ಖಾಕಿ ಗೆಟಪ್ ನಲ್ಲಿ ಮಿಂಚಲಿರುವ 'ಅವನೇ ಶ್ರೀಮನ್ನಾರಾಯಣ'

ಕಿರಿಕ್ ಪಾರ್ಟಿ ಚಿತ್ರದ ನಂತರ ರಕ್ಷಿತ್ ಶೆಟ್ಟಿ ನಟಿಸಿದ ಯಾವ ಚಿತ್ರಗಳು ಕೂಡ ಬಿಡುಗಡೆಯಾಗಿಲ್ಲ. ಇದೀಗ ...

Published: 07th January 2019 12:00 PM  |   Last Updated: 07th January 2019 12:20 PM   |  A+A-


Rakshit Shetty in Avane Shrimannarayana

ಅವನೇ ಶ್ರೀಮನ್ನಾರಾಯಣದಲ್ಲಿ ರಕ್ಷಿತ್ ಶೆಟ್ಟಿ

Posted By : SUD
Source : The New Indian Express
ಕಿರಿಕ್ ಪಾರ್ಟಿ ಚಿತ್ರದ ನಂತರ ರಕ್ಷಿತ್ ಶೆಟ್ಟಿ ನಟಿಸಿದ ಯಾವ ಚಿತ್ರಗಳು ಕೂಡ ಬಿಡುಗಡೆಯಾಗಿಲ್ಲ. ಇದೀಗ ಅವರ ಬಹು ನಿರೀಕ್ಷಿತ ಚಿತ್ರ ಅವನೇ ಶ್ರೀಮನ್ನಾರಾಯಣ ಶೂಟಿಂಗ್ ಭರದಿಂದ ಸಾಗುತ್ತಿದೆ.

ಒಂದು ಸಣ್ಣ ದೃಶ್ಯದಲ್ಲಿ ಬಿಳಿ ಶರ್ಟ್ ಮತ್ತು ಧೋತಿ ಬಿಟ್ಟರೆ ಖಾಕಿ ಯೂನಿಫಾರ್ಮ್ ತೊಟ್ಟಿರುವ ರಕ್ಷಿತ್ ಶೆಟ್ಟಿ ಚಿತ್ರದುದ್ದಕ್ಕೂ ಅದೇ ಗೆಟಪ್ ನಲ್ಲಿ ಇರುತ್ತಾರೆ. ಹಾಡಿನಲ್ಲಿ ಕೂಡ ಪೊಲೀಸ್ ಅವತಾರದಲ್ಲಿಯೇ ಕಾಣಿಸಿಕೊಳ್ಳುತ್ತಾರೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಸಚಿನ್ ರವಿ.

ಪುಷ್ಕರ್ ಫಿಲ್ಮ್ಸ್ ಮತ್ತು ಹೆಚ್ ಕೆ ಪ್ರಕಾಶ್ ಅವರ ಶ್ರೀ ದೇವಿ ಎಂಟರ್ಟೈನರ್ಸ್ ಜೊತೆಯಾಗಿ ನಿರ್ಮಿಸುತ್ತಿರುವ ಚಿತ್ರದ ಸಂಭಾಷಣೆ ಭಾಗ ಬಹುತೇಕ ಮುಗಿದಿದ್ದು ಮೂರು ಹಾಡಿನ ಚಿತ್ರೀಕರಣ ಬಾಕಿ ಇದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿವೆ. ಫೆಬ್ರವರಿಯಲ್ಲಿ ಹೊಡೆದಾಟದ ದೃಶ್ಯ ಚಿತ್ರೀಕರಣವಾಗಲಿದೆ. ಹಾಡಿಗೆ ಇಮ್ರಾನ್ ಸರ್ದಾರಿಯಾ ಅವರ ಕೊರಿಯೊಗ್ರಫಿ ಮತ್ತು ಸಾಹಿತ್ಯ ನಾಗಾರ್ಜುನ ಅವರದ್ದಿದೆ.

ಈ ಮಧ್ಯೆ ಅವನೇ ಶ್ರೀಮನ್ನಾರಾಯಣ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು ಅಷ್ಟೂ ಭಾಷೆಗಳ ಡಬ್ಬಿಂಗ್ ಏಕಕಾಲದಲ್ಲಿ ನಡೆಯಲಿದೆ. ಬೇರೆ ಭಾಷೆಗಳಲ್ಲಿ ಡಬ್ ಮಾಡಲು ಕಲಾವಿದರ ಆಯ್ಕೆ ನಡೆಯುತ್ತಿದೆ. ಚಿತ್ರದಲ್ಲಿ ದೃಶ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು 3ಡಿ ತಂತ್ರಜ್ಞಾನ ಬಳಸಲಾಗುತ್ತಿದೆ.
Stay up to date on all the latest ಸಿನಿಮಾ ಸುದ್ದಿ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp