ನಟ ಅಜಯ್ ರಾವ್ ಮುಂದಿನ ಸಿನಿಮಾಗೆ 'ಅಪೂರ್ವ' ನಾಯಕಿ

ಆನಂದ್ ಪ್ರಿಯಾ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಟಿಸುತ್ತಿರುವ ಅಜೇಯ್ ರಾವ್ ಗೆ ಅಪೂರ್ವ ನಾಯಕಿಯಾಗಿದ್ದಾರೆ,....
ಅಪೂರ್ವ
ಅಪೂರ್ವ
ಆನಂದ್ ಪ್ರಿಯಾ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಟಿಸುತ್ತಿರುವ ಅಜೇಯ್ ರಾವ್ ಗೆ ಅಪೂರ್ವ ನಾಯಕಿಯಾಗಿದ್ದಾರೆ,.
ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶನದಲ್ಲಿ ಮೂಡಿ ಬಪಂದ ಅಪೂರ್ವ ಸಿನಿಮಾ ನಾಯಕಿಯಾಗಿದ್ದ ಈಕೆ ಶರಣ್ ನಟನೆಯಸ ವಿಕ್ಟರಿ-2 ನಲ್ಲೂ ಅಭಿನಯಿಸಿದ್ದರು.ಸದ್ಯ ಮೊಡವೆ ಸಿನಿಮಾ ಶೂಟಿಂಗ್ ನಲ್ಲಿ ಅಪೂರ್ವ ಬ್ಯುಸಿಯಾಗಿದ್ದಾರೆ.
ಅಪೂರ್ವ ನಾಲ್ಕನೇ ಪ್ರಾಜೆಕ್ಟ್ ಗೋಕುಲ್ ಎಂಟರ್ ಪ್ರೈಸಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಚಿತ್ರಕ್ಕೆ ಸಹಿ ಮಾಡಿದ್ದಾರೆ, ಈ ಕಥೆಯ ಪಾತ್ರಕ್ಕೆ ಆಕೆ ಸೂಕ್ತವಾಗಿದ್ದಾರೆ ಎಂದು ಚಿತ್ರತಂಡ ನಿರ್ಧರಿಸಿದೆ, 
ನಿರ್ದೇಶಕ ಆನಂದ್ ಪ್ರಿಯಾ ಅವರ ಎರಡನೇ ಪ್ರಾಜೆಕ್ಟ್ ಇದಾಗಿದ್ದು, ಮಾರ್ಚ್ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ, ಸಿನಿಮಾಗೆ ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com