ಕಾರಣಾಂತರಗಳಿಂದ ಬಜಾರ್ ಸಿನಿಮಾ ರಿಲೀಸ್ ಮುಂದೂಡಿಕೆ

ಸಿಂಪಲ್ ಸುನಿ ನಿರ್ದೇಶನದ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ ಮೂಲಕ ಸದ್ದು ಮಾಡ್ತಿರುವ ಬಜಾರ್ ಸಿನಿಮಾ ಇದೇ ತಿಂಗಳು ತೆರೆಕಾಣಬೇಕಿತ್ತು...
ಬಜಾರ್ ಸಿನಿಮಾ ಸ್ಟಿಲ್
ಬಜಾರ್ ಸಿನಿಮಾ ಸ್ಟಿಲ್
ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ ಮೂಲಕ ಸದ್ದು ಮಾಡ್ತಿರುವ ಬಜಾರ್ ಸಿನಿಮಾ ಇದೇ ತಿಂಗಳು ತೆರೆಕಾಣಬೇಕಿತ್ತು. ಆದರೆ , ಬಿಡುಗಡೆ ದಿನಾಂಕವನ್ನ ಮುಂದಕ್ಕೆ ಹಾಕಿಕೊಂಡಿದೆ. 
ಧನ್ ವೀರ್ ಈ ಚಿತ್ರದ ನಾಯಕನಾಗಿದ್ದು, ಇದು ಇವರ ಮೊದಲ ಸಿನಿಮಾ. ಧನ್​ವೀರ್​ಗೆ ನಾಯಕಿಯಾಗಿ ಅದಿತಿ ಪ್ರಭುದೇವಾ ನಟಿಸಿರುವ ಈ ಸಿನಿಮಾ ಜನವರಿ 11ನೇ ತಾರೀಖು ಬಜಾರ್ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಆ ದಿನಕ್ಕೆ ಸಿನಿಮಾ ರಿಲೀಸ್ ಆಗುತ್ತಿಲ್ಲ ಎಂದು ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮಾಡಿದ್ದಾರೆ. 
ನಮ್ಮ ಸಿನಿಮಾ ಪಾರಿವಾಳಗಳ ಕುರಿತಾಗಿದ್ದು,  ವನ್ಯಜೀವಿ ಮಂಡಳಿ ಈ ಸಂಬಂಧ ಚರ್ಚೆ ನಡೆಸಬೇಕಿದೆ, ಬೇರೆ ಭಾಷೆಗಳ ದೊಡ್ಡ ದೊಡ್ಡ  ಬಜೆಟ್ ಸಿನಿಮಾ  ಬಿಡುಗಡೆಯಾಗುತ್ತಿರುವ ಕಾರಣ, ನನಗೆ ನಿರೀಕ್ಷಿತ ಸಂಖ್ಯೆಯ ಥಿಯೇಟರ್ ಸಿಗುತ್ತಿಲ್ಲ, ಈಗಾಗಿ ನಿರ್ಮಾಪಕರು ಬಿಡುಗಡೆ ದಿನಾಂಕ ಮುಂದೂಡಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com