ಅರ್ಜುನ್ ಜನ್ಯ ಸಂಗೀತ ನಿರ್ದೇಶನದ 100ನೇ ಸಿನಿಮಾ '99' ಆಡಿಯೋ ಹಕ್ಕು ದಾಖಲೆಯ ಬೆಲೆಗೆ ಮಾರಾಟ!

ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿರುವ 100ನಿ ಚಿತ್ರವಾದ 99 ಸಿನಿಮಾದ ಆಡಿಯೋ ಮಾರಾಟ ಹಕ್ಕು ಆನಂದ್ ಆಡಿಯೋ ಕಂಪನಿಗೆ ದಾಖಲೆಯ ಬೆಲೆಗೆ ಮಾರಾಟ ...
99 ಸಿನಿಮಾ ಪೋಸ್ಚರ್
99 ಸಿನಿಮಾ ಪೋಸ್ಚರ್
ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿರುವ  100ನಿ ಚಿತ್ರವಾದ 99 ಸಿನಿಮಾದ ಆಡಿಯೋ ಮಾರಾಟ ಹಕ್ಕು ಆನಂದ್ ಆಡಿಯೋ ಕಂಪನಿಗೆ ದಾಖಲೆಯ ಬೆಲೆಗೆ ಮಾರಾಟ ಮಾಡಲಾಗಿದೆ.
ಗೋಲ್ಟನ್ ಸ್ಟಾರ್ ನಟನೆಯ ಚಿತ್ರಗಳಲ್ಲಿ ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿರುವ ಆಡಿಯೋ ಇದಾಗಿದೆ, ಈಗಾಗಲೇ ಸಿನಿಮಾ ಗಣೇಶ್ ಹೊಸ ಗಡ್ಡದ ಲುಕ್ ನಿಂದಾಗಿ ಭಾರೀ ಸದ್ದು ಮಾಡುತ್ತಿದೆ.
ತಮಿಳಿನ 96 ಸಿನಿಮಾ ಕಥೆ ಆರಿಸಿಕೊಂಡು ಇಲ್ಲಿನ ನೇಟಿವಿಟಿಕೆ ಹೊಂದುವಂತೆ ಕಥೆ ಬದಲಾಯಿಸಿಕೊಳ್ಳಲಾಗಿದೆ, ಸಿನಿಮಾದಲ್ಲಿ 7 ಹಾಡುಗಳಿದ್ದು, ಭಾವನಾ ಗಣೇಶ್ ಗೆ ನಾಯಕಿಯಾಗಿದ್ದಾರೆ, ಲಂಡನ್ ನಲ್ಲಿ ಅರ್ಜುನ್ ಜನ್ಯ ಹಾಡಿನ ಮಿಕ್ಸಿಂಗ್ ಮತ್ತು ರಿ ರೆಕಾರ್ಡಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಸಿನಿಮಾ ಏಪ್ರಿಲ್ ನಲ್ಲಿ ರಿಲೀಸ್ ಆಗುವ ಸಾದ್ಯತೆಯಿದೆ, 35 ದಿನಗಳಲ್ಲಿ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com