ದರ್ಶನ್ ನಟನೆಯ 'ರಾಬರ್ಟ್' ಸಿನಿಮಾಗೆ ಇಬ್ಬರ ಸಂಭಾಷಣೆ!

ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಸಂಭಾಷಣೆ ಬರೆಯಲು ಯಶಸ್ವಿ ಸಿನಿಮಾಗಳಿಗೆ ಸಂಭಾಷಣೆ ಬರೆದ ಬರಹಗಾರರನ್ನು ನಿರ್ದೇಶಕರು ಕರೆ ತರುತ್ತಿದ್ದಾರೆ, ..

Published: 12th February 2019 12:00 PM  |   Last Updated: 12th February 2019 12:17 PM   |  A+A-


A Still from Robert cinema

ರಾಬರ್ಟ್ ಚಿತ್ರದ ಪೋಸ್ಟರ್

Posted By : SD SD
Source : The New Indian Express
ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಸಂಭಾಷಣೆ ಬರೆಯಲು ಯಶಸ್ವಿ ಸಿನಿಮಾಗಳಿಗೆ ಸಂಭಾಷಣೆ ಬರೆದ ಬರಹಗಾರರನ್ನು ನಿರ್ದೇಶಕರು ಕರೆ ತರುತ್ತಿದ್ದಾರೆ,  

ಕೆಜಿಎಫ್ ಸಿನಿಮಾ ಭಾಗವಾಗಿದ್ದ ಚಂದ್ರಮೌಳಿ ಮತ್ತು ಅಮ್ಮಾ ಐ ಲವ್ ಯೂ ಹಾಗೂ ವಿಕ್ಟರಿ2 ಹಾಗೂ ರಿಯಾಲಿಟಿ ಶೋ ಮಜಾ ಟಾಕೀಸ್ ನಲ್ಲಿ ಕೆಲಸ ಮಾಡುತ್ತಿರುವ ಕೆ.ಎಲ್ ರಾಜಶೇಖರ್ ಅವರಿಂದ ಸಂಭಾಷಣೆ ಬರೆಸಲು ತರುಣ್ ಸುಧೀರ್ ಸಿದ್ದತೆ ನಡೆಸುತ್ತಿದ್ದಾರೆ,

ಇಬ್ಬರಿಂದಲೂ ಮಿಕ್ಸ್ ಸಂಭಾಷಣೆ ಬರೆಸುತ್ತಿರುವುದಾಗಿ ತರುಣ್ ಸುದೀರ್ ಹೇಳಿದ್ದಾರೆ, ಇಬ್ಬರು ಹೊಸ ಬರಹಗಾರರು ಎರಡು ಸಿನಿಮಾ ಮಾಡಿದ್ದಾರೆ, ಆದರೆ ಅವರಿಬ್ಬರಿಗೂ ತುಂಬಾ ಅಬಿರುಚಿಯಿದೆ, ಅವರ ಬರವಣಿಗೆ ಬಗ್ಗೆಗಿನ ಕುತೂಹಲ ಆಸಕ್ತಿದಾಯಕ ಬರವಣಿಗೆ ದರ್ಶನ್ ಅವರಂತ ಸ್ಚಾರ್ ಗೆ ಸಹಜವಾಗಿಯೇ ಚೆನ್ನಾಗಿರುತ್ತದೆ.

ದರ್ಶನ್ ಅವರಂತ ಬಿಗ್ ಸ್ಟಾರ್ ಗಳ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಯೊಡನೆ ಚಿತ್ರಮಂದಿರಕ್ಕೆ ಬರುತ್ತಾರೆ,  ಹಾಸ್ಯ, ಪ್ರೀತಿ, ಪುರಾಣ ಸಿನಿಮಾದ ಸಂಭಾಷಣೆಯಲ್ಲಿರಬೇಕು, ಅಂತಿಮವಾಗಿ ಮನರಂಜನೆಯೇ ಮುಖ್ಯ, ಸಿನಿಮಾದಲ್ಲಿ ಸಂಭಾಷಣೆಯೇ ಅತಿ ಮುಖ್ಯ ಎಂದು ತರುಣ್ ಸುಧೀರ್ ಹೇಳಿದ್ದಾರೆ.

ಚೌಕ ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು, ಅನ್ನ ಕೊಡೋ ರೈತ, ಕಲಿಸಿದ ಗುರು... ತುಂಬಾ ಫೇಮಸ್ ಆಗಿತ್ತು, ಸೂಪರ್ ಸ್ಟಾರ್ ಗಳು ಹೇಳುವ ಕೆಲವೊಂದು ಡೈಲಾಗ್  ಸಾಮಾನ್ಯ ಮನುಷ್ಯನ  ಜೀವನದಲ್ಲಿ ನಡೆಯುತ್ತೇವೆ,ರಾಬರ್ಟ್ ಸಿನಿಮಾ ಮೂಲಕ ಉತ್ತಮ ಸಂಭಾಷಣೆ ಕೊಡುವ ಭರವಸೆ ನನಗಿದೆ ಎಂದು ಹೇಳಿದ್ದಾರೆ, ಉಮಾಪತಿ ಫಿಲ್ಮ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಏಪ್ರಿಲ್ ತಿಂಗಳಲ್ಲಿ  ಸೆಟ್ಟೇರಲಿದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp