'ನಟ ಸಾರ್ವಭೌಮ'ನಿಗೆ ಪ್ರೇಕ್ಷಕ ಫಿದಾ: ಫಸ್ಟ್ ಡೇ ಭರ್ಜರಿ ಕಲೆಕ್ಷನ್, ಅಭಿಮಾನಿಗಳಿಗೆ ಚಿರಋಣಿ ಎಂದ ಅಪ್ಪು

ಧೀರ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ಪವನ್ ಒಡೆಯರ್ ನಿರ್ದೇಶನದ ನಟ ಸಾರ್ವಭೌಮ ಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಫಸ್ಟ್ ಡೇ ಭರ್ಜರಿ ಕಲೆಕ್ಷನ್ ಮಾಡಿದೆ.

Published: 08th February 2019 12:00 PM  |   Last Updated: 08th February 2019 08:42 AM   |  A+A-


Puneeth Rajkumar

ಪುನೀತ್ ರಾಜ್ ಕುಮಾರ್

Posted By : ABN ABN
Source : Online Desk
ಬೆಂಗಳೂರು: ಧೀರ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ಪವನ್ ಒಡೆಯರ್ ನಿರ್ದೇಶನದ ನಟ ಸಾರ್ವಭೌಮ ಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಫಸ್ಟ್ ಡೇ ಭರ್ಜರಿ ಕಲೆಕ್ಷನ್ ಮಾಡಿದೆ.

ಚಿತ್ರಕ್ಕೆ ದೊರೆತ ಉತ್ತಮ ಓಪನಿಂಗ್  ಕಂಡು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಸಂತಸಗೊಂಡಿದ್ದಾರೆ.

ಫೇಸ್ ಬುಕ್ ಲೈವ್ ನಲ್ಲಿ ತಮ್ಮ ಸಂತಸ ಹಂಚಿಕೊಂಡಿರುವ ಪುನೀತ್ ರಾಜ್ ಕುಮಾರ್, ನಟ ಸಾರ್ವಭೌಮ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದ್ದು, ಅಭಿಮಾನಿಗಳು ತಮ್ಮ ಕುಟುಂಬದ ಬಗ್ಗೆ ಇಟ್ಟಿರುವ ಪ್ರೀತಿಗೆ ಚಿರಖುಣಿಯಾಗಿರುವುದಾಗಿ ಹೇಳಿದ್ದಾರೆ.


ನಟಸಾರ್ವಭೌಮ ಸಿನಿಮಾ ಭಾರತದಲ್ಲಿ ಸುಮಾರು 350 ತೆರೆಗಳಿಗೆ ಬಿಡುಗಡೆಯಾಗಿದೆ. ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯವಾಗಿ ಪ್ರೇಕ್ಷಕರು ಸಿನಿಮಾವನ್ನು ಒಪ್ಪಿದ್ದಾರೆ.

ಬೆಂಗಳೂರು ಮತ್ತು ಮೈಸೂರಿನಲ್ಲಿ ಮುಂಗಡ ಬುಕಿಂಗ್‍ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಊರ್ವಶಿ, ಪ್ರಸನ್ನದಂತಹ ಸಿಂಗಲ್ ಸ್ರ್ಕೀನ್ ಚಿತ್ರಮಂದಿರಗಳಲ್ಲಿ ಹೆಚ್ಚುವರಿ ಶೋಗಳು ಪ್ರದರ್ಶನವಾಗಿದ್ದು ಮೊದಲ ದಿನದ ಕಲೆಕ್ಷನ್ ಜೋರಾಗಿದೆ. ಪ್ರಸನ್ನ ಚಿತ್ರಮಂದಿರದಲ್ಲಿ ಬುಧಾವಾರವೇ (ಜನವರಿ 6) ಬೆಳಗ್ಗೆ 10 ಗಂಟೆಗೆ ಶೋ ಆರಂಭವಾಗಿತ್ತು. ಊರ್ವಶಿಯಲ್ಲಿ ಅದೇ ದಿನ ಮಧ್ಯರಾತ್ರಿ ಶೋ ಇತ್ತು. ಒಟ್ಟಾರೆ ಮೊದಲ ದಿನವೇ 500ಕ್ಕೂ ಹೆಚ್ಚು ಶೋಗಳು ಬೆಂಗಳೂರಿನಲ್ಲಿ ಪ್ರದರ್ಶನ ಕಂಡಿವೆ.

ಮೂಲಗಳ ಪ್ರಕಾರ ಅಂದಾಜು ಮೊದಲ ದಿನದ ಗಳಿಕೆ ಸುಮಾರು ₹ 8 ರಿಂದ 10 ಕೋಟಿ ಎನ್ನಲಾಗಿದೆ. ಆದರೆ ಇದು ಅಧಿಕೃತ ಅಂಕಿಸಂಖ್ಯೆಯಲ್ಲ .ಮೊದಲ ದಿನದ ಗಳಿಕೆ ಅಂದಾಜು ಚಿತ್ರಣವಷ್ಟೇ. ಇಷ್ಟೇ ಕಲೆಕ್ಷನ್ ಆಗಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp