'ಸಿನಿಮಾ ನಿರ್ದೇಶನ ನನಗೆ ಹೊಸತಲ್ಲ, ರವಿಚಂದ್ರನ್ ಬಳಿ 10 ವರ್ಷ ಕೆಲಸ ಮಾಡಿದ್ದೇನೆ'

ಸಿನಿಮಾ ರಂಗದಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸದ್ಯ ಯಜಮಾನ ಸಿನಿಮಾದ ರಿರೆಕಾರ್ಡಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ..
ಯಜಮಾನ ಸಿನಿಮಾ ಸ್ಟಿಲ್
ಯಜಮಾನ ಸಿನಿಮಾ ಸ್ಟಿಲ್
ಸಿನಿಮಾ ರಂಗದಲ್ಲಿ 36 ವರ್ಷಗಳ ಕಾಲ  ಸೇವೆ ಸಲ್ಲಿಸಿರುವ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ  ಸದ್ಯ ಯಜಮಾನ ಸಿನಿಮಾದ ರಿರೆಕಾರ್ಡಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. 
ಸಿನಿಮಾ ಎಂಬುದು, ಸೃಜನಾತ್ಮಕ ಕೆಲಸವಾಗಿದೆ, ಸಂಗೀತ ನನ್ನ ಜೀವನದ ಒಂದು ಭಾಗವಾಗಿದೆ, ಆದರೆ  ಇದೇ ಮೊದಲ ಬಾರಿಗೆ ನಿರ್ದೇಶನದ ಸಿನಿಮಾವಾಗಿದೆ.
ಮೆಕ್ಯಾನಿಕ್ ಆಗಿ ಜೀವನ ಆರಂಭಿಸಿದ ಹರಿಕೃಷ್ಣ, ತಮಗೆ  ಸಂಗೀತ ಕಲಿಸಿಕೊಟ್ಟಿದ್ದಕ್ಕೆ ತಮ್ಮ ತಂದೆಗೆ ಧನ್ಯವಾದ ಹೇಳಿದ್ದಾರೆ. ಸ್ಪೇರ್ ಪಾರ್ಟ್ಸ್, ಕೀ ಬೋರ್ಡ್ ನಿಂದ ಸದ್ಯ ಮೆಗಾ ಫೋನ್ ಗೆ ಬಂದಿದ್ದಾರೆ,
ಸಂಗೀತಗಾರನಾಗಿ ಪಯಣ ಆರಂಭಿಸಿದ ಹರಿಕೃಷ್ಣ, 8ನೇ ವರ್ಷದಲ್ಲಿ ಸಂಗೀತ ಕಲಿಯಲು ಆರಂಭಿಸಿ, 9ನೇ ವಯಸ್ಸಿಗೆ ಆರ್ಕೆಸ್ಟ್ರಾ ಸೇರಿದರು. 14ನೇ ವಯಸ್ಸಿಗೆ ಕಾರ್ ಮೆಕ್ಯಾನಿಕ್ ಆಗಿ ಕೆಲಸಕ್ಕೆ ಸೇರಿದರು. ಈ ಮಧ್ಯೆ  3 ವರ್ಷ ಸಂಗೀತಕ್ಕೆ ಬ್ರೇಕ್ ನೀಡಿದ್ದರು. 
ತಮ್ಮ 17ನೇ ವಯಸ್ಸಿಗೆ ಸಂಗೀತ ನಿರ್ದೇಶಕ ಸಾಧು ಕೋಕಿಲಾ ಮತ್ತೆ ಹರಿಕೃಷ್ಣ ಅವರನ್ನು ಸಂಗೀತ ನಿರ್ದೇಶನಕ್ಕೆ ವಾಪಸ್ ಕರೆತಂದರು, ತಾವು ಸಂಗೀತ ನಿರ್ದೇಶಕನಾಗಲು ಸಹಾಯ ಮಾಡಿದ, ಟೈಗರ್ ಪ್ರಭಾಕರ್, ಹಂಸಲೇಖಾ ಹಾಗೂ ರವಿಚಂದ್ರನ್ ಮತ್ತು ದರ್ಶನ್ ಅವರನ್ನು ನೆನಪಿಸಿಕೊಂಡರು.
