕಿ
ಉದ್ಘರ್ಷ ಚಿತ್ರದಲ್ಲಿ ನಾಯಕ-ನಾಯಕಿ

ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಸಿನಿಮಾಕ್ಕೆ ನಟ ಕಿಚ್ಚ ಸುದೀಪ್ ಧ್ವನಿ ನೀಡಿದ್ದಾರೆ. ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರದ ಟ್ರೈಲರ್ ಗೆ ಕಿಚ್ಚ ಸುದೀಪ್ ಇಂಗ್ಲಿಷ್ ನಲ್ಲಿ ಧ್ವನಿ ನೀಡಿದ್ದಾರೆ.

ಪೈಲ್ವಾನ್ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು ಅಲ್ಲಿಯೇ ಇತ್ತೀಚೆಗೆ ಉದ್ಘರ್ಷ ಚಿತ್ರದ ಟ್ರೈಲರ್ ರೆಕಾರ್ಡ್ ಮಾಡಿಕೊಳ್ಳಲಾಯಿತು. ಚಿತ್ರದ ಟ್ರೈಲರ್ ನೋಡಿ ಇಷ್ಟಪಟ್ಟ ಸುದೀಪ್ ಅದಕ್ಕೆ ಧ್ವನಿ ನೀಡಲು ನಿರ್ಧರಿಸಿದರು. ಈ ಮೂಲಕ ತಮ್ಮ ಗುರು ಸುನಿಲ್ ಕುಮಾರ್ ದೇಸಾಯಿ ಅವರಿಗೆ ಸುದೀಪ್ ಕೃತಜ್ಞತೆ ಸಲ್ಲಿಸಿದ್ದಾರೆ.

ಸುದೀಪ್ ಅವರ ಸ್ಪರ್ಶ ಸಿನಿಮಾ ನಿರ್ದೇಶನ ಮಾಡಿದ್ದು ಸುನಿಲ್ ಕುಮಾರ್ ದೇಸಾಯಿ, ಅಂದಿನಿಂದ ಇವರಿಬ್ಬರೂ ವಿಶೇಷ ಬಾಂಧವ್ಯವನ್ನು ಬೆಳೆಸಿಕೊಂಡು ಬಂದಿದ್ದಾರೆ. ಠಾಕೂರ್ ಅನೂಪ್ ಸಿಂಗ್, ಸಾಯಿ ಧನ್ಸಿಕಾ, ತನ್ಯಾ ಹೊಪೆ, ಕಬೀರ್ ದುಹಾನ್ ಸಿಂಗ್ ಮುಖ್ಯ ಪಾತ್ರದಲ್ಲಿರುವ ಉದ್ಘರ್ಷ ಸಿನಿಮಾದಲ್ಲಿ ಕಿಶೋರ್, ವಂಶಿ ಕೃಷ್ಣ ಮತ್ತು ಕಿಶೋರ್  ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಉದ್ಘರ್ಷ ಸಿನಿಮಾ ಸದ್ಯದಲ್ಲಿಯೇ ತೆರೆ ಕಾಣಲಿದೆ. ಜಾಕ್ ಮಂಜು ವಿತರಣೆಯ ಸಿನಿಮಾಕ್ಕೆ ಪಿ ರಂಜನ್ ಅವರ ಛಾಯಾಗ್ರಹಣ, ಬಾಲಿವುಡ್ ಸಂಗೀತ ನಿರ್ದೇಶಕ ಸಂಜೊಯ್ ಚೌಧರಿ ಅವರ ಸಂಗೀತವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com