ಸಿಂಗ ಸಿನಿಮಾಗಾಗಿ ಭಾವಪೂರ್ಣ ಹಾಡು ಹಾಡಿದ ವಿಲನ್ 'ಪ್ರೇಮ್'

ಮಗ-ತಾಯಿಯ ಬಾಂಧವ್ಯದ ಬಗ್ಗೆ ನಿರ್ದೇಶಕ, ನಟ ಹಾಗೂ ಗಾಯಕ ಪ್ರೇಮ್ ಚೆನ್ನಾಗಿ ತಿಳಿದುಕೊಂಡಿದ್ದಾರೆ, ಹೀಗಾಗಿ ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಸಾಹಿತ್ಯಕ್ಕೆ ಪ್ರೇಮ್ ದನಿಗೂಡಿಸಿದ್ದಾರೆ,..
ನಿರ್ದೇಶಕ ಪ್ರೇಮ್
ನಿರ್ದೇಶಕ ಪ್ರೇಮ್
ತಾಯಿ-ಮಗನ ಸಂಬಂಧವನ್ನು ಅತ್ಯದ್ಭುತವಾಗಿ ಬಣ್ಣಿಸಬೇಕು ಎಂಬ ವಿಷಯ ಬಂದಾಗ ತಲೆಗೆ ಬಂದದ್ದು ನಿರ್ದೇಶಕ ಪ್ರೇಮ್ ಎಂದು ಸಿಂಗ ಸಿನಿಮಾ ನಿರ್ದಶಕ ವಿಜಯ್ ಕಿರಣ್ ಹೇಳಿದ್ದಾರೆ.
ಮಗ-ತಾಯಿಯ ಬಾಂಧವ್ಯದ ಬಗ್ಗೆ ನಿರ್ದೇಶಕ, ನಟ ಹಾಗೂ ಗಾಯಕ ಪ್ರೇಮ್ ಚೆನ್ನಾಗಿ ತಿಳಿದುಕೊಂಡಿದ್ದಾರೆ, ಹೀಗಾಗಿ ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಸಾಹಿತ್ಯಕ್ಕೆ  ಪ್ರೇಮ್ ದನಿಗೂಡಿಸಿದ್ದಾರೆ, ಧರ್ಮ ಇದಕ್ಕೆ ಸಂಗೀತ ನೀಡಿದ್ದಾರೆ. 
ಉದಯ್ ಕೆ.ಮೆಹ್ತಾ  ನಿರ್ಮಾಣದ ಈ ಸಿನಿಮಾದಲ್ಲಿ ವಿಜಯ್ ಕಿರಣ್ ಮತ್ತು ಚಿರಂಜೀವಿ ಸರ್ಜಾ ಮತ್ತೆ ಒಂದಾಗಿದ್ದಾರೆ. ಈ ಜೋಡಿ ರಾಮಲೀಲಾ ಚಿತ್ರದಲ್ಲಿ ಒಂದಾಗಿತ್ತು, ಮೇಜರ್ ಫೈಟ್ ಸನ್ನಿವೇಶಗಳು ಮಾತ್ರ ಬಾಕಿಯಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com