ಸಿನಿಮಾ ನಿರ್ದೇಶನ ನನಗೆ ಹೊಸತಲ್ಲ, ನಾನು ಹಿಂದೆ ರವಿಚಂದ್ರನ್ ಅವರ ಜೊತೆ ಕೆಲಸ ಮಾಡಿದ್ದೆ, ಸುಮಾರು 10 ವರ್ಷಗಳ ಅವರ ಜೊತೆಗಿದ್ದೆ, ಅವರಿಂದ ಸಿನಿಮಾ ನಿರ್ಮಾಣ ಮಾಡುವುದನ್ನು ಕಲಿತಿದ್ದೇನೆ, ತಂಬಾ ಕೆಲಸ ಮಾಡುವುದರಲ್ಲಿ ನನಗೆ ನಂಬಿಕೆಯಿಲ್ಲ, 
ಸಿನಿಮಾವವನ್ನು ನಿರ್ದೇಶನ, ಸಂಗೀತ, ನಟನೆ,ಸಂಕಲನ, ಸೇರಿದಂತೆ ಹಲವು ವಿಭಾಗಗಳನ್ನು ಬೇರೆ ಬೇರೆ ಯಾಗಿ ವಿಭಜಿಸಬಾರದು ಎಂದು ಹೇಳಿದ್ದಾರೆ,ಈ ಸಿನಿಮಾದಲ್ಲಿ ಸಂಭಾಷಣೆ ಬರೆಯುವಾಗ ಡೈಲಾಗ್ ಬರಹಗಾರರರು, ನಿರ್ಮಾಪಕರು ಹಾಗಬ ತಂತ್ರಜ್ಞರ ಪಕ್ಕ ಕುಳಿತುಕೊಳ್ಳುತ್ತಿದ್ದೆ, 
ದರ್ಶನ್ ಮತ್ತು ಹರಿಕೃಷ್ಣ ಸ್ನೇಹ ತುಂಬಾ ಹಳೇಯದ್ದು, ಸಂಗೀತ ನಿರ್ದೇಶಕರಾಗಿ ಸುಮಾರು 25 ಸಿನಿಮಾ ಗಳಲ್ಲಿ ಕೆಲಸ ಮಾಡಿದ್ದಾರೆ, ದರ್ಶನ್ ಅವರನ್ನು ನಾನು ಸೂಪರ್ ಸ್ಚಾರ್ ಆಗಿ ನೋಡಿದ್ದೇನೆ, ಅವರು ಯಾವಾಗಲು ಸ್ಟಾರ್ ಆಗಿರಲು ನಾನು ಬಯಸುತ್ತೇನೆ, ನಾನು ಒಬ್ಬ ಅಭಿಮಾನಿಯಾಗಿ ನಾನು ಜವಾಬ್ದಾರಿಯಾಗಿದ್ದೇನೆ,  ಅವರು ತುಂಬಾ ಮಾತನಾಡುವುದಿಲ್ಲ,  ನಾವು ಮಾತನಾಡುವುದು ತುಂಬಾ ಕಡಿಮೆಯಾಗಿದೆ,ಆದರೆ ಕೆಲಸ ತುಂಬಾ ಮಾತನಾಡಿದೆ.
ಕ್ಲೈಮ್ಯಾಕ್ಸ್ ಸಿನಿಮಾದ ಪ್ರಮುಖ ಭಾಗವಾಗಿದೆ, ಸಂಗೀತ ನಿರ್ದೇಶಕ, ನಿರ್ದೇಶಕ ಹಾಗೂ ಬರಹಗಾರನಾಗಿ ಹರಿಕೃಷ್ಣ ಪ್ರೇಕ್ಷಕರ ಅಭಿರುಚಿಯನ್ನು ಅರ್ಥಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com