ಯಶ್ ಗಾಗಿಯೇ 'ರಾಣಾ' ಕಥೆ: ರಾಕಿಂಗ್ ಸ್ಟಾರ್ ಬಿಟ್ಟರೇ ಚಿತ್ರವನ್ನೇ ಮಾಡಲ್ಲ; ಹರ್ಷ

ರಾಕಿಂಗ್ ಸ್ಟಾರ್ ಯಶ್ ಅವರಿಗಾಗಿಯೇ ರಾಣಾ ಚಿತ್ರಕಥೆ ಬರೆದಿದ್ದೇನೆ, ಒಂದು ವೇಳೆ ಅವರು ಆ ಪಾತ್ರದಲ್ಲಿ ಮಾಡಲಿಲ್ಲ ಎಂದಾದರೇ ಆ ಚಿತ್ರವನ್ನೇ ಮಾಡುವುದಿಲ್ಲ ಎಂದು ...

Published: 12th February 2019 12:00 PM  |   Last Updated: 12th February 2019 12:17 PM   |  A+A-


A. Harsha and yash

ಎ.ಹರ್ಷ ಮತ್ತು ಯಶ್

Posted By : SD SD
Source : The New Indian Express
ರಾಕಿಂಗ್ ಸ್ಟಾರ್ ಯಶ್ ಅವರಿಗಾಗಿಯೇ ರಾಣಾ ಚಿತ್ರಕಥೆ ಬರೆದಿದ್ದೇನೆ,  ಒಂದು ವೇಳೆ ಅವರು ಆ ಪಾತ್ರದಲ್ಲಿ ಮಾಡಲಿಲ್ಲ ಎಂದಾದರೇ ಆ ಚಿತ್ರವನ್ನೇ ಮಾಡುವುದಿಲ್ಲ ಎಂದು ನಿರ್ದೇಶಕ ಎ.ಹರ್ಷ ಹೇಳಿದ್ದಾರೆ.

ಎ. ಹರ್ಷ ನಿರ್ದೇಶನದಲ್ಲಿ ಮೂಡಿಬರಲಿರುವ ‘ರಾಣಾ’ ಚಿತ್ರದಲ್ಲಿ ‘ರಾಕಿಂಗ್ ಸ್ಟಾರ್’ ಯಶ್ ನಟಿಸಲಿದ್ದಾರೆ. ಆ ಚಿತ್ರವನ್ನು ಜಯಣ್ಣ ನಿರ್ವಮಿಸಲಿದ್ದಾರೆ ಎಂಬ ಸುದ್ದಿ ವರ್ಷಗಳ ಹಿಂದೆಯೇ ಸದ್ದು ಮಾಡಿತ್ತು. 

ಆದರೆ ಈ ನಡುವೆ ರಾಣಾ ಸಿನಿಮಾವನ್ನು ಯಶ್ ಮಾಡುತ್ತಿಲ್ಲ. ಬದಲಿಗೆ, ಅದೇ ಕಥೆಯನ್ನು ಶಿವರಾಜ್​ಕುಮಾರ್​ಗೆ ಹರ್ಷ ಹೇಳಿದ್ದಾರೆ, ಅವರೇ ‘ರಾಣಾ’ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. 

ಈ ತಳಬುಡವಿಲ್ಲದ ಸುದ್ದಿಗೆ ಸ್ವತಃ ನಿರ್ದೇಶಕ ಹರ್ಷ ಪೂರ್ಣವಿರಾಮ ಇಟ್ಟಿದ್ದಾರೆ. ‘ಯಶ್ ಜತೆ ‘ರಾಣಾ’ ಸಿನಿಮಾ ಆಗುವುದು ನೂರಕ್ಕೆ ನೂರು ನಿಜ. ಯಶ್ ಅವರೇ ನಾಯಕರಾಗಿ ನಟಿಸಲಿದ್ದಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗ ಕೇಳಿಬರುತ್ತಿರುವ ಸುದ್ದಿಯಲ್ಲಿ ಯಾವುದೇ ತಿರುಳಿಲ್ಲ ಎಂದು ಹೇಳಿದ್ದಾರೆ. 

ರಾಣಾ ಸಿನಿಮಾಕ್ಕೆ ಸಂಬಂಧಿತ ಸ್ಕ್ರಿಪ್ಟ್ ಕೆಲಸಗಳೂ ಬಹುತೇಕ ಅಂತಿಮ ಹಂತದಲ್ಲಿವೆಯಂತೆ. ಯಶ್ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಚಿತ್ರೀಕರಣ ಆರಂಭವಾಗಲಿದೆ, ಸದ್ಯ ಯಶ್ ಈಗ ಕೆಜಿಎಫ್ ಚಾಪ್ಟರ್ 2 ಮೇಲೆ ಗಮನ ಹರಿಸಿದ್ದಾರೆ. ಆ ಸಿನಿಮಾ ಕೆಲಸಗಳು ಈ ವರ್ಷಾಂತ್ಯಕ್ಕೆ ಮುಗಿಯಬಹುದು. ಅದಾದ ಬಳಿಕ ಅಂದರೆ 2020ರ ವೇಳೆಗೆ ನಮ್ಮ ಸಿನಿಮಾದಲ್ಲಿ ಭಾಗವಹಿಸಲಿದ್ದಾರೆ ಎಂದು ಹರ್ಷ ತಿಳಿಸಿದ್ದಾರೆ.

ನಾನು ಶಿವರಾಜ್​ಕುಮಾರ್ ಅವರ ದೊಡ್ಡ ಅಭಿಮಾನಿ. ಅವರ ಜತೆ ಇನ್ನೊಂದು ಸಿನಿಮಾ ಮಾಡುವ ಅವಕಾಶ ಸಿಕ್ಕರೆ, ಅವರಿಗಾಗಿಯೇ ಬೇರೆ ಕಥೆ ಸಿದ್ಧ ಮಾಡಿಕೊಳ್ಳುತ್ತೇನೆಯೇ ಹೊರತು, ಬೇರೆ ಹೀರೋಗಾಗಿ ಮಾಡಿದ ಕಥೆಯನ್ನು ಶಿವಣ್ಣಗೆ ಮಾಡುವುದಿಲ್ಲ. ಶಿವಣ್ಣ ಒಂದು ವಿಶ್ವಕೋಶ ಅವರಿಗಾಗಿ ನನ್ನ ಬಳಿ ಹಲವು ಕಥೆಗಳಿವೆ ಎಂದು ಹೇಳಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp