ಯಜಮಾನ ಚಿತ್ರದಲ್ಲಿ ತಾನ್ಯಾ ಹೋಪೆ ಪತ್ರಕರ್ತೆ!

ತಾನ್ಯಾ ಹೋಪೆ ಅಭಿಯನದ ಕನ್ನಡದ ಮೊದಲ ಚಿತ್ರ ಯಜಮಾನದಲ್ಲಿನ ಬಸಣ್ಣಿ ಬಾ ಗೀತೆ ಈಗಾಗಲೇ ಎಲ್ಲರ ಬಾಯಲ್ಲೂ ಗುಯ್ ಗುಡುತ್ತಿದೆ. ದರ್ಶನ್ ಜೊತೆಗಿನ ಪೆಪ್ಪಿ ಹಾಡಿಗೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

Published: 21st February 2019 12:00 PM  |   Last Updated: 21st February 2019 01:29 AM   |  A+A-


A still from the movie

ಯಜಮಾನ ಚಿತ್ರ

Posted By : ABN ABN
Source : The New Indian Express
ತಾನ್ಯಾ ಹೋಪೆ ಅಭಿಯನದ ಕನ್ನಡದ ಮೊದಲ ಚಿತ್ರ ಯಜಮಾನದಲ್ಲಿನ ಬಸಣ್ಣಿ ಬಾ ಗೀತೆ ಈಗಾಗಲೇ  ಎಲ್ಲರ ಬಾಯಲ್ಲೂ ಗುಯ್ ಗುಡುತ್ತಿದೆ. ದರ್ಶನ್  ಜೊತೆಗಿನ ಪೆಪ್ಪಿ ಹಾಡಿಗೆ ವಿ. ಹರಿಕೃಷ್ಣ ಸಂಗೀತ  ಸಂಯೋಜಿಸಿದ್ದಾರೆ.

ಬಸಣ್ಣಿ ಅಂತಾ ಕರೆಸಿಕೊಳ್ಳುವುದಕ್ಕೆ ಸಂತೋಷವಾಗುತ್ತಿದೆ ಎನ್ನುವ ತಾನ್ಯಾ, ನೃತ್ಯ ಇಷ್ಟಪಡುವುದಾಗಿ ಹೇಳಿದ್ದಾರೆ.ಸ್ಟೆಪ್ ಹೇಳಿಕೊಟ್ಟ ಕೋರಿಯೋ ಗ್ರಾಪರ್  ಗಣೇಶ್ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದ್ದಾರೆ.

ಯಜಮಾನ ಚಿತ್ರದಲ್ಲಿ ಗಂಗಾ ಪಾತ್ರದಲ್ಲಿ ಅಭಿನಯಿಸಿದ್ದು, ನನ್ನದು ಪತ್ರಕರ್ತೆಯ ಪಾತ್ರವಾಗಿದೆ. ಸ್ವತಂತ್ರ ಪತ್ರಕರ್ತೆಯಾಗಿ ದರ್ಶನ್ ಅವರ ಹೋರಾಟಕ್ಕೆ ಸಹಾಯ ಮಾಡುವುದಾಗಿ ತಾನ್ಯಾ ತಿಳಿಸಿದ್ದಾರೆ.

ನಿರ್ದೇಶಕ ವಿ. ಹರಿಕೃಷ್ಣ ಹಾಗೂ ನಿರ್ಮಾಪಕಿ ಶೈಲಾಜಾ ನಾಗ್  ಸೇರಿದಂತೆ ಎಲ್ಲರೂ ಹೊಸಬರನ್ನು ಪ್ರೋತ್ಸಾಹಿಸುತ್ತಾರೆ. ಮೊದಲ ಬಾರಿಗೆ ದರ್ಶನ್ ಅವರ ಎದುರಿಗೆ ಕ್ಯಾಮರಾ ಮುಂದೆ ನಿಂತಾಗ ಎಲ್ಲಾ ಸಾಲುಗಳು ಮರೆತು ಹೋಗಿತ್ತು. ಶಾಂತವಾಗಿ ಇರಲು ಪ್ರಯತ್ನಿಸಿದರೂ ಗೊಂದಲಕ್ಕೊಳಗಾಗುತ್ತಿದೆ. ಕ್ಯಾಮರಾ ನೋಡಿಕೊಂಡು ಸಂಭಾಷಣೆ ಹೇಳುವಂತೆ ಹೇಳಿದರು. ನಂತರ ಸ್ವಲ್ಪ ನಿರಾಳವಾಗುತಿತ್ತು ಎಂದು ತಾನ್ಯಾ ಚಿತ್ರೀಕರಣ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ.

ಚಿತ್ರದಲ್ಲಿ ರಷ್ಮಿಕಾ ಮಂದಣ್ಣ ಪಾತ್ರ ಸಂಪೂರ್ಣವಾಗಿ ವಿಭಿನ್ನವಾಗಿದೆ. ಆಕೆಯದ್ದು ಪ್ರೀತಿ ಪ್ರೇಮದ ಪಾತ್ರವಾದ್ದರೆ, ನಾನು ಸಮಸ್ಯೆ ಬಗೆಹರಿಸುವಲ್ಲಿ ತೊಡಗಿಸಿಕೊಂಡಿರುತ್ತೇನೆ. ಮಾರ್ಚ್ 1 ರಂದು ತಾನೂ ಅಭಿನಯಿಸಿರುವ ಯಜಮಾನ ಮತ್ತು ತಮಿಳು ಚಿತ್ರ ತಂದಂ ಬಿಡುಗಡೆಯಾಗಲಿದ್ದು, ಬೆಂಗಳೂರಿನಲ್ಲಿಯೇ ಇರುತ್ತೇನೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ನೀಡುವಂತಾಗಲು ಸಿದ್ಧಗೊಳ್ಳುತ್ತೇನೆ ಎಂದು ತಾನ್ಯಾ ಹೇಳಿದ್ದಾರೆ.

ಉತ್ತಮ ಚಿತ್ರಕಥೆ ಸಿಕ್ಕಿದ್ದರೆ ಭಾಷೆ ಯಾವುದಾರೇನು?  ಕೆಲಸ ಮಾಡಲು ಸಿದ್ಧವಿರುವುದಾಗಿ ಹೇಳುವ ತಾನ್ಯಾ, ಪರದೆಯ ಮೇಲೆ ತನ್ನನ್ನು ತಾನೂ ನೋಡುವುದರಿಂದ ಮತ್ತಷ್ಟು ಬದಲಾವಣೆ ಮಾಡಿಕೊಳ್ಳಲು ಅನುಕೂಲಕರವಾಗಲಿದೆ ಎನ್ನುತ್ತಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp