'ಬಿಲ್ಲ ರಂಗ ಭಾಷಾ' ದಲ್ಲಿ ಸುದೀಪ್ ಗೆ ನಾಯಕಿಯರೆಷ್ಟು?

ಪೈಲ್ವಾನ್ ಸಿನಿಮಾದ ಹಾಡೊಂದರ ಶೂಟಿಂಗ್ ನಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಜೊತೆಜೊತೆಗೆ ಕೋಟಿಗೊಬ್ಬ-3 ಸಿನಿಮಾ ಶೂಟಿಂಗ್ ನಡೆಯುತ್ತಿದೆ,...
ಸುದೀಪ್
ಸುದೀಪ್
ಪೈಲ್ವಾನ್ ಸಿನಿಮಾದ ಹಾಡೊಂದರ ಶೂಟಿಂಗ್ ನಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಜೊತೆಜೊತೆಗೆ ಕೋಟಿಗೊಬ್ಬ-3 ಸಿನಿಮಾ ಶೂಟಿಂಗ್ ನಡೆಯುತ್ತಿದೆ, ಇದರ ಜೊತೆಗೆ ಅನೂಪ್ ಭಂಡಾರಿ ನಿರ್ದೇಶನದ ಬಿಲ್ಲ ರಂಗ ಭಾಷಾ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ.
ಸಿನಿಮಾ ಕಥೆಯಲ್ಲಿ ಮೂರು ಪಾತ್ರಗಳಿದ್ದು, ಸುದೀಪ್ ಗೆ ನಾಯಕಿ ಯಾರು ಎಂಬ ಪ್ರಶ್ನೆ ಮೂಡಿದೆ, ಬಿಲ್ಲಾ ರಂಗ ಭಾಷಾ ದಲ್ಲಿ ಒಬ್ಬರಿಗಿಂತ ಹೆಚ್ಚಿನ ನಾಯಕಿಯರಿದ್ದಾರೆ ಎಂದು ಹೇಳಲಾಗಿದೆ, ಆದರೆ ನಾಯಕಿಯರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ,
ಸುದೀಪ್ ಹೋಮ್ ಬ್ಯಾನರ್ ಸುಪ್ರಿಯಾನ್ವಿ ಪಿಕ್ಟರ್ ಸ್ಟುಡಿಯೋ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ,  ಸಿನಿಮಾ ಟೈಟಲ್ ಕೆಳಗೆ ಆಸಕ್ತಿದಾಯಕವಾಗಿದೆ, 2209Ad ಎಂದು ಟ್ಯಾಗ್ ಲೈನ್ ನಲ್ಲಿದೆ, ಕೋಟಿಗೊಬ್ಬ3 ಸಿನಿಮಾ ಚಿತ್ರೀಕರಣ ಪೂರ್ಣಗೊಂಡ ನಂತರ ಬಿಲ್ಲ ರಂಗ ಭಾಷಾ ಶೂಟಿಂಗ್ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com