ಗಾಳಿಪಟ-2: ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಹಾಡಿನ ಚಿತ್ರೀಕರಣ ಆರಂಭ

ಪಂಚತಂತ್ರ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವ ಯೋಗರಾಜ್ ಭಟ್, ಗಾಳಿಪಟ-2 ಸಿನಿಮಾಗಾಗಿ ಹಾಡಿನ ಚಿತ್ರೀಕರಣ ಆರಂಭಿಸಿದ್ದಾರೆ.
ಗಾಳಿಪಟ-2 ಸಿನಿಮಾ ಹಾಡಿನ ರೆಕಾರ್ಡಿಂಗ್
ಗಾಳಿಪಟ-2 ಸಿನಿಮಾ ಹಾಡಿನ ರೆಕಾರ್ಡಿಂಗ್
ಬೆಂಗಳೂರು: ಪಂಚತಂತ್ರ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವ ಯೋಗರಾಜ್ ಭಟ್, ಗಾಳಿಪಟ-2 ಸಿನಿಮಾಗಾಗಿ ಹಾಡಿನ ಚಿತ್ರೀಕರಣ ಆರಂಭಿಸಿದ್ದಾರೆ.
ಶರಣ್, ಪವನ್ ಕುಮಾರ್ ಮತ್ತು ರಿಷಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ,ಅರ್ಜನ್ ಜನ್ಯ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಆರಂಭವಾಗಿದೆ, ನಿರ್ದೇಶಕ, ನಿರ್ಮಾಪಕ, ಮಹೇಶ್ ದಾನಣ್ಣನವರ್, ಸಾಹಿತಿ ಜಯಂತ್ ಕಾಯ್ಕಿಣಿ ಮತ್ತು ವಿಜಯ್ ಪ್ರಕಾಶ್ ಕಳೆದ ಎರಡು ದಿನಗಳಿಂದ ಮುಂಬಯಿಯಲ್ಲಿದ್ದಾರೆ,
ಹೊಸದಾಗಿ ಆರಂಭವಾಗಿರುವ ಅರ್ಜುನ್ ಜನ್ಯ ಅವರ ಸಂಗೀತ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಆರಂಭವಾಗಿದೆ, ಅವರು ಈಗಾಗಲೇ 5 ಹಾಡುಗಳ ಚಿತ್ರೀಕರಣ ನಡೆದಿದೆ, ಸಿನಿಮಾದಲ್ಲಿ 9 ಹಾಡುಗಳಿದ್ದು, 6 ಹಾಡುಗಳು ಪ್ರಮುಖವಾಗಿವೆ.
ಸೋನಾಲ್ ಮಾಂಟೇರಿಯೋ ಮತ್ತು ಶರ್ಮಿಳಾ ಮಾಂಡ್ರೆ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ, ಶರಣ್ ಗೆ ಚೈನೀಸ್ ಅಥವಾ ಕೊರಿಯನ್ ನಟಿಯನ್ನು ತರಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಗಾಳಿಪಟ ಸಿನಿಮಾ 2008ರಲ್ಲಿ ರಿಲೀಸ್ ಆಗಿತ್ತು, ಸಿನಿಮಾ ಶೂಟಿಂಗ್ ಶೀಘ್ರವೇ ಆರಂಭವಾಗಲಿದ್ದು, ಮಾರ್ಚ್ ತಿಂಗಳಿನಿಂದ ಬೆಂಗಳೂರು ಮತ್ತು ವಿದೇಶದಲ್ಲಿ ಶೂಟಿಂಗ್ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com