ಹೊಸ ವರ್ಷಕ್ಕೆ ಸ್ವಾಗತ: 2019 ರಲ್ಲಿ ನೋಡಬೇಕಾದ ಸಿನಿಮಾಗಳಿವು!

2018, ಮನರಂಜನೆಯ ವಿಷಯದಲ್ಲಿ ಅತ್ಯುತ್ತಮ ವಿಷಯವಾಗಿತ್ತು. 2.0 ಥಗ್ಸ್ ಆಫ್ ಹಿಂದೋಸ್ಥಾನ್ ನಂತಹ ಭಾರಿ ಸದ್ದು ಮಾಡಿದ್ದ ಚಿತ್ರಗಳು 2018 ರಲ್ಲಿ ತೆರೆ ಕಂಡಿದ್ದವು. 2018 ಸರಿದು 2019 ವರ್ಷಕ್ಕೆ ಕಾಲಿಡುತ್ತಿದ್ದಂತೆ ಹೊಸ ಚಿತ್ರಗಳ ಬಗ್ಗೆಯೂ ನಿರೀಕ್ಷೆ ಮೂಡಿದೆ.

Published: 01st January 2019 12:00 PM  |   Last Updated: 01st January 2019 12:26 PM   |  A+A-


New Year special: Films to look forward to in 2019

ಹೊಸ ವರ್ಷಕ್ಕೆ ಸ್ವಾಗತ: 2019 ರಲ್ಲಿ ನೋಡಬೇಕಾದ ಸಿನಿಮಾಗಳಿವು!

Posted By : SBV
Source : Online Desk
2018, ಮನರಂಜನೆಯ ವಿಷಯದಲ್ಲಿ ಅತ್ಯುತ್ತಮ ವಿಷಯವಾಗಿತ್ತು. 2.0 ಥಗ್ಸ್ ಆಫ್ ಹಿಂದೋಸ್ಥಾನ್ ನಂತಹ ಭಾರಿ ಸದ್ದು ಮಾಡಿದ್ದ ಚಿತ್ರಗಳು 2018 ರಲ್ಲಿ ತೆರೆ ಕಂಡಿದ್ದವು.  2018 ಸರಿದು 2019 ವರ್ಷಕ್ಕೆ ಕಾಲಿಡುತ್ತಿದ್ದಂತೆ ಹೊಸ ಚಿತ್ರಗಳ ಬಗ್ಗೆಯೂ ನಿರೀಕ್ಷೆ ಮೂಡಿದೆ. 

2019 ರಲ್ಲಿ ನೋಡಲೇಬೇಕಾದ ಚಿತ್ರಗಳು ಇವು
ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ, ಕಂಗನಾ ರಣೌತ್ ನಟನೆಯ ಮಣಿಕರ್ಣಿಕಾ 2019 ರಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವಂತಹ ಚಿತ್ರ. ಜ.25 ರಂದು ಈ ಚಿತ್ರ ಬಿಡುಗಡೆಯಾಗುತ್ತಿದೆ. 

ಕಳಂಕ್: ಅಭಿಷೇಕ್ ವರ್ಮನ್ ಅವರ ಕಳಂಕ್ ಚಿತ್ರ ಘೋಷಣೆಯಾದಾಗಿನಿಂದಲೂ ಸಹ ಸದ್ದು ಮಾಡುತ್ತಿರುವ ಚಿತ್ರವಾಗಿದ್ದು, ಸಂಜಯ್ ದತ್ ಹಾಗೂ ಮಾಧುರಿ ದೀಕ್ಷಿತ್ ಅವರು ನಟಿಸಿದ್ದಾರೆ.  2019 ರ ಏ.19 ರಂದು ಚಿತ್ರ ಬಿಡುಗಡೆಯಾಗಲಿದೆ. 

ಗಲ್ಲಿ ಬಾಯ್: 2019 ರಲ್ಲಿ ಅತಿ ಹೆಚ್ಚು ನಿರೀಕ್ಷೆ ಮೂಡಿಸಿರುವ ಚಿತ್ರಗಳ ಪೈಕಿ ಗಲ್ಲಿ ಬಾಯ್ ಸಹ ಒಂದು,  ಬಾಲಿವುಡ್‍ನ ಕ್ರಿಯಾಶೀಲ ನಟ ರಣವೀರ್ ಮತ್ತು ಕ್ಯೂಟ್ ನಟಿ ಅಲಿಯಾ ಭಟ್ ಅಭಿನಯದ ಜೋಯಾ ಅಖ್ತರ್ ನಿರ್ದೇಶನದ ಗಲ್ಲಿ ಬಾಯ್ ಬಿಡುಗಡೆಗೆ ಮುನ್ನವೇ ಸಾಕಷ್ಟು ಸುದ್ದಿಯಾಗಿದೆ. ಫೆಬ್ರವರಿ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. 
 
ಸ್ಟೂಡೆಂಟ್ ಆಫ್ ದಿ ಇಯರ್-2: ವಿದ್ಯಾರ್ಥಿ ಬದುಕಿನ ಕಥಾ ಹಂದರವಿರುವ ಸ್ಟೂಡೆಂಟ್ ಆಫ್ ದಿ ಇಯರ್-2 ಸಿನಿಮಾದ ಮೂಲಕ ಅನನ್ಯ ಪಾಂಡೆ ಬಾಲಿವುಡ್ ಗೆ ಎಂಟ್ರಿ ನೀಡಲಿದ್ದಾರೆ. ಸ್ಟೂಡೆಂಟ್ ಆಫ್ ದಿ ಇಯರ್-2 ರಲ್ಲಿ ಎರಡು ಹಿರೋಹಿನ್ ಗಳಿರಲಿದ್ದಾರೆ. 

ಭರತ್: ಸಲ್ಮಾನ್ ಖಾನ್, ಕತ್ರಿನಾ ಕೈಫ್ ಹಾಗೂ ದಿಶಾ ಪಠಾಣಿ ನಟನೆಯ ಭರತ್ ಚಿತ್ರ 2019 ರಲ್ಲಿ ಚಿತ್ರ ಬಿಡುಗಡೆಯಾಗಲಿದೆ. 

ಬ್ರಹ್ಮಾಸ್ತ್ರ: ಅಮಿತಾಬ್ ಬಚ್ಚನ್, ಆಲಿಯಾ ಭಟ್ ಹಾಗೂ ರಣ್ ಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ 2019 ರಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರವಾಗಿದೆ. 
Stay up to date on all the latest ಸಿನಿಮಾ ಸುದ್ದಿ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp