ಕೆಜಿಎಫ್ 2 ಚಿತ್ರಕ್ಕಾಗಿ ಭರ್ಜರಿ ಸೆಟ್‍ಗೆ ಸಿದ್ಧತೆ, ಅದ್ಭುತ ಕಲ್ಪನೆ!

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿರುವ ಕೆಜಿಎಫ್ ಚಾಪ್ಟರ್ 1 ಚಿತ್ರದ ಬಳಿಕ ಇದೀಗ ಚಿತ್ರತಂಡ ಕೆಜಿಎಫ್ 2 ಚಿತ್ರಕ್ಕಾಗಿ ಬೃಹತ್ ಸೆಟ್ ನಿರ್ಮಾಣಕ್ಕೆ ಮುಂದಾಗಿದೆ.
ಕೆಜಿಎಫ್ ಚಿತ್ರತಂಡ
ಕೆಜಿಎಫ್ ಚಿತ್ರತಂಡ
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿರುವ ಕೆಜಿಎಫ್ ಚಾಪ್ಟರ್ 1 ಚಿತ್ರದ ಬಳಿಕ ಇದೀಗ ಚಿತ್ರತಂಡ ಕೆಜಿಎಫ್ 2 ಚಿತ್ರಕ್ಕಾಗಿ ಬೃಹತ್ ಸೆಟ್ ನಿರ್ಮಾಣಕ್ಕೆ ಮುಂದಾಗಿದೆ.
ಪಂಚಿಂಗ್ ಡೈಲಾಗ್ ಮೂಲಕ ಕೆಜಿಎಫ್ ಚಿತ್ರ ಚಿತ್ರ ರಸಿಕರ ಮನಗೆದ್ದಿತ್ತು. ನಿರ್ದೇಶಕರು ಕಲಾ ನಿರ್ದೇಶಕರೊಂದಿಗೆ ಕೋಲಾರದ ಕೆಜಿಎಫ್ ಗೆ ಭೇಟಿ ನೀಡಿ ಅಲ್ಲಿ ಸೆಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. 
ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್, ಛಾಯಾಗ್ರಾಹಕ ಭುವನ್ ಗೌಡ ಮತ್ತು ಕಲಾ ನಿರ್ದೇಶಕ ಶಿವಕುಮಾರ್ ಸೆಟ್ ನಿರ್ಮಾಣಕ್ಕಾಗಿ ಸ್ಥಳವನ್ನು ಗುರುತಿಸಿದ್ದಾರೆ. ಸೆಟ್ ಕೆಲಸ ಮಾರ್ಚ್ ಕೊನೆಯಲ್ಲಿ ನಿರ್ಮಾಣವಾಗಲಿದ್ದು ಏಪ್ರಿಲ್ ಕೊನೆಯಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com