ಯಶ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್: 200 ಕೋಟಿ ಕ್ಲಬ್ ಸೇರಿದ ಕೆಜಿಎಫ್!

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಐತಿಹಾಸಿಕ ದಾಖಲೆ ಬರೆದಿದ್ದು 200 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಿದೆ...
ಯಶ್
ಯಶ್
ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಐತಿಹಾಸಿಕ ದಾಖಲೆ ಬರೆದಿದ್ದು 200 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಿದೆ. 
ಇಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ ಒಂದೆಡೆಯಾದರೆ ಅವರ ನಟನೆಯ ಕೆಜಿಎಫ್ ಚಿತ್ರ ಹೊಸ ಮೈಲಿಗಲ್ಲು ಸೃಷ್ಟಿಸಿರುವುದು ಅವರಿಗೆ ಹುಟ್ಟುಹಬ್ಬದ ದೊಡ್ಡ ಗಿಫ್ಟ್ ಆಗಿದೆ.
ಕೆಜಿಎಫ್ ಚಿತ್ರ 17ನೇ ದಿನಕ್ಕೆ ವಿಶ್ವದಾದ್ಯಂತ 197.56 ಕೋಟಿ ರುಪಾಯಿ ಗಳಿಸಿತ್ತು. ಇನ್ನು 18ನೇ ದಿನಕ್ಕೆ ಚಿತ್ರ 200 ಕೋಟಿ ರುಪಾಯಿ ತಲುಪಿ ದಾಖಲೆ ಬರೆದಿದೆ. 
ಇನ್ನು ಅಮೆರಿಕದಲ್ಲಿ ಕೆಜಿಎಫ್ ಚಿತ್ರ ದೊಡ್ಡ ಸಾಧನೆ ಮಾಡಿದೆ. ಹೌದು ಅಮೆರಿಕದಲ್ಲಿ ಚಿತ್ರ 5.31 ಕೋಟಿ ರುಪಾಯಿ ಗಳಿಕೆ ಮಾಡಿದ್ದು ಕನ್ನಡ ಚಿತ್ರವೊಂದು ಅಮೆರಿಕದಲ್ಲಿ ಮಾಡಿದ ಅತೀ ಹೆಚ್ಚು ಕಲೆಕ್ಷನ್ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com